Baba Vanga: 2024 ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ, ಬಾಬಾ ವಂಗ ಭವಿಷ್ಯ ಕೇಳಿ ಭಯಪಟ್ಟ ಜನರು

2024 ರ ವರ್ಷದಲ್ಲಿ ಆಗುವ ಅನಾಹುತದ ಬಗ್ಗೆ ಭವಿಷ್ಯ ನುಡಿದ ಬಾಬಾ ವಾಂಗ

Baba Vanga About 2024 Prediction: ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಇದ್ದಿದ್ದನ್ನು ಇದ್ದಾಗೇ ಹೇಳುವಲ್ಲಿ ಹೆಸರುವಾಸಿ ಆಗಿರುವ ಬಲ್ಗೇರಿಯಾದ ಬಾಬಾ ವಂಗ (Baba Vanga) ಅವರು 2024 ರಲ್ಲಿ ನಡೆಯುವ ನಿಖರ ಭವಿಷ್ಯವನ್ನು ನುಡಿದಿದ್ದಾರೆ. ಈ ಹಿಂದೆ ಬಾಬಾ ವಂಗ ನುಡಿದ ಭವಿಷ್ಯ ನಿಜವಾಗಿದ್ದು, 2024 ರಲ್ಲೂ ಇವರು ನೀಡಿದ ಹೇಳಿಕೆ ನಿಜ ಆಗಬಹುದು ಎನ್ನಲಾಗಿದೆ.

2023 ರಲ್ಲಿಯೂ ಬಾಬಾ ವಂಗಾ ಹೇಳಿದ ಕೆಲವು ವಿಚಾರಗಳು ನಿಜವಾಗಿದೆ ಅಂತಾ ಅನೇಕರು ಹೇಳಿದ್ದಾರೆ. ವಂಗಾ ತಾವು ಬದುಕಿದ್ದಾಗ ನೂರಾರು ವರ್ಷಗಳ ಭವಿಷ್ಯವನ್ನು ಗ್ರಹಿಸಿದ್ದರಂತೆ. ಸಂಗ್ರಹಿಸಿದ್ದಂತೆ. ಅದೇ ರೀತಿಯಲ್ಲಿ ಈಗ 2024 ಆಗುವ ಅನಾಹುತದ ಬಗ್ಗೆ ಬಾಬಾ ವಾಂಗ ಅವರು ಭವಿಷ್ಯ ನುಡಿದಿದ್ದು ಸದ್ಯ ಅವರ ಭವಿಷ್ಯ ವೈರಲ್ ಆಗಿದೆ ಎಂದು ಹೇಳಬಹುದು.

Baba Vanga Latest News
Image Credit: wionews

ಬಾಬಾ ವಂಗ ಅವರ ಭವಿಷ್ಯವಾಣಿ

ಬಾಬಾ ವಂಗ ಅವರು 1996ರಲ್ಲಿ ನಿಧನರಾಗಿದ್ದು, ತಮ್ಮ ಮರಣಕ್ಕೂ ಮುನ್ನವೇ 5,079 ವರೆಗೂ ಅವರು ವಿಶ್ವದ ಭವಿಷ್ಯವನ್ನು ಊಹೆ ಮಾಡಿದ್ದರು ಎಂದು ಹೇಳಲಾಗಿದೆ. ಇದುವರೆಗೂ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಈ ಪೈಕಿ ಅಮೆರಿಕದ ವರ್ಲ್ಡ್​​ ಟ್ರೇಡ್​​​ ಸೆಂಟರ್​​ ಮೇಲೆ ನಡೆದ 9/11 ದಾಳಿ, ಚರ್ನೋಬಿಲ್ ದುರಂತ, ಬ್ರೆಕ್ಸಿಟ್, ಬ್ರಿಟನ್ ಮಹಾರಾಣಿ ಡಯಾನಾ ಸಾವು ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳು ಸಹ ಸೇರಿವೆ. ಸದ್ಯ ವಂಗಾ 2024ರ ವರ್ಷದ ಬಗ್ಗೆ ನುಡಿದಿರುವ ಭವಿಷ್ಯಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೊಸ ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಅಂತಾ ಅವರು ಭವಿಷ್ಯ ನುಡಿದ್ದಾರೆ.

Baba Vanga About 2024 Prediction
Image Credit: TV9 Bangla

2024ರ ಬಗ್ಗೆ ವಂಗಾ ನುಡಿದಿರುವ ಭವಿಷ್ಯಗಳು

Join Nadunudi News WhatsApp Group

* 2024ರಲ್ಲಿ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಸಾಲದ ಪ್ರಮಾಣ ಏರಿಕೆ ಆಗಲಿದೆ. ಜಾಗತಿಕ ರಾಜಕಾರಣ ಇದೇ ಕಾರಣಕ್ಕೆ ಒತ್ತಡಕ್ಕೆ ಸಿಲುಕಲಿದೆ. ಇದರಿಂದ ಶ್ರೀಮಂತ ರಾಷ್ಟ್ರಗಳು ಸಹ ಸಂಕಷ್ಟಕ್ಕೆ ಸಿಲುಕಲಿದ್ದು, ಬಡ ರಾಷ್ಟ್ರಗಳು ಮತ್ತಷ್ಟು ಭೀಕರ ಬಡತನಕ್ಕೆ ಗುರಿಯಾಗಲಿವೆ ಎಂದು ಹೇಳಲಾಗಿದೆ.

* 2024 ರಲ್ಲಿ ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಸೈಬರ್ ಕ್ರೈಂ ಪ್ರಮಾಣ ಹೆಚ್ಚಳವಾಗಲಿದೆ. ಹ್ಯಾಕರ್‌ಗಳು ಸೈಬರ್ ದಾಳಿ ನಡೆಸಲಿದ್ದಾರೆ. ವಿದ್ಯುತ್ ಗ್ರಿಡ್‌ಗಳು, ಜಲ ಸಂಸ್ಕರಣಾ ಘಟಕಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಇದರಿಂದ ಧಕ್ಕೆ ಎದುರಾಗಲಿದೆ.

* 2024ರಲ್ಲಿ ಅನೇಕ ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ. ಹವಾಮಾನ ವೈಪರಿತ್ಯಗಳು ಸಹ ಎದುರಾಗಲಿದೆ. ಇದರಿಂದ ಇಡೀ ಪ್ರಪಂಚವೇ ದೊಡ್ಡ ಸಂಕಷ್ಟಕ್ಕೆ ಗುರಿಯಾಗಲಿದೆಯಂತೆ.

* ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಕೆಲವು ರಷ್ಯಾ ಪ್ರಜೆಗಳೇ ಯತ್ನಿಸಲಿದ್ದಾರೆ. ವಿಶ್ವದ ಬಲಿಷ್ಠ ನಾಯಕನ ಹತ್ಯೆಯೂ ನಡೆಯಬಹುದು ಅಂತಾ ವಂಗಾ ಭವಿಷ್ಯ ನುಡಿದಿದ್ದಾರೆ.

Join Nadunudi News WhatsApp Group