Ayodhya: ಅಯೋಧ್ಯಾ ರಾಮನ ದರ್ಶನ ಮಾಡುವವರಿಗೆ Paytm ನಿಂದ ಭರ್ಜರಿ ಆಫರ್, Paytm ಬಳಸುವವರಿಗೆ ಸಿಹಿಸುದ್ದಿ

ಶ್ರೀರಾಮನ ದರ್ಶನ ಪಡೆಯುವ ಇಚ್ಛೆ ಇರುವವರು ಈ ಸುದ್ದಿ ತಿಳಿಯಿರಿ, Paytm ನಿಂದ ಭರ್ಜರಿ ಆಫರ್ ನಿಮಗಾಗಿ

Ayodhya Bus, Flight Booking: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಆದ ತರುವಾಯ ಒಂದು ದಿನಕ್ಕೆ ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಈಗ ಅಯೋದ್ಯೆಗೆ ಹೋಗ ಬಯಸುವವರಿಗೆ ಸುವರ್ಣ ಅವಕಾಶ ಒಂದಿದೆ. ಪೇಟಿಎಂ (Paytm) ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಭಕ್ತರಿಗೆ ಭರ್ಜರಿ ಆಫರ್ ಪ್ರಕಟಿಸಿದೆ.

ಈಗ ನೀವು ಅಯೋಧ್ಯೆಗೆ ತೆರಳಲು ವಿಮಾನ ಅಥವಾ ಬಸ್ ಟಿಕೆಟ್ ಅನ್ನು ಬುಕ್ ಮಾಡಿ ಮತ್ತು ನಿಮ್ಮ ಸಂಪೂರ್ಣ ಹಣವನ್ನು ಮರಳಿ ಪಡೆಯಬಹುದು. Paytm ನ ಈ ವಿಶೇಷ ಕೊಡುಗೆಯಲ್ಲಿ, ನೀವು ಬಸ್ ಮತ್ತು ಫ್ಲೈಟ್ ಬುಕಿಂಗ್‌ನಲ್ಲಿ 100% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಯೋಧ್ಯೆಗೆ ಭೇಟಿ ನೀಡುವ ಭಕ್ತರು ಪೇಟಿಎಂ ಅಪ್ಲಿಕೇಶನ್‌ನಲ್ಲಿ ಬಸ್ ಬುಕ್ಕಿಂಗ್‌ಗಾಗಿ ‘BUSAYODYA’ ಮತ್ತು ಫ್ಲೈಟ್ ಬುಕಿಂಗ್‌ಗಾಗಿ ‘FLYAYODYA’ ಎಂಬ ಪ್ರೋಮೋ ಕೋಡ್ ಅನ್ನು ಬಳಸಿಕೊಂಡು ಈ ಕೊಡುಗೆಯನ್ನು ಪಡೆಯಬಹುದಾಗಿದೆ.

Paytm announces bumper cashback for Ayodhya bus, flight bookings
Image Credit: Businesstoday

ಪೇಟಿಎಂ ನಿಂದ ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯ

ಪೇಟಿಎಂ (Paytm)ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿ ಹತ್ತನೇ ಪ್ರಯಾಣಿಕರು ಈ ಅದ್ಭುತ ಕ್ಯಾಶ್‌ಬ್ಯಾಕ್ ಆಫರ್‌ಗೆ ಅರ್ಹರಾಗುತ್ತಾರೆ. ಬಸ್ ಪ್ರಯಾಣದಲ್ಲಿ ಪ್ರಯಾಣಿಕರಿಗೆ 1,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯವಿದೆ. ಇದೇ ವೇಳೆ ಫ್ಲೈಟ್‌ ಟಿಕೆಟ್‌ಗಳ ಬುಕ್ಕಿಂಗ್ ಮೇಲೆ 5,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಪೇಟಿಎಂ ವಕ್ತಾರರು, ‘ಮೊಬೈಲ್ ಪಾವತಿ ಮತ್ತು ಕ್ಯೂಆರ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ಈ ವಿಶೇಷ ಕೊಡುಗೆಯನ್ನು ಪರಿಚಯಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಬಸ್ ಮತ್ತು ಫ್ಲೈಟ್ ಬುಕ್ಕಿಂಗ್‌ಗಳಲ್ಲಿ 100% ಕ್ಯಾಶ್‌ಬ್ಯಾಕ್ ಸೇರಿದಂತೆ ನಮ್ಮ ವಿಶೇಷ ಕೊಡುಗೆಗಳ ಮೂಲಕ ಅಯೋಧ್ಯೆಗೆ ಸುಗಮ ಪ್ರಯಾಣವನ್ನು ಹೊಂದಲು ಬಳಕೆದಾರರಿಗೆ ಸಹಾಯ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Nadunudi News WhatsApp Group

Ayodhya Bus, Flight Booking
Image Credit: India

ಟಿಕೆಟ್ ರದ್ದತಿಗೆ ಶುಲ್ಕ ಪಾವತಿ ಮಾಡಬೇಕಾಗಿಲ್ಲ

ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡಿ ಅನಿವಾರ್ಯ ಕಾರಣಗಳಿಂದಾಗಿ ಅಯೋಧ್ಯೆಗೆ ಪ್ರವಾಸ ರದ್ದುಗೊಳಿಸಬೇಕಾದರೆ, ಆಗಲೂ ಕೂಡ ಚಿಂತಿಸುವ ಅಗತ್ಯವಿಲ್ಲ. ಪೇಟಿಎಂ ‘ಫ್ರೀ ಕ್ಯಾನ್ಸಲೇಷನ್’ ಸೌಲಭ್ಯವನ್ನು ಕೂಡ ಒದಗಿಸುತ್ತಿದೆ. ನೀವು ಯಾವುದೇ ಪ್ರಶ್ನೆಗಳಿಲ್ಲದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 100% ಹಣವನ್ನು ಮರಳಿ ಪಡೆಯಬಹುದು ಎಂದು ಕಂಪನಿ ಹೇಳಿದೆ. ಇದಲ್ಲದೆ ಪೇಟಿಎಂ ಲೈವ್ ಬಸ್ ಟ್ರ್ಯಾಕಿಂಗ್ ಸೇವೆಯನ್ನು ಸಹ ನೀಡುತ್ತಿದೆ. ಅದರ ಮೂಲಕ ನೀವು ಬುಕ್ ಮಾಡಿದ ಬಸ್‌ನ ನೈಜ-ಸಮಯದ ಸ್ಥಳವನ್ನು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.

Join Nadunudi News WhatsApp Group