Credit Card: ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ರಾತ್ರೋರಾತ್ರಿ ಬ್ಯಾಂಕ್ ಹೊಸ ಘೋಷಣೆ.

ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರಿಗೆ ಅಗತ್ಯ ಮಾಹಿತಿ.

Axis Bank Credit Card: ಕ್ರೆಡಿಟ್ ಕಾರ್ಡ್ ಅನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ಬಳಸುತ್ತಾರೆ. ಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಇದೀಗ ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ.

ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಹೊಸ ಮಾಹಿತಿ
ಆಕ್ಸಿಸ್ ಬ್ಯಾಂಕ್(Axis Bank) ಗ್ರಾಹಕರಿಗೆ ಹೊಸ ಸುದ್ದಿ ಒಂದು ಹೊರ ಬಿದಿದ್ದು ನೀವು ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್(Credit Card) ಬಳಸುತ್ತಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ.

Axis Bank credit card latest news
Image Credit: Cardmaven

ಆಕ್ಸಿಸ್ ಬ್ಯಾಂಕ್ ನ ಅನೇಕ ಗ್ರಾಹಕರು ಜುಲೈ 21 2023 ರಂದು ಬ್ಯಾಂಕ್ ನಿಂದ ಇಮೇಲ್ ಅನ್ನು ಸ್ವೀಕರಿಸಿದ್ದಾರೆ. ಬ್ಯಾಂಕ್ ತಮ್ಮ ರಿವಾರ್ಡ್ ಪಾಯಿಂಟ್ ಗಳ ರಿಡೆಂಪ್ಶನ್ ಅನ್ನು ತಡೆಹಿಡಿದಿದೆ ಎಂದು ಅದು ಹೇಳುತ್ತದೆ. ಬ್ಯಾಂಕ್ ನ ಈ ನಿರ್ಧಾರದ ವಿರುದ್ಧ ಅನೇಕ ಬಳಕೆದಾರರು ಸಾಮಾಜಿಕ ಮಾಧ್ಯಮ ವೇಧಿಕೆ ಟ್ವಿಟ್ಟರ್ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್(Axis Bank Credit Card)
ಗ್ರಾಹಕರಿಗೆ ಕಳುಹಿಸಲಾದ ಇಮೇಲ್ ನ ನಕಲನ್ನು ಮನಿಕಂಟ್ರೊಲ್ ನೋಡಿದೆ. ಮೇಲ್ ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ನ ವಯಕ್ತಿಕವಲ್ಲದ ಬಳಕೆಯನ್ನು ನೋಡಲಾಗಿದೆ ಎಂದು ಬ್ಯಾಂಕ್ ನಿಂದ ಹೇಳಲಾಗಿದೆ. ಕೆಲವು ವ್ಯಾಪಾರಿಗಳ ಹೆಸರನ್ನು ಬ್ಯಾಂಕ್ ಉಲ್ಲೇಖಿಸಿದೆ. ನೀತಿಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಅನ್ನು ವಯಕ್ತಿಕ ವೆಚ್ಚಗಳಿಗೆ ಮಾತ್ರ ಬಳಸಬಹುದು ಎಂದು ಬ್ಯಾಂಕ್ ಹೇಳಿದೆ.

ಆಕ್ಸಿಸ್ ಬ್ಯಾಂಕ್ ಸದಸ್ಯ ಒಪ್ಪಂದದ ಅಡಿಯಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಸೇರಿದಂತೆ ಎಲ್ಲಾ ಇತರ ಬಳಕೆಗಳನ್ನು ನಿಷೇಧಿಸಲಾಗಿದೆ. ಮೇಲ್ ಪ್ರಕಾರ ಬಳಕೆದಾರರು ರಿವಾರ್ಡ್ ಪಾಯಿಂಟ್ ಗಳನ್ನೂ ಗಳಿಸಲು ಅನಧಿಕೃತ ವೆಚ್ಚಗಳಿಗಾಗಿ ಕಾರ್ಡ್ ಅನ್ನು ಬಳಸುತ್ತಿದ್ದಾರೆ ಎಂದು ಬ್ಯಾಂಕ್ ಕಂಡುಹಿಡಿದೆ.

Join Nadunudi News WhatsApp Group

New information for Axis Bank customers
Image Credit: Livemint

ಕಾರ್ಡ್ ಇನ್ ಸೈಡರ್ ನ ಸಹ-ಸಂಸ್ಥಾಅಪಕ ಮತ್ತು ಸಿಟಿ ಓ ಮಿತ್ತಲ್, ಕೆಲವು ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್ ಗಳ ವಿಮೋಚನೆಯನ್ನು ನಿಲ್ಲಿಸುವ ಬ್ಯಾಂಕ್ ನ ನಿರ್ಧಾರವು ರಿವಾರ್ಡ್ ಕಾರ್ಯಕ್ರಮದ ಸುಸ್ಥಿರತೆಗೆ ಸರಿಯಾದ ಹೆಜ್ಜೆಯಾಗಿದೆ ಎಂದು ಹೇಳಿದರು. ವೈಯಕ್ತಿಕ ಕಾರ್ಡ್ ಗಳ ಮೇಲಿನ ವ್ಯಾಪಾರದ ಖರ್ಚುಗಳನ್ನು ನಿರ್ಬಂಧಿಸುವಾಗ ನಿಜವಾದ ಬಳಕೆದಾರರು ಬಹುಮಾನಗಳ ಪ್ರಯೋಜನಗಳನ್ನು ಪಡೆಯುವುದುದನ್ನು ಮುಂದುವರೆಸುವುದನ್ನು ಖಚಿತಪಡಿಸಿಕೊಳ್ಳಲು ಆಕ್ಸಿಸ್ ಬ್ಯಾಂಕ್ ಪ್ರಯತ್ನಿಸಿದೆ ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group