Bajaj EV: ಹೊಸ ಲುಕ್ ನಲ್ಲಿ ಬಂತು ಬಜಾಜ್ ಚೇತಕ್ ಎಲೆಕ್ಟ್ರಿಕ್, ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 127 Km ಮೈಲೇಜ್

ಅಗ್ಗದ ಬೆಲೆಗೆ 127 Km ಮೈಲೇಜ್ ಕೊಡುವ ಚೇತಕ್ ಸ್ಕೂಟರ್ ಲಾಂಚ್ ಮಾಡಿದ ಬಜಾಜ್

Bajaj Chetak Electric Scooter: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ Bajaj Auto ಕಂಪನಿಯ ಸಾಕಷ್ಟು ಮಾದರಿಯ ಬೈಕ್, ಸ್ಕೂಟರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಇದೀಗ ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ EV ಅನ್ನು ಬಿಡುಗಡೆಗೊಳಿಸಿದೆ.

ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಗಳಲ್ಲಿ ಈ ಸ್ಕೂಟರ್ ಕೂಡ ಒಂದಾಗಿದೆ. ಬಜಾಜ್ ಕಂಪನಿಯ ಚೇತಕ್ ಅರ್ಬನ್ ಹಾಗೂ ಪ್ರೀಮಿಯಂ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ನೀವು ಈ ಹೊಸ ಮಾದರಿಯಲ್ಲಿ ನೋಡಬಹುದು. ಜನವರಿ 2024 ರಲ್ಲಿ ಬಜಾಜ್ ಕಂಪನಿಯ ಈ ನೂತನ EV ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ.

Bajaj Chetak Electric Scooter
Image Credit: Autocarindia

Bajaj Chetak Electric Scooter
ಬಜಾಜ್ ಕಂಪನಿಯು ತನ್ನ ನೂತನ ಮಾದರಿಯ Bajaj Chetak Electric Scooter ಅನ್ನು january 9 2024 ರಂದು ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಕಂಪನಿಯು ಈ ಸ್ಕೂಟರ್ ನಲ್ಲಿ ಬಲಿಷ್ಠ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು ಹೆಚ್ಚಿನ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ನೂತನ ಮಾದರಿಯಲ್ಲಿ 3.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 127 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

127km ಮೈಲೇಜ್ ನೀಡುವ ಬಜಾಜ್ EV ಮಾರುಕಟ್ಟೆ ಬೆಲೆ ಎಷ್ಟಿದೆ..?
ಇದು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿಮೋಟ್ ಲಾಕ್/ಅನ್‌ಲಾಕ್, ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಶೇಖರಣಾ ಸಾಮರ್ಥ್ಯವೂ ಹೆಚ್ಚಾಗಲಿದ್ದು, ಈಗಿರುವ ಮಾದರಿಯ 18 ​​ಲೀಟರ್‌ ಗೆ ಹೋಲಿಸಿದರೆ 21 ಲೀಟರ್‌ ಗೆ ಹೆಚ್ಚಿಸುವ ಸಾಧ್ಯತೆಯಿದೆ.

Bajaj Chetak Electric Scooter Price And Feature
Image Credit: The Times Of India

ಹಾಗೆಯೆ LCD Instrument Cluster , body Colored Rear View mirrors , dual-tone seats, decal branding on wheel rims, pillion footrest, 4G connectivity ಸೇರಿದಂತೆ ಇನ್ನತರ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೋಡಬಹುದು. ಇನ್ನು ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿಯ ಸ್ಕೂಟರ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೊಸ ವರ್ಷದಲ್ಲಂತೂ ಹೊಸ ಸ್ಕೂಟರ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಜನರು ಹೊಸ EV ಖರೀದಿಸುವ ಯೋಜನೆಯಲ್ಲಿದ್ದರೆ ಈ EV ಮಾದರಿ ಉತ್ತಮ ಆಯ್ಕೆ ಎನ್ನಬಹುದು. ಮಾರುಕಟ್ಟೆಯಲ್ಲಿ Bajaj Chetak Electric Scooter ಸರಿಸುಮಾರು 1 .15 ರಿಂದ 1 .20 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group