David Warner Six: ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹೊಡೆದ ಸಿಕ್ಸರ್ ಗೆ ಇಡೀ ಜಗತ್ತೇ ಬೆರಗಾಗಿದೆ, ವಾವ್ ಅಂದ ಫ್ಯಾನ್ಸ್.

ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ David Warner ಹೊಡೆದ ಸಿಕ್ಸರ್

Australia vs Pakistan 1st Test: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪರ್ತ್‌ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ಫಾರ್ಮ್ ಗೆ ಮರಳಿದ್ದಾರೆ. ಪರ್ತ್ ಟೆಸ್ಟ್ ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.125 ಎಸೆತಗಳಲ್ಲಿ 26ನೇ ಟೆಸ್ಟ್ ಶತಕ ಪೂರೈಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಆಸೀಸ್ ಎಡಗೈ ಓಪನರ್ ಡೇವಿಡ್ ವಾರ್ನರ್ ಅವರ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಹೌದು ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಹೊಡೆದ ಸಿಕ್ಸ್ ಗೆ ಜನರು ಅಪಾರ ಮೆಚ್ಚುಗೆಯನ್ನ ಹೊರಹಾಕಿದ್ದಾರೆ.

David Warner Latest News
Image Credit: Foxsports

ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹೊಡೆದ ಸಿಕ್ಸರ್ ಗೆ ಇಡೀ ಜಗತ್ತೇ ಬೆರಗಾಗಿದೆ
ಇನ್ನು 37 ರ ವರ್ಷದ ಕ್ರಿಕೆಟಿಗ ಅದ್ಧೂರಿ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ತಮ್ಮ ಆಟ ಇನ್ನೂ ಇದೆ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ಈ ಸರಣಿಯು ವಾರ್ನರ್ ಪಾಲಿಗೆ ಕೊನೆಯ ಟೆಸ್ಟ್ ಸರಣಿಯಾಗಿದೆ ಎಂದು ಕೆಲವು ವರದಿಗಳಿವೆ. ಇದು ಅಭಿಮಾನಿಗಳಿಗೂ ಗೊತ್ತು. 37 ವರ್ಷದ ಡೇವಿಡ್ ತಮ್ಮ ನಿವೃತ್ತಿಯ ಮಾತುಕತೆಗಳಿಂದ ದೂರವಿರಲು ಬಯಸುತ್ತಾನೆ. ಅದಕ್ಕೆ ಈ ಆಟವೇ ಸಾಕ್ಷಿ.

125 ಎಸೆತಗಳಲ್ಲಿ 100ರ ಗಡಿ ದಾಟಿದ ವಾರ್ನರ್ ಅವರ ಶತಕದ ಇನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಬೃಹತ್ ಸಿಕ್ಸರ್ ಕೂಡ ಸೇರಿದ್ದು ವಿಶೇಷ. ಆದರೆ ಆ ಸಿಕ್ಸರ್ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ನಂಬಲಾಗದ ಸ್ಕೂಪ್ ಸಿಕ್ಸರ್ ಹೊಡೆದು ಮೈದಾನದಲ್ಲಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಇದು ಎಂತಹ ಹೊಡೆತ ಎಂದು ಪ್ರೇಕ್ಷಕರೊಂದಿಗೆ ವ್ಯಾಖ್ಯಾನಕಾರರು ಮೂಕವಿಸ್ಮಿತರಾದರು.

Australia vs Pakistan 1st Test
Image Credit: India Today

ಮೊದಲ ಸೆಷನ್ ನಲ್ಲಿ ಪಾಕಿಸ್ತಾನ ಬೌಲರ್ ಗಳಿಗೆ ಬೆಂಡೆತ್ತಿದ ವಾರ್ನರ್, ಟೆಸ್ಟ್ ನಲ್ಲೂ ಆಕ್ರಮಣಕಾರಿಯಾಗಿ ಆಡಿದರು. ಮತ್ತೊಂದೆಡೆ ಪಾಕ್ ಬೌಲರ್ಸ್ ವಿಕೆಟ್ ಪಡೆಯಲು ಪರದಾಡಿದರು. ಈ ಸಂದರ್ಭದಲ್ಲಿ ವಾರ್ನರ್ ಫೈನ್ ಲೆಗ್ ನಟ್ಟ ಮೈದಾನದ 2 ಈ ಸ್ಟಾಂಡ್ ಗೆ ಚೆಂಡನ್ನು ಲ್ಯಾಂಡ್ ಮಾಡಿದರು ಮಾರಕ ವೇಗಿ ಶಾಹಿನ್ ಅಫ್ರಿದಿ ಬೌಲಿಂಗ್ ನಲ್ಲಿ ಸ್ಕೂಪ್ ಮೂಲಕ ಭರ್ಜರಿ ಸಿಕ್ಸರ್ ಸಿಡಿಸಿದರು. ಈ ಶಾಟ್ ಕಂಡು ಅಫ್ರಿದಿ ಒಂದು ಕ್ಷಣ ಅಚ್ಚರಿಗೊಳಗಾದರು.

Join Nadunudi News WhatsApp Group

Join Nadunudi News WhatsApp Group