Ayushman Card: ಮೊಬೈಲ್ ಮೂಲಕ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಮೊಬೈಲ್ ಮೂಲಕ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ...?

Ayushman Card Online Apply: ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಕಾರ್ಡ್ (Ayushman Card) ವ್ಯವಸ್ಥೆ ಬಹಳ ಉತ್ತಮ ಆದ ಯೋಜನೆ ಆಗಿದೆ. ಆಯುಷ್ಮನ್ ಯೋಜನೆಯಡಿ ಕಡು ಬಡವರು ಸಹಿತ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5 ಲಕ್ಷ ರೂ. ಗಳ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇದೀಗ ನೀವು ಮನೆಯಲ್ಲಿಯೇ ಕುಳಿತು ಅಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

Ayushman Card Online Apply
Image Credit: Livehindustan

ಅರ್ಹತೆ…?
*ಅಸಂಘಟಿತ ವಲಯದ ಕಾರ್ಮಿಕರು

*ದಿನಗೂಲಿ ಕಾರ್ಮಿಕರು

*ಗ್ರಾಮೀಣ ಪ್ರದೇಶದ ಜನರು

*ನಿರ್ಗತಿಕರು ಅಥವಾ ಬುಡಕಟ್ಟು ಜನರು

Join Nadunudi News WhatsApp Group

*ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರು

*BPL Card ಹೊಂದಿರುವವರು

*ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯನ್ನು ಹೊಂದಿರುವವರು

Ayushman Card Download
Image Credit: Indiatvnews

ಮೊಬೈಲ್ ಮೂಲಕ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ…?
*ಆನ್‌ ಲೈನ್‌ ನಲ್ಲಿ ಆಯುಷ್ಮಾನ್ ಕಾರ್ಡ್ ಪಡೆಯಲು ಮೊದಲು https://abdm.gov.in/ ವೆಬ್ ಸೈಟ್  ಗೆ ಭೇಟಿ ನೀಡಿ.

*ವೆಬ್‌ ಸೈಟ್ ತೆರೆದ ತಕ್ಷಣ, ABHA ಕಾರ್ಡ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಅದು OTP ಸಂಖ್ಯೆಯನ್ನು ಕೇಳುತ್ತದೆ.

*ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಸಂಖ್ಯೆಯನ್ನು ಸಲ್ಲಿಸಿದ ನಂತರ, ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ.

*ಅಗತ್ಯ ದಾಖಲೆಗಳನ್ನು ಸಲ್ಲಿಸಿ. ನೀವು ಸಲ್ಲಿಸಿದ ಅರ್ಜಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ, ಎಲ್ಲವೂ ಸರಿಯಾಗಿದ್ದರೆ ಅರ್ಜಿಯನ್ನು ಸಲ್ಲಿಸಿ. ನಂತರ ನೀವು ಸಲ್ಲಿಸಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸಂಬಂಧಪಟ್ಟ ಇಲಾಖೆಯು ನಿಮಗೆ ಆಯುಷ್ಮಾನ್ ಕಾರ್ಡ್ ನೀಡುತ್ತದೆ. ಈ ಕಾರ್ಡ್ ಪಡೆದ ನಂತರ ನೀವು ಉಚಿತ ಚಿಕಿತ್ಸೆಯ ಲಾಭವನ್ನು ಪಡೆಯಬಹುದು.

Ayushman Card Benefits
Prabhatkhabar

Join Nadunudi News WhatsApp Group