Awas Home: ಈ ವರ್ಷ ಇಂತಹ ಜನರಿಗೆ ಸಿಗಲಿದೆ ಆವಾಸ್ ಯೋಜನೆಯ ಮನೆ, ಅರ್ಹರ ಪಟ್ಟಿ ಈ ರೀತಿಯಂತಿದೆ.

ಈ ವರ್ಷ ಇಂತಹ ಕುಟುಂಬಗಳಿಗೆ ಸಿಗಲಿದೆ ಆವಾಸ್ ಯೋಜನೆಯ ಮನೆ

Pradhan Mantri Awas Yojana Status Check: ದೇಶದ ಜನತೆಯ ಸ್ವಂತ ಮನೆ ನಿರ್ಮಾಣದ ಕನಸಿಗೆ Pradhan Mantri Awas ಯೋಜನೆ ಸಹಾಯವಾಗಲಿದೆ. ಆರ್ಥಿಕವಾಗಿ ಹಿಂದುಳಿದ, ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ ಜನರಿಗೆ ಈ PM ಆವಾಸ್ ಯೋಜನೆಯ ಲಾಭ ಸಿಗಲಿದೆ. ಕೇಂದ್ರದ ಮೋದಿ ಸರ್ಕಾರವು ಈಗಾಗಲೇ Pradhan Mantri Awas ಯೋಜನೆಯ ಅಡಿಯಲ್ಲಿ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು ಈಗಾಗಲೇ 75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ದೇಶದ ಬಡ ಜನರು ಅರ್ಜಿ ಸಲ್ಲಿಸುವ ಮೂಲಕ ಮನೆ ನಿರ್ಮಾಣಕ್ಕೆ ಹಣವನ್ನು ಪಡೆದುಕೊಳ್ಳಬಹುದು. ಸದ್ಯ ಸರ್ಕಾರ PMAY ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಸರ್ಕಾರ ಬಿಡುಗಡೆ ಮಾಡಿದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ..? ಎನ್ನುವುದು ಪರಿಶೀಲಿಸಿಕೊಳ್ಳಿ.

 

PMAY ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ..? ಪರಿಶೀಲಿಸಿಕೊಳ್ಳಿ
•ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಪೋರ್ಟಲ್‌ pmaymis.gov.in ಗೆ ಭೇಟಿ ನೀಡಬೇಕು.

•ಇದರ ನಂತರ ನೀವು ಮುಖಪುಟದಲ್ಲಿ ಹುಡುಕಾಟ ಫಲಾನುಭವಿಯನ್ನು ಆಯ್ಕೆ ಮಾಡಬೇಕು.

Join Nadunudi News WhatsApp Group

•ಈಗ ನೀವು ಹೊಸ ಟ್ಯಾಬ್‌ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

•ಇದರ ನಂತರ ನೀವು Send OTP ಅನ್ನು ಕ್ಲಿಕ್ ಮಾಡಬೇಕು.

•ನೀವು ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

•ಈಗ ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತೋರಿಸಲಾಗುತ್ತದೆ.

•ನೀವು ಈ ಪಟ್ಟಿಯನ್ನು ಡೌನ್‌ ಲೋಡ್ ಮಾಡಿಕೊಂಡು ಸುಲಭವಾಗಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

 

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ
*pmaymis.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

*ಅಲ್ಲಿ ಸಿಟಿಜನ್ ಅಸೆಸ್ಮೆಂಟ್ ಆಯ್ಕೆಯನ್ನು ಆರಿಸಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿಮಾಡಿ ಚೆಕ್ ಮೇಲೆ ಕ್ಲಿಕ್ ಮಾಡಬೇಕು.

*ನಂತರ ಆನ್ಲೈನ್ ಫಾರ್ಮ್ ತೆರೆಯುತ್ತದೆ.

*ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿಮಾಡಿ, ಅರ್ಜಿಯನ್ನು ಸಲ್ಲಿಸಬೇಕು.

*ಅರ್ಜಿ ಸಲ್ಲಿಕೆಯ ನಂತರ ಅಲ್ಲಿ ಅಪ್ಲಿಕೇಶನ್ ಸಂಖ್ಯೆ ಕಾಣಿಸುತ್ತದೆ. ಈ ಮೂಲಕ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 

ಈ ದಾಖಲೆ ಇದ್ದರೆ ಮಾತ್ರ PMAY ಅರ್ಜಿ ಸಲ್ಲಿಕೆ ಸಾಧ್ಯ
ಆಧಾರ್ ಕಾರ್ಡ್
ಅರ್ಜಿದಾರರ ID ಪುರಾವೆ
ಅರ್ಜಿದಾರರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡಿರಬೇಕು.
ಮೊಬೈಲ್ ನಂಬರ್
ಪಾಸ್ಪೋರ್ಟ್ ಗಾತ್ರದ ಫೋಟೋ

Join Nadunudi News WhatsApp Group