Ayushman Bharat: ಈ ಕಾರ್ಡ್ ಇದ್ದವರು 5 ಲಕ್ಷದವರೆಗೆ ಆಸ್ಪತ್ರೆ ಬಿಲ್ ಕಟ್ಟುವುದು ಬೇಡ, ಕೇಂದ್ರದ ಹೊಸ ಗ್ಯಾರೆಂಟಿ

ಆನ್ಲೈನ್ ನ ಮೂಲಕ ಆಯುಷ್ಮಾನ್ ಯೋಜನೆಯ ಅರ್ಹತೆಯ ಬಗ್ಗೆ ವಿವರವನ್ನು ತಿಳಿದುಕೊಳ್ಳಬಹುದು.

Ayushman Bharat Yojana: ದೇಶದ ಬಡ ನಾಗರೀಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರು ಎಲ್ಲಾ ರೀತಿಯ ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯನ್ನ ಜಾರಿಗೆ ತಂದಿದೆ.

ಈ ಆಯುಷ್ಮನ್ ಭಾರತ್ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಡಜನರು ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯನ್ನು ಹೊಂದಿದೆ.

ದೇಶದ ಜನರು ಆಯುಷ್ಮನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಆಯುಷ್ಮನ್ ಭಾರತ್ ಯೋಜನೆಯ ಲಾಭ ಪಡೆಯಲು ಕೆಲವರು ಮಾತ್ರ ಅರ್ಹರಾಗಿರುತ್ತಾರೆ.

People can get free treatment up to 5 lakhs in selected hospitals through Ayushman card.
Image Credit: Gstsuvidhakendra

ಆಯುಷ್ಮನ್ ಭಾರತ್ ಯೋಜನೆಗೆ ಅರ್ಹರು ಯಾರು
ಆಯುಷ್ಮನ್ ಕಾರ್ಡ್ ನ ಮೂಲಕ ಆಯ್ಕೆ ಮಾಡಲಾದ ಆಸ್ಪತ್ರೆಗಳಲ್ಲಿ ಜನರು 5 ಲಕ್ಷವರೆಗೂ ಉಚಿತ ಚಿಕಿತ್ಸೆಯನ್ನು ಪಡೆಯುವ ಅವಕಾಶವಿರುತ್ತದೆ. ಹೆಚ್ಚಿನ ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆನ್ಲೈನ್ ನ ಮೂಲಕ ಆಯುಷ್ಮಾನ್ ಯೋಜನೆಯ ಅರ್ಹತೆಯ ಬಗ್ಗೆ ವಿವರವನ್ನು ತಿಳಿದುಕೊಳ್ಳಬಹುದು.

ಆಯುಷ್ಮನ್ ಭಾರತ್ ಯೋಜನೆಯ ಅರ್ಹತೆ ಪರಿಶೀಲಿಸಿಕೊಳ್ಳುವ ವಿಧಾನ
*ಆಯುಷ್ಮನ್ ಭಾರತ್ ಯೋಜನೆಯ ಅರ್ಹತೆ ಪರಿಶೀಲಿಸಿಕೊಳ್ಳಲು ನೀವು ಮೊದಲು www.mera.pmjay.gov.in ಪಿಎಂ ಜನ ಆರೋಗ್ಯ ಯೋಜನೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

Join Nadunudi News WhatsApp Group

People can get free treatment up to 5 lakhs in selected hospitals through Ayushman card.
Image Credit: Newsonair

* ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಯಾಪಿಚ ಕೋಡ್ ಹಾಕಿದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
*OTP ನಮೂದಿಸಿದ ನಂತಾರ್ತ ನೀವು ನಿಮ್ಮ ಜಿಲ್ಲೆ ಹಾಗೂ ಊರು, ನಿಮ್ಮ ಹೆಸರು ಹಾಗೂ ನಿಮ್ಮ ತಂದೆಯ ಹೆಸರನ್ನು ನಮೂದಿಸಬೇಕು.
*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀವು ಆಯುಷ್ಮನ್ ಯೋಜನೆಗೆ ಅರ್ಹರಾಗಿದ್ದೀರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

Join Nadunudi News WhatsApp Group