Ayodhya Hotel Bill: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಯೋಧ್ಯೆಯ ಹೋಟೆಲ್ ಟೀ ಮತ್ತು ಟೋಸ್ಟ್ ಬಿಲ್, ಅಬ್ಬಬ್ಬಾ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಯೋಧ್ಯಾ ರಾಮ ಮಂದಿರದ ಬಿಲ್

Ayodhya Shabri Rasoi Restaurant: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಅದ್ದೂರಿಯಾಗಿ ಶ್ರೀ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತು. ಕೋಟ್ಯಾಂತರ ಭಕ್ತರು ಶ್ರೀ ರಾಮನ ದರ್ಶನ ಪಡೆದು ಪಾವನರಾದರು. ಇಡೀ ದೇಶವೇ ಹೆಮ್ಮೆ ಪಡುವ ದಿನ ಅದಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಡೆದ ಈ ಕ್ರಾಯಕ್ರಮ ಬಹಳ ಸಂಭ್ರಮದಿಂದ ಕೂಡಿತ್ತು. ಹಾಗೆಯೆ ಇತೀಚಿಗೆ ಅಯೋಧ್ಯೆಯಲ್ಲಿ ನಿರ್ಮಿಸಲಾದ ಶಬರಿ ರೆಸ್ಟೋರೆಂಟ್ ಬಹಳ ಸುದ್ದಿಯಲ್ಲಿದೆ.

Ayodhya Shabri Rasoi Restaurant Bill
Image Credit: Republicworld

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ರೆಸ್ಟೋರೆಂಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದೆ

ಅಯೋಧ್ಯೆ ಈಗ ಪ್ರವಾಸಿ ತಾಣವಾಗಿದೆ. ಇಲ್ಲಿ ಶಬರಿ ಎನ್ನುವ ಹೊಸ ರೆಸ್ಟೋರೆಂಟ್ ಓಪನ್ ಆಗಿದ್ದು, ಇಲ್ಲಿನ ಬಿಲ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲಿ ಒಂದು ಟೀ ಮತ್ತು ಟೋಸ್ಟ್ ಗೆ ಗ್ರಾಹಕರೊಬ್ಬರು ಪಾವತಿ ಮಾಡಿದ ಬಿಲ್ 252 ರೂಪಾಯಿ ಆಗಿದೆ. ಇದು ಎಲ್ಲಾರಿಗೆ ಅಚ್ಚರಿ ಮೂಡಿಸುವಂತಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ರೆಸ್ಟೋರೆಂಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದೆ.

ಶಬರಿ ರಸೋಯಿ ಇದು ಬಹಳ ದುಬಾರಿ ರೆಸ್ಟೋರೆಂಟ್ ಆಗಿದೆ

ಗುಜರಾತ್ ಮೂಲದ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಅರುಂಧತಿ ಭವನದಲ್ಲಿರುವ ಶಬರಿ ರಸೋಯ್ ಎಂಬ ರೆಸ್ಟೋರೆಂಟ್‌ನ ಮಾಲೀಕರಾಗಿದ್ದು, ರಾಮ ಮಂದಿರದ ಬಳಿಯ ತೆಹ್ರಿ ಬಜಾರ್‌ನಲ್ಲಿ ADA ನಿರ್ಮಿಸಿದ ಹೊಸ ಬಹು-ಮಹಡಿ ಕಟ್ಟಡದಲ್ಲಿ ಈ ರೆಸ್ಟೋರೆಂಟ್ ಇದೆ. ಅದರ ಪ್ರಕಾರ, ಬಜೆಟ್ ವರ್ಗದೊಳಗೆ ಬರುವ ಈ ಉಪಾಹಾರ ಗೃಹವು ಭಕ್ತರು ಮತ್ತು ಯಾತ್ರಾರ್ಥಿಗಳೊಂದಿಗೆ ಒಂದು ಕಪ್ ಚಹಾ ಮತ್ತು ಎರಡು ತುಂಡು ಟೋಸ್ಟ್ 10 ರೂಗೆ ನೀಡುವುದಾಗಿ ಒಪ್ಪಂದವನ್ನು ಹೊಂದಿದೆ.

