Bajaj CNG Bike: ವಿಶ್ವದ ಮೊದಲ CNG ಬೈಕ್ ಲಾಂಚ್ ಮಾಡಿದ ಬಜಾಜ್, ಬೆಲೆ ಮತ್ತು ಮೈಲೇಜ್ ಕಂಡು ಜನರು ಫಿದಾ

ವಿಶ್ವದ ಮೊದಲ CNG ಬೈಕ್ ಬಿಡುಗಡೆಗೆ ದಿನಾಂಕ ಘೋಷಣೆ

Bajaj CNG Bike Price And Feature: ಭಾರತೀಯ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ಹಾಗೂ CNG ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಎಲೆಕ್ಟ್ರಿಕ್ ಮಾದರಿಯ ಕಾರ್, ಬೈಕ್ ಗಳು ಲಭ್ಯವಿದ್ದರೆ, CNG ಚಾಲಿತ ಕಾರ್ ಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿತ್ತು.

CNG ಚಾಲಿತ ಬೈಕ್ ಗಳನ್ನೂ ಈವರೆಗೆ ಯಾವುದೇ ಕಂಪನಿಯು ತಯಾರಿಸಿಲ್ಲ. ಸದ್ಯ ಭಾರತೀಯ್ ಆಟೋ ವಲಯದಲ್ಲಿ ಸಂಚಲನ ಮೂಡಿಸಲು BAJAJ ಕಂಪನಿಯು ನೂತನವಾಗಿ CNG ಚಾಲಿತ Bike ಅನ್ನು ಲಾಂಚ್ ಮಾಡಲು ನಿರ್ಧರಿಸಿದೆ.

ಇನ್ನು Bajaj CNG Bike ನ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಕೂಡ ವೈರಲ್ ಆಗಿದೆ. ಸದ್ಯ ಕಂಪನಿಯು ತನ್ನ ಮೊಟ್ಟ ಮೊದಲ CNG ಚಾಲಿತ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಬರಲಿದೆ ಎನ್ನುವ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ಇದೀಗ ನಾವು ಈ ಲೇಖನದಲ್ಲಿ CNG ಚಾಲಿತ ವಾಹನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Bajaj CNG Bike
Image Credit: Vahantalks

ವಿಶ್ವದ ಮೊದಲ CNG ಬೈಕ್ ಬಿಡುಗಡೆಗೆ ದಿನಾಂಕ ಘೋಷಣೆ
ಇದೀಗ ಬಜಾಜ್ ಕಂಪನಿಯು ತನ್ನ ಮೊಟ್ಟ ಮೊದಲ CNG ಚಾಲಿತ ಬೈಕ್ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಬಜಾಜ್ ಆಟೋ CNG ಚಾಲಿತ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸನ್ನು ಸಾಧಿಸಿದೆ ಮತ್ತು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಆ ರೀತಿಯ ಪ್ರಗತಿಯನ್ನು ಮುಂದುವರಿಸಲು ಬಯಸಿದೆ. ಅದಕ್ಕಾಗಿ ಸಿಎನ್ ಜಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ವಿಶ್ವದ ಮೊದಲ CNG ಬೈಕ್ ಅನ್ನು ಜೂನ್ 18, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ.

ಬಜಾಜ್ CNG ಬೈಕ್ ಯಾವ ಹೆಸರಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ
ಬಜಾಜ್ ಸಿಎನ್‌ಜಿ ಬೈಕ್‌ಗೆ ‘ಪ್ಲಾಟಿನಾ’ ಎಂದು ಹೆಸರಿಸಬಹುದು. ಅಕ್ಟೋಬರ್ 2023 ರಲ್ಲಿ ಬ್ರೂಸರ್ E101 ಕೋಡ್ ಹೆಸರಿನ ಮೋಟಾರ್‌ ಸೈಕಲ್ ಅನ್ನು ಅಂತಿಮಗೊಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿಶೇಷ ಇಂಧನ ಟ್ಯಾಂಕ್ ಹೊಂದಿರುವ ಬೈಕ್ ಹಲವಾರು ಬಾರಿ ಟೆಸ್ಟ್ ರನ್ ಮಾಡುತ್ತಿದೆ ಮತ್ತು ಫೋಟೋಗಳು ಆನ್‌ ಲೈನ್‌ ನಲ್ಲಿ ಕಾಣಿಸಿಕೊಂಡಿವೆ.

Join Nadunudi News WhatsApp Group

ಆದರೆ, ಇದು ಸಿಎನ್‌ಜಿ ಮೋಟಾರ್‌ ಸೈಕಲ್ ಎಂದು ಖಚಿತವಾಗಿಲ್ಲ. ಇನ್ನಿ ಬಜಾಜ್ ಪೆಟ್ರೋಲ್ ಚಾಲಿತ ಬೈಕ್ ಗಳಿಗೆ ಹೋಲಿಸಿದರೆ CNG ಚಾಲಿತ ಬೈಕ್ ಗಳ ಬೆಲೆ ಸ್ವಲ್ಪ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ವಿಶ್ವದ ಮೊಟ್ಟ ಮೊದಲ CNG ಬೈಕ್ ಸರಿಸುಮಾರು 80 ಸಾವಿರ ಎಕ್ಸ್ ಶೋರೂಮ್ ಬೆಲೆಗೆ ಲಾಂಚ್ ಆಗಬಹುದು. ಪ್ರತಿ ಕೆಜಿಗೆ ಈ CNG ಬೈಕ್ ಭರ್ಜರಿ 70 ಕಿಲೋಮೀಟರ್ ಮೈಲೇಜ್ ನೀಡಲಿದೆ ಎನ್ನಲಾಗುತ್ತಿದೆ.

Bajaj CNG Bike Launch
Image Credit: Income-mall

Join Nadunudi News WhatsApp Group