Avera Retrosa EV: ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ 140 Km ಮೈಲೇಜ್ ಕೊಡುವ ಈ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ಬೆಲೆ

ಭರ್ಜರಿ 140km ಮೈಲೇಜ್ ನೀಡುವ ಈ ಸ್ಕೂಟರ್ ಮಾರುಕಟ್ಟೆ ಬೆಲೆ ಎಷ್ಟು..?

Avera Retrosa Electric Scooter: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳು ಪರಿಚಯವಾಗಿದೆ. ಗ್ರಾಹಕರ ಆಯ್ಕೆಗೆ ತಕ್ಕಂತೆ ಹೆಚ್ಚು ಬಜೆಟ್ ಹೊಂದಿರುವ ಹಾಗೂ ಕಡಿಮೆ ಬಜೆಟ್ ನ ಸ್ಕೂಟರ್ ಗಳು ಸಾಕಷ್ಟಿವೆ. ಸದ್ಯ ಮಾರುಕಟ್ಟೆಯಲ್ಲಂತೂ ಎಲೆಕ್ಟ್ರಿಕ್ ಸ್ಕೂಟರ್ ಗಳ ಆಯ್ಕೆಗೆ ಕೊರತೆಯಿಲ್ಲ ಎನ್ನಬಹುದು.

ಕಚ್ಚಾ ತೈಲಗಳ ಬೆಲೆಯ ಏರಿಕೆಯಿಂದಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಎಳ್ಳೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚುತ್ತಿದ್ದ ಸಮಯದಲ್ಲಿಯೇ ಇದೀಗ ಹೊಸ EV ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ EV ಹೆಚ್ಚಿನ ಮೈಲೇಜ್ ಜೊತೆಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಲಿರುವುದು ವಿಶೇಷವಾಗಿದೆ.

Avera Retrosa Electric Scooter
Image Credit: Retroev

Avera Retrosa Electric Scooter
Avera Retrosa Electric Scooter ನಲ್ಲಿ ಕಂಪನಿಯು ಹಲವು ಆಧುನಿಕ ವೈಶಿಷ್ಟ್ಯಗಳನ್ನು ನೀಡಿದ್ದು, ಲಾಂಗ್ ಡ್ರೈವ್ ಶ್ರೇಣಿಯನ್ನು ನೀಡಿದೆ. ನೀವು ಹೊಸ ಸ್ಕೂಟರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ Avera Retrosa Electric Scooter ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಅವೆರಾ ರೆಟ್ರೋಸಾ ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ ನೀವು 3.4 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

ಇದರೊಂದಿಗೆ ಕಂಪನಿಯು ಉತ್ತಮ ವಿದ್ಯುತ್ ಉತ್ಪಾದನೆಗಾಗಿ BLDC ತಂತ್ರಜ್ಞಾನದ ಆಧಾರದ ಮೇಲೆ 4800 ವ್ಯಾಟ್ ವಿದ್ಯುತ್ ಮೋಟರ್ ಅನ್ನು ಬಳಸಿದೆ. ನೀವು Avera Retrosa Electric Scooter ನ ಬ್ಯಾಟರಿ ಪ್ಯಾಕ್ ಅನ್ನು ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ 3 ರಿಂದ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 140 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ.

Avera Retrosa Electric Scooter Price In India
Image Credit: Justdial

ಭರ್ಜರಿ 140km ಮೈಲೇಜ್ ನೀಡುವ ಈ ಸ್ಕೂಟರ್ ಮಾರುಕಟ್ಟೆ ಬೆಲೆ ಎಷ್ಟು..?
ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 88,900 ರೂ. ಇದ್ದು, ಟಾಪ್ ವೇರಿಯಂಟ್‌ ಗೆ ರೂ. 1.28 ಲಕ್ಷ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ ನೀವು ಗಂಟೆಗೆ 90 ಕಿಲೋಮೀಟರ್ ವೇಗವನ್ನು ಪಡೆಯುತ್ತೀರಿ. ಇದರಲ್ಲಿ ನೀವು ಉತ್ತಮ ಬ್ರೇಕಿಂಗ್‌ ಗಾಗಿ ಮುಂಭಾಗ ಮತ್ತು ಹಿಂದಿನ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳ ಸಂಯೋಜನೆಯನ್ನು ನೋಡಬಹುದು.

Join Nadunudi News WhatsApp Group

ಇನ್ನು ಈ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮಾದರಿಯ ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಟ್ಯೂಬ್ ಸಸ್ಪೆನ್ಷನ್ ಸಿಸ್ಟಮ್ ನೊಂದಿಗೆ ಡಬಲ್ ಶಾಕರ್ ಅನ್ನು ಹೊಂದಿದೆ. ಡಿಜಿಟಲ್ ಟ್ರಿಪ್ ಮೀಟರ್, ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಪುಶ್ ಬಟನ್ ಸ್ಟಾರ್ಟ್, ಎಲ್ಇಡಿ ಹೆಡ್ಲೈಟ್, ಎಲ್ಇಡಿ ಟೈಲ್ಲೈಟ್, ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್ ಮತ್ತು ರಿವರ್ಸ್ ಅಸಿಸ್ಟ್ ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ.

Join Nadunudi News WhatsApp Group