Ram Lalla Eye: ಅಯೋಧ್ಯಾ ರಾಮನ ಕಣ್ಣುಗಳು ಹೊಳೆಯುತ್ತಿರುವುದು ಯಾಕೆ…? ಅಸಲಿ ಕಾರಣ ತಿಳಿಸಿದ ಅರುಣ್ ಯೋಗಿರಾಜ್

ಅಯೋಧ್ಯಾ ರಾಮನ ಕಣ್ಣುಗಳು ಹೊಳೆಯುತ್ತಿರುವುದು ಯಾಕೆ ಎಂದು ತಿಳಿಸಿದ ಅರುಣ್ ಯೋಗಿರಾಜ್

Ram Lalla Idol: ಕೋಟ್ಯಂತರ ಹಿಂದೂಗಳ 500 ವರ್ಷಗಕ ಕನಸು ಜನವರಿ 22 ರಂದು ನೆರವೇರಿದೆ ಎಂದು ಹೇಳಬಹುದು. ಹೌದು ಅಯೋದ್ಯೆಯಲ್ಲಿ ರಾಮನ ಮಂದಿರದ (Ayodhya Ram Mandir) ಉದ್ಘಾಟನೆ ಜನವರಿ 22 ರಂದು ಭರ್ಜರಿಯಾಗಿ ನೆರವೇರಿದ್ದು ಇದು ಕೋಟ್ಯಂತರ ಸಂಖ್ಯೆಯ ಹಿಂದೂಗಳ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಮೇರೆಗೆ ಬಾಬರಿ ಮಸೀದಿಯನ್ನ ಒಡೆದು ಅದೇ ಜಾಗದಲ್ಲಿ ರಾಮ ಮಂದಿರವನ್ನ ಸ್ಥಾಪನೆ ಮಾಡಲಾಯಿತು. ಬಾಲ ರಾಮನನ್ನ ಅಯೋದ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದೆ ತಡ ಈಗ ಪ್ರತಿಯೊಬ್ಬರೂ ಕೂಡ ರಾಮನ ಜಪ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸದ್ಯ ಅಯೋದ್ಯೆಯ ರಾಮನ ವಿಶ್ವ ಪ್ರಸಿದ್ಧಿಯನ್ನ ಪಡೆದುಕೊಂಡಿದ್ದಾನೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಅಯೋಧ್ಯ ಬಾಲ ರಾಮನ ಮುಖ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿದೆ ಅಂತಾನೆ ಹೇಳಬಹುದು. ಇನ್ನು ನಮ್ಮ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ ಏನು ಅಂದರೆ ಅಯೋಧ್ಯ ರಾಮನ ವಿಗ್ರಹವನ್ನ ಕೆತ್ತಿದ್ದು ನಮ್ಮ ಕನ್ನಡಿಗ ಅನ್ನುವುದು ಆಗಿದೆ. ಸುಮಾರು 8 ತಿಂಗಳುಗಳ ಮನೆಯವರಿಂದ ದೂರ ಉಳಿದು ಅಯೋಧ್ಯ ರಾಮನ ವಿಗ್ರಹವನ್ನ ಬಹಳ ಸುಂದರವಾಗಿ ಮತ್ತು ಆಕರ್ಷಕವಾಗಿ ನಿರ್ಮಾಣ ಮಾಡಿದ ನಮ್ಮ ಕರ್ನಾಟಕದ ಮೈಸೂರಿನವರಾದ ಅರುಣ್ ಯೋಗಿರಾಜ್ (Arun Yogiraj) ಅವರು ಈಗ ವರ್ಲ್ಡ್ ಫೇಮಸ್ ಆಗಿದ್ದಾರೆ ಅಂತಾನೆ ಹೇಳಬಹುದು.

about ayodhya ram eye
Image Credit: Original Source

ಜನರಿ 22 ಕ್ಕೆ ಅದ್ದೂರಿಯಾಗಿ ಉದ್ಘಾಟನೆಯಾದ ರಾಮ ಮಂದಿರ
ಜನವರಿ 22 ರಂದು ಲೋಕಾರ್ಪಣೆಗೊಂಡ ಶ್ರೀರಾಮ ಲಲ್ಲಾ (Ram Lalla) ಪ್ರಾಣಪ್ರತಿಷ್ಠಾಪನೆಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಕೋಟ್ಯಾಂತರ ಭಕ್ತರು ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಅಯೋಧ್ಯ ಶ್ರೀರಾಮನಿಗಾಗಿ ಸಾಕಷ್ಟು ಕಾಣಿಕೆಗಳು ಉಡುಗೊರೆಯ ರೂಪದಲ್ಲಿ ಬಂದಿದೆ.

