Baal Aadhaar: ಮಗುವಿಗೆ ಬಾಲ್ ಆಧಾರ್ ಮಾಡಿಸಿದರೆ ಸರ್ಕಾರದಿಂದ ಏನೆನ್ನು ಲಾಭ ಸಿಗುತ್ತದೆ…? ಇಂದೇ ಮಾಡಿಸಿಕೊಳ್ಳಿ

ಬಾಲ್ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ...? ಇದರ ಪ್ರಯೋಜನ ಏನು...?

Baal Aadhaar Card For 5 Year Children’s: Aadhaar Card ದೇಶದಲ್ಲಿ ಎಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ ಎನ್ನುವುದರ ಅರಿವು ಎಲ್ಲರಲ್ಲೂ ಇದ್ದೆ ಇರುತ್ತದೆ. ಸದ್ಯದ ನಿಯಮದ ಪ್ರಕಾರ ಎಲ್ಲ ರೀತಿಯ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ Aadhaar Card ಮುಖ್ಯ ದಾಖಲೆಯಾಗಿದೆ.

ಹೀಗಾಗಿ ದೇಶದಲ್ಲಿ Aadhaar Card ಅನ್ನು ಪಡೆಯಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎನ್ನಬಹುದು. 5 ವರ್ಷದ ಮಗು ಕೂಡ ಆಧಾರ್ ಕಾರ್ಡ್ ಅನ್ನು ಹೊಂದುವ ಅರ್ಹತೆಯನ್ನು ಹೊಂದಿದೆ. 5 ವರ್ಷದ ಮಗುವಿಗೆ ಬಾಲ್ ಆಧಾರ್ ಮಾಡಿಸುವುದು ಕಡ್ಡಾಯವಾಗಿದೆ. ಈ ಬಾಲ್ ಆಧಾರ್ ಮಾಡಿಸುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Baal Aadhaar Card For 5 Year Children's
Image Credit: Livehindustan

ಮಗುವಿಗೆ ಬಾಲ್ ಆಧಾರ್ ಮಾಡಿಸಿದರೆ ಸರ್ಕಾರದಿಂದ ಏನೆನ್ನು ಲಾಭ ಸಿಗುತ್ತದೆ…?
ಈಗಾಗಲೇ UIDAI ಮಕ್ಕಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ನಲ್ಲಿ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಆಧಾರ್ ಮುಖ್ಯ ದಾಖಲೆಯಾಗಿರುವ ಕಾರಣ ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕಾಗಿದೆ. ಮಗುವಿಗೆ ಐದು ವರ್ಷ ತುಂಬಿದ ಬಳಿಕ Baal Aadhaar Card ಅನ್ನು ಮಾಡಿಸುವುದು ಕಡ್ಡಾಯವಾಗಿದೆ.

ಇನ್ನು ಜನನ ಪ್ರಮಾಣಪತ್ರದಲ್ಲಿ ಯಾವ ಹೆಸರನ್ನು ಇರಿಸಲಾಗಿದೆಯೋ ಅದೇ ರೀತಿ ಆಧಾರ್ ಕಾರ್ಡ್ ನಲ್ಲಿಯೂ ಹೆಸರು ನೋಂದಾಯಿಸಬೇಕು. ಮಗುವಿನ ಜನನ ಪ್ರಮಾಣಪತ್ರ, ಪಾಸ್ ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಪೋಷಕರ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನಿತರ ವೈಯಕ್ತಿಕ ಗುರುತಿನ ಪುರಾವೆಯನ್ನು ನೀಡುವ ಮೂಲಕ ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.

Baal Aadhaar Card Benefits
Image Credit: ABP News

ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಇಂದೇ ಮಾಡಿಸಿ
UIDAI, ಆಧಾರ್ ನೀಡುವ ಸಂಸ್ಥೆಯು ನವಜಾತ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್‌ ಗಳನ್ನು ನೀಡುತ್ತದೆ. ಇದನ್ನು ನೀಲಿ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಆಧಾರ್ ಕಾರ್ಡ್‌ನಂತೆಯೇ ಇದೆ, ಇದರಲ್ಲಿ ಮಗುವಿನ ಹೆಸರು, ವಯಸ್ಸು, ಫೋಟೋ, ವಿಳಾಸ ಮುಂತಾದ ವಿವರಗಳಿವೆ.

Join Nadunudi News WhatsApp Group

ಈ ಬಾಲ ಆಧಾರ್ ಕಾರ್ಡ್‌ ನಲ್ಲಿ, ಮಗುವಿನ ಬಯೋಮೆಟ್ರಿಕ್ ಮಾಹಿತಿಯನ್ನು ದಾಖಲಿಸಿರುವುದಿಲ್ಲ. ಪೋಷಕರ ಬಯೋಮೆಟ್ರಿಕ್ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮಗುವಿನ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ಅದನ್ನು 5 ವರ್ಷಗಳಲ್ಲಿ ನವೀಕರಿಸಬಹುದು ಎಂದು UIDAI ಹೇಳುತ್ತದೆ.

Join Nadunudi News WhatsApp Group