Ayodhya Hotel Bill: ಅಯೋದ್ಯೆಯಲ್ಲಿ ದುಬಾರಿಯಾದ ಕಾಫಿ ಮತ್ತು ಟೋಸ್ಟ್ ಬೆಲೆ, ಬೇಸರ ವ್ಯಕ್ತಪಡಿಸಿದ ಭಕ್ತರು.

ಅಯೋಧ್ಯಾ ರಾಮ ಮಂದಿರದ ಬಳಿ ಹೋಟೆಲ್ ಬಿಲ್ ನೋಡಿ ಬೇಸರ ಹೊರಹಾಕಿದ ಜನರು

Ayodhya Hotel Bill Viral: ಸದ್ಯ ಅಯೋದ್ಯೆಯ ರಾಮ ಮಂದಿರ ಸಾಕಷ್ಟು ವೈರಲ್ (Viral) ಆಗುತ್ತಿದೆ. ಶ್ರೀರಾಮ ಜನಮಭೂಮಿ ಟ್ರಸ್ಟ್ ಈಗಾಗಲೇ ಸಾರ್ವಜನಿಕರಿಗೆ ದರ್ಶನವನು ಕಲ್ಪಿಸಿಕೊಟ್ಟಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಅಯೋಧ್ಯ ರಾಮನನ್ನು ಕಾಣಲು ಧಾವಿಸುತ್ತಿದ್ದಾರೆ. ಅಯೋದ್ಯೆಗೆ ದಾಖಲೆಯ ಮಟ್ಟದಲ್ಲಿ ಭಕ್ತರ ಆಗಮನವಾಗುತ್ತಿದೆ. ಸದ್ಯ ಅಯೋಧ್ಯ ರಾಮ ಮಂದಿರದ ಜೊತೆಗೆ ಅಯೋದ್ಯೆಯ ಹೋಟೆಲ್ ಬಿಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Ayodhya Hotel Bill Virul
Image Credit: Indian Express

ಅಯೋದ್ಯೆಯಲ್ಲಿ ದುಬಾರಿಯಾದ ಕಾಫಿ ಮತ್ತು ಟೋಸ್ಟ್ ಬೆಲೆ
ಅಯೋದ್ಯೆಗೆ ಪ್ರಯಾಣ ಮಾಡುವರ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ರಾಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಅಯೋದ್ಯೆಗೆ ಆಗಮಿಸುತ್ತಿದ್ದಾರೆ. ಇನ್ನು ರಾಮನನ್ನು ನೋಡಲು ಹೋಗುವ ಭಕ್ತರು ಸಾಮಾನ್ಯವಾಗಿ ಊಟ ತಿಂಡಿಗಾಗ ಹೋಟೆಲ್ ಗೆ ಹೋಗಬೇಕಾಗುತ್ತದೆ. ಇದೀಗ ಅಯೋದ್ಯೆಗೆ ಭೇಟಿ ನೀಡಿದ ವ್ಯಕ್ತಿಯೋರ್ವರು ಅಯೋದ್ಯೆಯ ಹೋಟೆಲ್ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಯೋದ್ಯೆಯಲ್ಲಿ ಕಾಫಿ ಮಾತು ಟೋಸ್ಟ್ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ನಿಜ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಹೋಟೆಲ್ ಬಿಲ್ ಬಾರಿ ವೈರಲ್ ಆಗಿದ್ದು, ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಒಂದು ಕಾಫಿ ಬೆಲೆ 55 ರೂ, ಟೋಸ್ಟ್ ಬೆಲೆ 65 ರೂ.
ಗೋವಿಂದ್ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ತನ್ನ ಹ್ಯಾಂಡಲ್ @govindprataps12 ನೊಂದಿಗೆ ಅಯೋದ್ಯೆಯ ಹೋಟೆಲ್ ಬಿಲ್ ಅನ್ನು ಹಂಚಿಕೊಂಡಿದ್ದಾರೆ. ಈ ಬಿಲ್ ನಲ್ಲಿ ವ್ಯಕ್ತಿಗೆ ಒಂದು ಚಹಾಕ್ಕೆ 55 ರೂ. ಮತ್ತು ಟೋಸ್ಟ್ ಗೆ 65 ರೂ. ಶುಲ್ಕ ವಿಧಿಸಲಾಗಿದೆ ಎಂಬುದನ್ನು ನೀವು ನೋಡಬಹುದು.

ಶೀರ್ಷಿಕೆಯಲ್ಲಿ, ವ್ಯಕ್ತಿ ರಾಮ್ ನಾಮ್ ಕಿ ಲೂಟ್ ಹೈ, ಲೂಟ್ ಸಾಕೆ ತೊ ಲೂಟ್ ಎಂದು ಬರೆದಿದ್ದಾರೆ. ಈ ಬಿಲ್ ಕೂಡ ತುಂಬಾ ಹಳೆಯದಲ್ಲ. ಅದರ ಮೇಲೆ 22 ಜನವರಿ 2024 ಎಂದು ಬರೆಯಲಾಗಿದೆ. ಅಯೋದ್ಯೆಯಲ್ಲಿ ಕಾಫಿ ಟೋಸ್ಟ್ ನ ಬೆಲೆ ದುಬಾರಿಯಾಗಿರುವ ಇದ್ರಲ್ಲಿ ಕಂಡುಬರುತ್ತದೆ.

Join Nadunudi News WhatsApp Group

 

Join Nadunudi News WhatsApp Group