Join Nadunudi News WhatsApp Group

ಭೋಜನಕ್ಕೆ 50 ಆಸನಗಳನ್ನು ಹೊಂದುವುದರ ಜೊತೆಗೆ,ಹಾಸ್ಟೆಲ್‌ನಲ್ಲಿ 100 ಹಾಸಿಗೆಗಳನ್ನು ಒದಗಿಸುತ್ತದೆ ಈ ರೆಸ್ಟೋರೆಂಟ್. ಅಲ್ಲಿ ಅತಿಥಿಗಳು ಪ್ರತಿ ರಾತ್ರಿ 50 ರೂಪಾಯಿಗಳಿಗೆ ಹಾಸಿಗೆಯನ್ನು ಬಾಡಿಗೆಗೆ ಪಡೆಯಬಹುದು. ಅಧಿಸೂಚನೆಯ ಮೂಲಕ, ವಿವರಣೆಯನ್ನು ನೀಡಲು ರೆಸ್ಟೋರೆಂಟ್‌ಗೆ ಮೂರು ದಿನಗಳನ್ನು ನೀಡಿದೆ. ಇಲ್ಲದಿದ್ದರೆ ಪ್ರಾಧಿಕಾರವು ವ್ಯವಹಾರದ ಗುತ್ತಿಗೆಯನ್ನು ಕೊನೆಗೊಳಿಸುತ್ತದೆ ಎನ್ನಲಾಗಿದೆ .

Ayodhya's Shabari Rasoi Restaurant In Big Trouble Over Viral Rs 252 Bill for Tea and Toasts
Image Credit: Oneindia

ದೊಡ್ಡ ಹೋಟೆಲ್‌ಗಳಲ್ಲಿ ಕಂಡುಬರುವ ಸೌಕರ್ಯಗಳನ್ನು ನಾವು ನೀಡುತ್ತಿದ್ದೇವೆ

ರೆಸ್ಟೋರೆಂಟ್‌ನ ಮಾಲೀಕರು ಅಹಮದಾಬಾದ್ ಮೂಲದ ಸಂಸ್ಥೆ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಆಗಿದೆ, ಇಲ್ಲಿನ ಜನರು ಉಚಿತ ಆಹಾರ ಮತ್ತು ಪಾನೀಯವನ್ನು ಬಯಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ ನ್ನು ವೈರಲ್ ಮಾಡಿದ್ದಾರೆ. ನಾವು ದೊಡ್ಡ ಹೋಟೆಲ್‌ಗಳಲ್ಲಿ ಕಂಡುಬರುವ ಸೌಕರ್ಯಗಳನ್ನು ನೀಡುತ್ತಿದ್ದೇವೆ. ಈ ಬಗ್ಗೆ ಪ್ರಾಧಿಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದೇವೆ ಎಂದು ಅಯೋಧ್ಯೆಯಲ್ಲಿರುವ ಶಬರಿ ರಸೋಯಿ ರೆಸ್ಟೋರೆಂಟ್‌ನ ಪ್ರಾಜೆಕ್ಟ್ ಮುಖ್ಯಸ್ಥ ಸತ್ಯೇಂದ್ರ ಮಿಶ್ರಾ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಎಡಿಎ ಉಪಾಧ್ಯಕ್ಷ ವಿಶಾಲ್ ಸಿಂಗ್, “ಇಲ್ಲಿನ ಭಕ್ತರಿಗೆ ಕಡಿಮೆ ದರದಲ್ಲಿ ಸೌಲಭ್ಯಗಳು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು, ನಾವು ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಾರಾಟಗಾರರೊಂದಿಗಿನ ಒಪ್ಪಂದದಲ್ಲಿ ಅಧಿಕಾರದಲ್ಲಿ ವಸತಿ ನಿಲಯ, ಪಾರ್ಕಿಂಗ್ ಮತ್ತು ಆಹಾರಕ್ಕಾಗಿ ಸಮಂಜಸವಾದ ದರಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Join Nadunudi News WhatsApp Group