Baby Shamlee: ತುಂಬಾ ಫೇಮಸ್ ಆಗಿದ್ದ ನಟಿ ಬೇಬಿ ಶಾಮಿಲಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ.

ಬಾಲನಟಿಯಾಗಿ ಮಿಂಚಿದ್ದ ನಟಿ ಬೇಬಿ ಶಾಮಿಲಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ.

Actress Baby Shamlee: ಕನ್ನಡದ ಖ್ಯಾತ ಬಾಲ ನಟಿ ಬೇಬಿ ಶಾಮಿಲಿ (Baby Shamlee) ಇದೀಗ ಚಿತ್ರರಂಗದಿಂದ ದೂರ ಇದ್ದಾರೆ. ಅತಿ ಸಣ್ಣ ವಯಸ್ಸಿನಲ್ಲೇ ಸಿನಿಮಾರಂಗದಲ್ಲಿ ಖ್ಯಾತಿ ಪಡೆದಿದ್ದ ನಟಿ ಈಗ ಚಿತ್ರರಂಗದಿಂದ ದೂರ ಉಳಿಯಲು ಕಾರಣ ಏನು ಎನ್ನುವುದು ಎಲ್ಲರು ಕುತೂಹಲ ಮೂಡಿಸುತ್ತದೆ. ಇದೀಗ ನಟಿ ಬೇಬಿ ಶಾಮಿಲಿ ಅವರ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ.

Actress Baby Shamlee
Image Source: Fimlibeat

ಎರಡು ವರ್ಷದಲ್ಲಿಯೇ ನಟಿಸಲು ಆರಂಭಿಸಿದ ಬೇಬಿ ಶಾಮಿಲಿ
ನಟಿ ಬೇಬಿ ಶಾಮಿಲಿ ಅವರು ಎರಡು ವರ್ಷ ವಯಸ್ಸಿನಲ್ಲೇ ನಟನೆಯನ್ನು ಆರಂಭಿಸಿದ್ದರು. ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ನಟಿ ನಟಿಸಿದ್ದಾರೆ. ಇನ್ನು ಕನ್ನಡ ಜೊತೆಗೆ ತಮಿಳು, ತೆಲುಗು ಮಲಯಾಳಂ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ನಟಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದರು. ಸಣ್ಣ ವಯಸ್ಸಿನಲ್ಲಿ ಅಷ್ಟೊಂದು ಯಶಸ್ಸು ಕಂಡಿದ್ದ ಇವರಿಗೆ ನಂತರದ ದಿನಗಳಲ್ಲಿ ಚಿತ್ರರಂಗದಲ್ಲಿ ಯಶಸ್ಸು ಸಿಗಲಿಲ್ಲ.

Actress Baby Shamlee
Image Source: Youtube

ವಿದೇಶದಲ್ಲಿ ನಟಿ ಬೇಬಿ ಶಾಮಿಲಿ
ನಟಿ ಬೇಬಿ ಶಾಮಿಲಿ ಅವರು ಪ್ರಸ್ತುತ ವಿದೇಶದಲ್ಲಿ ನೆಲಸಿದ್ದಾರೆ. ಚಿತ್ರರಂಗದಿಂದ ದೂರ ಇದ್ದರು ನಟಿ ಇನ್ಸ್ಟಾಗ್ರಾಮ್ ಅಲ್ಲಿ ಸಕ್ರಿಯರಾಗಿದ್ದಾರೆ. ನಟಿ 2000 ದವರೆಗೆ ಬಾಲನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ನಟಿ 2009 ರಲ್ಲಿ ಓಯ್ ಸಿನಿಮಾದಲ್ಲಿ ನಟಿಸಿದ್ದರು.

ಓಯ್ ಸಿನಿಮಾದ ಮೂಲಕ ಹಲವು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ನಂತರ 2016 ರಲ್ಲಿ ಮತ್ತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ 2018 ರಲ್ಲಿ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಸೋಲನ್ನು ಅನುಭವಿಸಿತ್ತು. 2018 ರ ನಂತರ ನಟಿ ಯಾವುದೇ ಸಿನಿಮಾದಲ್ಲೂ ಕೂಡ ನಟಿಸಲಿಲ್ಲ. 2000 ನಂತರ ನಟಿ ತಮ್ಮ ಶಿಕ್ಷಣದ ಕಡೆ ಗಮನ ಕೊಟ್ಟಿದ್ದರು. ಇದೀಗ ಬೇಬಿ ಶಾಮಿಲಿ ವಿದೇಶದಲ್ಲಿ ಖ್ಯಾತ ನ್ರತ್ಯಗಾರ್ತಿ ಆಗಿದ್ದಾರೆ.

Actress Baby Shamlee
Image Source: News18

Join Nadunudi News WhatsApp Group

Join Nadunudi News WhatsApp Group