ಎಲ್ಲೆಡೆ ರಾಮನ ವಿಗ್ರಹದ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ರಾಮನ ವಿಗ್ರಹವು ಬಹಳ ವಿಶೇಷವಾಗಿದ್ದು ಎಲ್ಲರು ಇಷ್ಟಪಟ್ಟಿದ್ದಾರೆ. ಸದ್ಯ ರಾಮ ಲಲ್ಲಾ ಮೂರ್ತಿ ಕೆತ್ತಿರುವ ಶಿಲ್ಪಿ ವಿಗ್ರಹದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Join Nadunudi News WhatsApp Group

ರಾಮ ಲಲ್ಲಾ ಮೂರ್ತಿ ಕೆತ್ತಿದವರು ಯಾರು.. ?
ಇನ್ನು 29 ಡಿಸೆಂಬರ್ 2023 ರಂದು ರಾಮ ಮಂದಿರಕ್ಕಾಗಿ ರಾಮ ಲಲ್ಲಾನ ವಿಗ್ರಹದ ಆಯ್ಕೆಯನ್ನು ಮಾಡಲಾಯಿತು. ಭಾರತದಾದ್ಯಂತ ವಿವಿಧ ಪ್ರತಿಮೆಗಳಿಗೆ ಹೆಸರುವಾಸಿಯಾದ ಶಿಲ್ಪಿ, ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj) ಅವರು ರಾಮನ ವಿಗ್ರಹವನ್ನು ರಚಿಸಿದ್ದಾರೆ.

ಕರ್ನಾಟಕದ ಶಿಲ್ಪಿ ನಿರ್ಮಿಸಿದ ರಾಮನ ವಿಗ್ರಹ ಜನವರಿ 22 ರಂದು ಅಯೋದ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಮೂರೂ ಶಿಲ್ಪಿಗಳು ಕೆತ್ತಿದ ವಿಗ್ರಹಗಳಲ್ಲಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನ ಆಯ್ಕೆ ಮಾಡಲಾಯಿತು. ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಬಹಳ ಚನ್ನಾಗಿ ಮೂಡಿಬಂದಿದ್ದು ಇದನ್ನ ನೋಡಿದ ಕೂಡಲೇ ಕಣ್ಣು ತುಂಬಿಕೊಳ್ಳುತ್ತದೆ ಅಂತಾನೆ ಹೇಳಬಹುದು.

arun yogiraj about ayodhya ram mandir
Image Credit: Original Source

ಅಯೋಧ್ಯ ರಾಮನ ಕಣ್ಣುಗಳು ಹೊಳೆಯುತ್ತಿರುವುದು ಏಕೆ…?
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾ ಮೂರ್ತಿ ಥೇಟ್ ಶ್ರೀರಾಮ ಚಂದ್ರನೇ ಇದ್ದಂತೆ ಇದೆ. ಅದರಲ್ಲೂ ರಾಮಲಲ್ಲಾ ಮೂರ್ತಿಯ ಕಣ್ಣುಗಳಂತೂ ಹೊಳೆಯುತ್ತಿರುದು ಬಹಳ ವಿಶೇಷವಾಗಿದೆ. ರಾಮನ ಮೂರ್ತಿಯ ಕಣ್ಣುಗಳಲ್ಲಿ ಜೀವ ತುಂಬಿದ ಕಳೆ ಇದೆ. ಹಾಗಾದರೆ ನಾವೀಗ ಆ ಮೂರ್ತಿಯ ಕಣ್ಣುಗಳು ಹೊಳೆಯುತ್ತಿರುವ ಹಿಂದಿನ ಕಾರಣವೇನೆಂದು ತಿಳಿದುಕೊಳ್ಳೋಣ. ಹಾಗಾದರೆ ಅಯೋಧ್ಯ ರಾಮನ ಕಣ್ಣುಗಳು ಹೊಳೆಯುತ್ತಿರುವುದು ಏಕೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

ಹೌದು ಸ್ನೇಹಿತರೆ ಅಯೋಧ್ಯೆಯ ರಾಮಮಂದಿರಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾ ಮೂರ್ತಿ ಕಣ್ಣುಗಳು ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆಯಿಂದ ಕೆತ್ತಲ್ಪಟ್ಟಿರುದರಿಂದ ಅಷ್ಟು ತೇಜೋ ಪೂರ್ಣವಾಗಿ ಹೊಳೆಯುತ್ತಿವೆ, ಎಂದು ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ಮೂರ್ತಿಗೆ ಜೀವಕಳೆ ತುಂಬಿರೋದು ಕಾರಣ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಮನ ಕಣ್ಣುಗಳನ್ನ ಕೆತ್ತುವ ಸಮಯದಲ್ಲಿ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನ ಬಳಸಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ದೇವರ ವಿಗ್ರಹಗಳನ್ನ ಕೆತ್ತುವ ಸಮಯದಲ್ಲಿ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಬಳಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ರಾಮನ ವಿಗ್ರಹ ಕೆತ್ತುವ ಸಮಯದಲ್ಲಿ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಬಳಸಲಾಗಿದೆ. ಈ ಕಾರಣಗಳಿಂದ ರಾಮನ ಕಣ್ಣುಗಳು ಹೊಳೆಯುತ್ತಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

Join Nadunudi News WhatsApp Group