Ram Mandir: ಸರ್ಕಾರದಿಂದ ರಾಮ ಮಂದಿರ ನಿರ್ಮಾಣಕ್ಕೆ ಬಂದ ದೇಣಿಗೆ ಎಷ್ಟು…? ಸ್ಪಷ್ಟನೆ ನೀಡಿದ ಆದಿತ್ಯನಾಥ್

ಸರ್ಕಾರದಿಂದ ರಾಮ ಮಂದಿರ ನಿರ್ಮಾಣಕ್ಕೆ ಬಂದಂತಹ ದೇಣಿಗೆಯ ಬಗ್ಗೆ ಯೋಗಿ ಆದಿತ್ಯಾನಂದ ಅವರು ಮಾಹಿತಿ ನೀಡಿದ್ದಾರೆ.

Ayodhya Ram Mandir Fund: ಹಿಂದೂಗಳ ಹಲವು ವರ್ಷದ ಕನಸು ಜನವರಿ 22 ರಂದು ನೆರವೇರಿದೆ. ಕೋಟ್ಯಾಂತರ ಭಕ್ತರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಶ್ರೀರಾಮ ನಾಮಸ್ಮರಣೆ ಕೇಳಿಬರುತ್ತಿದೆ. ಇಡೀ ದೇಶವೇ ಜೈ ಶ್ರೀರಾಮ್ ಘೋಷಣೆಯಲ್ಲಿ ಮುಳಿಗಿಹೋಗಿತ್ತು.

ಅದ್ದೂರಿಯಾಗಿ ಉದ್ಘಾಟನೆಗೊಂಡಿರುವ ರಾಮ ಮಂದಿರದ ಬಗ್ಗೆ ಜನರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟಿರಬಹುದು. ರಾಮ ಮಂದಿರ ನಿರ್ಮಾಣಕ್ಕೆ ಖರ್ಚಾದ ವೆಚ್ಚವೆಷ್ಟು ಎನ್ನುವ ಬಗ್ಗೆ ಎಲ್ಲರು ಯೋಚಿಸಿರಬಹುದು. ಸದ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಬಂದಂತಹ ದೇಣಿಗೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

Ayodhya Ram Mandir Fund
Image Credit: Live Mint

ಸರ್ಕಾರದಿಂದ ರಾಮ ಮಂದಿರ ನಿರ್ಮಾಣಕ್ಕೆ ಬಂದ ದೇಣಿಗೆ ಎಷ್ಟು..?
ಅಯೋಧ್ಯ ಶ್ರೀರಾಮನಿಗಾಗಿ ಸಾಕಷ್ಟು ಮೂಲಗಳಿಂದ ದೇಣಿಗೆ ಬರುತ್ತಿದೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಣಿಗೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಹಣ ಯಾವ ಮೂಲದಿಂದ ಬಂದಿದೆ..? ಸರ್ಕಾರದಿಂದ ರಾಮ ಮಂದಿರಕ್ಕೆ ಬಂದ ದೇಣಿಗೆ ಎಷ್ಟು..? ಎನ್ನುವ ಬಗ್ಗೆ ಸಿಎಂ ಉತ್ತರ ನೀಡಿದ್ದಾರೆ.

ಕುಶಲಕರ್ಮಿಗಳು ತ್ಯಾಗ ಮಾಡಿದ್ದಾರೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನ, ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶನ ಮತ್ತು ಪವಿತ್ರ ಸಂತರ ಆಶೀರ್ವಾದವಿದೆ. ಆ ಚಳವಳಿಯಿಂದಾಗಿ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದರಲ್ಲಿ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಹಣ ನೀಡಿಲ್ಲ. ಈ ಎಲ್ಲಾ ಹಣವನ್ನು ದೇಶ ಮತ್ತು ಪ್ರಪಂಚದಾದ್ಯಂತದ ರಾಮ ಭಕ್ತರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಹಿತಿ ನೀಡಿದ್ದಾರೆ.

Ram Mandir Latest Update
Image Credit: Zoomnews

ಸರ್ಕಾರದ ಹಣ ಎಲ್ಲಿ ಖರ್ಚುಮಾಡಲಾಗಿದೆ..?
ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಹಣ ನೀಡದಿದ್ದರೂ ಯಾವ ಕಾಮಗಾರಿಗೆ ಸರ್ಕಾರ ಹಣ ಖರ್ಚು ಮಾಡುತ್ತಿದೆ ಎಂದು ಸಿಎಂ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ. ರಾಮಮಂದಿರದ ಹೊರಗಿನ ಮೂಲಸೌಕರ್ಯಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ನಿರ್ಮಾಣ, ಅತಿಥಿ ಗೃಹ ನಿರ್ಮಾಣ, ಕ್ರೂಸ್ ಸೇವೆ, ರಸ್ತೆ ವಿಸ್ತರಣೆ, ವಾಹನ ನಿಲುಗಡೆ ಸೌಲಭ್ಯ ಇತ್ಯಾದಿಗಳಿಗೆ ಸರ್ಕಾರ ಹಣ ಖರ್ಚು ಮಾಡುತ್ತಿದೆ ಎಂದು ಹೇಳಿದರು.

Join Nadunudi News WhatsApp Group

Join Nadunudi News WhatsApp Group