Blue Aadhaar: 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

5 ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಮಾಡಿಸುವುದು ಕಡ್ಡಾಯ, ಈ ರೀತಿ ಅರ್ಜಿ ಸಲ್ಲಿಸಿ

Baal Aadhaar For Children’s: ಸದ್ಯ ದೇಶದಲ್ಲಿ ಜನರ ವಿಳಾಸ ಪುರಾವೆಯಾಗಿ ಕಾರ್ಯನಿರ್ವಹಿಸುತ್ತಿರುವ Aadhaar Card ಎಷ್ಟು ಮುಖ್ಯ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ Aadhar card ಎಲ್ಲ ರೀತಿಯ ಸರ್ಕಾರೀ ಯೋಜನೆಗಳ ಲಾಭ ಪಡೆಯಲು ಹಾಗು ಯಾವುದೇ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಮುಖ್ಯವಾಗಿದೆ.

ಆಧಾರ್ ನಲ್ಲಿ ವ್ಯಕ್ತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, Biometric ಸೇರಿದಂತೆ ಎಲ್ಲ ರೀತಿಯ ವೈಯಕ್ತಿಕ ಮಾಹಿತಿ ಅಡಕವಾಗಿರುತ್ತದೆ. ಈ 12 ಅಂಕಿಗಳ Aadhar Card ಅನ್ನು ಪ್ರತಿಯೊಬ್ಬರೂ ಹೊಂದುವುದು ಕಡ್ಡಾಯವಾಗಿದೆ. UIDAI ಇದೀಗ 5 ವರ್ಷದ ಒಳಗಿನ ಮಕ್ಕಳಿಗೂ ಕೂಡ ವಿಶೇಷ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳವು ಹೇಳಿದೆ. ಇದೀಗ ನಾವು ಈ ಲೇಖನದಲ್ಲಿ ಮಕ್ಕಳಿಗಾಗಿ ಮಾಡಿಸಬೇಕಾದ Aadhar card ಯಾವುದು..? ಅದನ್ನು ಮಾಡಿಸುವುದು ಹೇಗೆ…? ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

Baal Aadhaar For Children's
Image Credit: Paytm

5 ವರ್ಷದ ಒಳಗಿನ ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯ..!
UIDAI, ಆಧಾರ್ ನೀಡುವ ಸಂಸ್ಥೆಯು ನವಜಾತ ಮಕ್ಕಳಿಗೆ Baal Aadhaar card ಗಳನ್ನು ನೀಡುತ್ತದೆ. ಇದನ್ನು ನೀಲಿ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಆಧಾರ್ ಕಾರ್ಡ್‌ನಂತೆಯೇ ಇದೆ, ಇದರಲ್ಲಿ ಮಗುವಿನ ಹೆಸರು, ವಯಸ್ಸು, ಫೋಟೋ, ವಿಳಾಸ ಮುಂತಾದ ವಿವರಗಳಿವೆ. ಈ Baal Aadhaar card ನಲ್ಲಿ, ಮಗುವಿನ Biometric ಮಾಹಿತಿಯನ್ನು ದಾಖಲಿಸಿರುವುದಿಲ್ಲ. ಪೋಷಕರ Biometric ಮಾಹಿತಿಯನ್ನು ದಾಖಲಿಸಲಾಗುತ್ತದೆ.

ನಿಮ್ಮ ಮಗುವಿಗೆ ಬಾಲ ಆಧಾರ್ ಅನ್ನು ಇಂದೇ ಮಾಡಿಸಿ
ಇನ್ನು ಮಗುವಿನ Biometric ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ಅದನ್ನು 5 ವರ್ಷಗಳಲ್ಲಿ ನವೀಕರಿಸಬಹುದು ಎಂದು UIDAI ಹೇಳುತ್ತದೆ. ಇನ್ನು ಜನನ ಪ್ರಮಾಣಪತ್ರದಲ್ಲಿ ಯಾವ ಹೆಸರನ್ನು ಇರಿಸಲಾಗಿದೆಯೋ ಅದೇ ರೀತಿ Aadhar Card ನಲ್ಲಿಯೂ ಹೆಸರು ನೋಂದಾಯಿಸಬೇಕು.

Child Aadhaar Card Mandatory
Image Credit: Original source

ಮಗುವಿನ ಜನನ ಪ್ರಮಾಣಪತ್ರ, ಪಾಸ್ ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಪೋಷಕರ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನಿತರ ವೈಯಕ್ತಿಕ ಗುರುತಿನ ಪುರಾವೆಯನ್ನು ನೀಡುವ ಮೂಲಕ ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು. UIDAI ನ ಅಧಿಕೃತ Website https://uidai.gov.in/ ಗೆ ಭೇಟಿ ನೀಡಿ ನಿಮ್ಮ ಮಗುವಿಗೆ Baal Aadhaar ಪಡೆಯಲು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group