Ayushman Card Apply: ಆಯುಷ್ಮಾನ್ ಕಾರ್ಡಿಗೆ ಮೊಬೈಲ್ ಅರ್ಜಿ ಸಲ್ಲಿಸಿ ಹೇಗೆ…? ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

ಆಯುಷ್ಮನ್ ಕಾರ್ಡ್ ಪಡೆಯಲು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

Ayushman Card Online Apply: ಇನ್ನು ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ Ayushman Bharat ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಅರ್ಹರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ ನೀಡಿದೆ.

ಸದ್ಯ ನೀವು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಹರಾಗಿದ್ದರೆ, ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಆನ್ಲೈನ್ ಸುಲಭ ಮಾರ್ಗದ ಮೂಲಕ ನೀವು ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಹಾಗಾದರೆ ಆಯುಷ್ಮಾನ್ ಭರತ್ ಕಾರ್ಡಿಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.

Ayushman Card Online Apply
Image Credit: Jagran

ದೇಶದ ಜನತೆ ಆಯುಷ್ಮಾನ್ ಯೋಜನೆಯ ಮೂಲಕ ಉಚಿತ ಚಿಕಿತ್ಸೆ ಪಡೆಯಬಹುದು
•Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

•APL ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ.

•ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು ಆಯುಷ್ಮಾನ್ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Ayushman Card Latest Update
Image Credit: India TV

ಆಯುಷ್ಮನ್ ಕಾರ್ಡ್ ಪಡೆಯಲು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ
*ಆನ್‌ ಲೈನ್‌ ನಲ್ಲಿ ಆಯುಷ್ಮಾನ್ ಕಾರ್ಡ್ ಪಡೆಯಲು ಮೊದಲು https://abdm.gov.in/ ವೆಬ್ ಸೈಟ್  ಗೆ ಭೇಟಿ ನೀಡಿ.

*ವೆಬ್‌ ಸೈಟ್ ತೆರೆದ ತಕ್ಷಣ, ABHA ಕಾರ್ಡ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಅದು OTP ಸಂಖ್ಯೆಯನ್ನು ಕೇಳುತ್ತದೆ.

*ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಸಂಖ್ಯೆಯನ್ನು ಸಲ್ಲಿಸಿದ ನಂತರ, ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ.

*ಅಗತ್ಯ ದಾಖಲೆಗಳನ್ನು ಸಲ್ಲಿಸಿ. ನೀವು ಸಲ್ಲಿಸಿದ ಅರ್ಜಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ ಮತ್ತು ಎಲ್ಲಾ ದಾಖಲೆಗಳು ಮತ್ತು ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ.

*ಎಲ್ಲವೂ ಸರಿಯಾಗಿದ್ದರೆ ಅರ್ಜಿಯನ್ನು ಸಲ್ಲಿಸಿ. ನಂತರ ನೀವು ಸಲ್ಲಿಸಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸಂಬಂಧಪಟ್ಟ ಇಲಾಖೆಯು ನಿಮಗೆ ಆಯುಷ್ಮಾನ್ ಕಾರ್ಡ್ ನೀಡುತ್ತದೆ. ಈ ಕಾರ್ಡ್ ಪಡೆದ ನಂತರ ನೀವು ಉಚಿತ ಚಿಕಿತ್ಸೆಯಾ ಲಾಭವನ್ನು ಪಡೆಯಬಹುದು.

Join Nadunudi News WhatsApp Group