Awas Yojana 2024: ಹೊಸ ಮನೆ ಕಟ್ಟುವವರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 30 ಲಕ್ಷ, ಯೋಜನೆಯಲ್ಲಿ ಬದಲಾವಣೆ

ಹೊಸ ಮನೆ ಕಟ್ಟುವವರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 30 ಲಕ್ಷ

Pradhan Mantri Awas Yojana 2024: ಮನೆ ಕಟ್ಟಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಬಡವರು ಕೂಡ ಸ್ವತಃ ಸೂರು ಹೊಂದ ಬೇಕು ಅನ್ನೋ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಸದ್ಯ ದೇಶದಲ್ಲಿ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಲೋಕಸಭಾ ಚುನಾವಣೆಯ ಹೊತ್ತಲ್ಲಿ ಮತ್ತಷ್ಟು ಗ್ಯಾರಂಟಿ ಘೋಷಣೆ ಮಾಡಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ PMAY ಅನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ.

Pradhan Mantri Awas Yojana 2024
Image Credit: Pm Modi Yojana

ಹೊಸ ಮನೆ ಕಟ್ಟುವವರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 30 ಲಕ್ಷ
ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಸಬ್ಸಿಡಿಯ ವ್ಯಾಪ್ತಿ ಮತ್ತು ಗಾತ್ರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ. ವಸತಿ ಯೋಜನೆಯಡಿ ನೀಡಲಾಗುವ ಸಬ್ಸಿಡಿ ಸಾಲವನ್ನು ಮನೆಯ ಬೆಲೆ ಮತ್ತು ಗಾತ್ರಕ್ಕೆ ಅನುಗುಣವಾಗಿ ನಿರ್ಧರಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಖರೀದಿದಾರರಿಗೆ 35 ಲಕ್ಷ ರೂಪಾಯಿ ವೆಚ್ಚದ ಮನೆಗೆ ಸಬ್ಸಿಡಿ ಸಾಲವನ್ನು 30 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಮನೆ ಖರೀದಿದಾರರು 20 ವರ್ಷಗಳ ಅವಧಿಯಲ್ಲಿ ಗರಿಷ್ಠ 2.67 ಲಕ್ಷ ರೂಪಾಯಿಗಳನ್ನು ಬಡ್ಡಿ ವೆಚ್ಚದಲ್ಲಿ ಉಳಿಸಬಹುದು. 20 ವರ್ಷಗಳ ಯೋಜನೆಯು ಗೃಹ ಸಾಲಗಳಿಗೆ ದೀರ್ಘಾವಧಿಯ ಅವಧಿಯನ್ನು ಹೊಂದಿದೆ. ಈ ಕೈಗೆಟುಕುವ ಮನೆಗಳ ಗರಿಷ್ಠ ಗಾತ್ರ 200 ಚದರ ಮೀಟರ್. ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಲ್ಲಿ 35 ಲಕ್ಷ ರೂ.ವರೆಗಿನ ಮನೆ ಖರೀದಿದಾರರು 30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದು ಎಂದು ಪ್ರಸ್ತಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ, ಜನರು ತಮ್ಮ ವಾರ್ಷಿಕ ಆದಾಯವು 18 ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ ಗರಿಷ್ಠ 12 ಲಕ್ಷ ರೂಪಾಯಿಗಳನ್ನು ಗೃಹ ಸಾಲವಾಗಿ ಪಡೆಯಬಹುದು.

Pradhan Mantri Awas Yojana Latest Update
Image Credit: ABP Live

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು…?
•ಆಧಾರ್ ಕಾರ್ಡ್
•ಬ್ಯಾಂಕ್ ಖಾತೆ
•ಮೊಬೈಲ್ ನಂಬರ
•ಸ್ವಚ್ಛ ಭಾರತ್ ಮಿಷನ್ ನೋಂದಣಿ ಸಂಖ್ಯೆ
•ಜಾಬ್ ಕಾರ್ಡ್ ಫೋಟೋ
•ಆದಾಯ ಪ್ರಮಾಣಪತ್ರ
•ಪಾಸ್ ಪೋರ್ಟ್

Join Nadunudi News WhatsApp Group

Pradhan Mantri Awas Yojana Update
Image Credit: Patrika

ಅರ್ಹತೆ…?
*ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
*ಭಾರತದ ನಿವಾಸಿ ಆಗಿರಬೇಕು
*ಶಾಶ್ವತ ನಿವಾಸವನ್ನು ಹೊಂದಿರಬೇಕು
*ವಾರ್ಷಿಕ ಆದಾಯ 3 ಲಕ್ಷ ದಿಂದ 6 ಲಕ್ಷದ ನಡುವೆ ಇರಬೇಕು
*BPL ಕಾರ್ಡ್ ದಾರರಾಗಿರಬೇಕು.

ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಜನಸೇವಾ ಕೇಂದ್ರ, ಗ್ರಾಮ ಸೇವಕ, PM ಆವಾಸ್‌ ಯೋಜನೆಯ ಸಹಾಯಕರ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಅಥವಾ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಪಿಎಂ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ 2024 ರ ಅರ್ಜಿ ಸಲ್ಲಿಕೆಯ ಆನ್ಲೈನ್ ಫಾರ್ಮ್ ಇನ್ನು ಬಿಡುಗಡೆ ಮಾಡಿಲ್ಲ.

Pradhan Mantri Awas Yojana Apply
Image Credit: Naidunia

Join Nadunudi News WhatsApp Group