Ayodhya Flight Travel: ಅಯೋದ್ಯೆಗೆ ಹೋಗಲು ಇದು ಬೆಸ್ಟ್ ಟೈಮ್, ವಿಮಾನ ದರ ಕೇವಲ 1622 ರೂಪಾಯಿ ಮಾತ್ರ

ಬೆಂಗಳೂರಿನಿಂದ ಅಯೋದ್ಯೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಲಭ್ಯ.

Ayodhya Flight Travel Update: ಜನವರಿ 22 ಸೋಮವಾರದಂದು ಅಯೋದ್ಯೆಯಲ್ಲಿ ಶ್ರೀರಾಮ (Ayodhya Ram) ಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಿದೆ. ಕೋಟ್ಯಾಂತರ ಭಕ್ತರು ಭಗವಾನ್ ರಾಮನ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ.

ಇನ್ನು ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಜನವರಿ 23 ರಿಂದ ಸರ್ವಾಹಜನಿಕರಿಗೆ ದರ್ಶನದ ಅವಕಾಶವನ್ನು ಮಾಡಿಕೊಟ್ಟಿದೆ. ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಂತೆ ಲಕ್ಷಾಂತರ ಭಕ್ತರು ರಾಮನನ್ನು ಕಾಣಲು ಧಾವಿಸಿದ್ದರು. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ದರ್ಶನ ಪಡೆದ ಹೆಗ್ಗಳಿಕೆ ಶ್ರೀರಾಮ ಪಡೆದುಕೊಂಡಿದ್ದಾರೆ.

Ayodhya Ram Mandir Latest News Updates
Image Credit: NDTV

ಬೆಂಗಳೂರಿನಿಂದ ಅಯೋದ್ಯೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಲಭ್ಯ
ಕೇವಲ ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಶ್ರೀರಾಮನ ದರ್ಶನವನ್ನು ಮಾಡಿರುವುದು ವಿಶೇಷ. ಇನ್ನು ಕೂಡ ಅದೆಷ್ಟೋ ಭಕ್ತರು ಶ್ರೀರಾಮನ ದರ್ಶನವನ್ನು ಮಾಡಲು ಕಾಯುತ್ತಿದ್ದಾರೆ. ಇದೀಗ ಅಯೋದ್ಯೆಯ ರಾಮನ ದರ್ಶನ ಮಾಡಲು ಒಂದೊಳ್ಳೆ ಅವಕಾಶ ಬಂದೊದಗಿದೆ.

ಈಗಾಗಲೇ ಸಾಕಷ್ಟು ಜನರು ಅಯೋದ್ಯೆಗೆ ಪ್ರಯಾಣ ಮಾಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಅಯೋದ್ಯೆಯ ಪ್ರಯಾಣಕ್ಕಾಗಿ ಕೆಲವು ಪ್ರಮುಖ ಪ್ರದೇಶಗಳಿಂದ ರೈಲು ಮತ್ತು ವಿಮಾನ ಪ್ರಯಾಣವನ್ನು ಕಲ್ಪಿಸಿಕೊಡಲಾಗಿದೆ. ಅತಿ ಕಡಿಮೆ ಸಮಯದಲ್ಲಿ ಅಯೋದ್ಯೆಯನ್ನು ತಲುಪಲು ಜನರು ಹೆಚ್ಚಾಗಿ ವಿಮಾನ ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಇದೀಗ ಬೆಂಗಳೂರಿನಿಂದ ಅಯೋದ್ಯೆಗೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಲಭ್ಯವಾಗಲಿದೆ.

Ayodhya Flight Travel Update
Image Credit: NDTV

ಕೇವಲ ರೂ. 1622 ರೂ. ನಲ್ಲಿ ಶ್ರೀರಾಮನ ದರ್ಶನ ಪಡೆಯಬಹುದು
ಅಯೋಧ್ಯೆಗೆ ತಡೆರಹಿತ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ವಿಮಾನ ಟಿಕೆಟ್ ದರಗಳು ರೂ. 1622 ರಿಂದ ಪ್ರಾರಂಭವಾಗುತ್ತದೆ. ಈ ಕೊಡುಗೆಯು ಸೆಪ್ಟೆಂಬರ್ 30 2024 ರ ವರೆಗೆ ಮುಂದುವರಿಯುತ್ತದೆ. ಅಲ್ಲದೆ, ಸ್ಪೈಸ್‌ ಜೆಟ್ ವೆಬ್‌ ಸೈಟ್ ಪ್ರಕಾರ, ಉಚಿತ ದಿನಾಂಕ ಬದಲಾವಣೆಯ ಕೊಡುಗೆಯೊಂದಿಗೆ ನಿಮ್ಮ ಪ್ರಯಾಣದ ದಿನಾಂಕವನ್ನು ನೀವು ಅನುಕೂಲಕರವಾಗಿ ಬದಲಾಯಿಸಬಹುದು.

Join Nadunudi News WhatsApp Group

ಫೆಬ್ರವರಿ 1 2024 ರಿಂದ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಅಯೋಧ್ಯೆಗೆ ಹೆಚ್ಚುವರಿ ವಿಮಾನ ಮಾರ್ಗಗಳನ್ನು ತೆರೆಯುವುದಾಗಿ ಸ್ಪೈಸ್‌ ಜೆಟ್ ಘೋಷಿಸಿದೆ. ಪ್ರಸ್ತುತ, ಚೆನ್ನೈ, ಅಹಮದಾಬಾದ್, ದೆಹಲಿ, ಮುಂಬೈ, ಬೆಂಗಳೂರು, ಜೈಪುರ, ಪಾಟ್ನಾ ಮತ್ತು ದರ್ಭಾಂಗದಿಂದ ಅಯೋಧ್ಯೆಗೆ ಜನವರಿ 22 ರಿಂದ ವಿಮಾನಗಳು ಪ್ರಾರಂಭವಾಗಲಿವೆ. . ಈ ವಿಶೇಷ ಕೊಡುಗೆಯು ಅಯೋಧ್ಯೆಗೆ ಮತ್ತು ಅಲ್ಲಿಂದ ಹೊರಡುವ ಆಯ್ದ ಹೊಸ ವಿಮಾನಗಳನ್ನು ಸಹ ಒಳಗೊಂಡಿದೆ ಎಂದು ತಿಳಿದಿದೆ.

Join Nadunudi News WhatsApp Group