Dominar: ಶಕ್ತಿಶಾಲಿ ಎಂಜಿನ್, ಸುಂದರ ನೋಟ ಮತ್ತು ಕಡಿಮೆ ಬೆಲೆ, Bajaj ಈ ಸ್ಪೋರ್ಟ್ಸ್ ಬೈಕಿಗೆ ಜನರು ಫಿದಾ.

27 ಕಿಲೋಮೀಟರ್ ಮೈಲೇಜ್ ನೀಡಲಿದೆ Bajaj ನ ಈ ಸ್ಪೋರ್ಟ್ಸ್ ಬೈಕ್.

Bajaj Dominar 400 Bike: ಸ್ಟೈಲಿಶ್, ಶಕ್ತಿಶಾಲಿ ಮತ್ತು ಫೀಚರ್-ರಿಚ್ ಬೈಕ್‌ ಗಾಗಿ ಹುಡುಕುತ್ತಿರುವವರಿಗೆ ಬಜಾಜ್ ಕಂಪನಿಯು ಈಗಾಗಲೇ ಸಾಕಷ್ಟು ಆಯ್ಕೆಯನ್ನು ನೀಡಿದೆ. ಅದರಲ್ಲೂ ಬಜಾಜ್ ಕಂಪನಿಯ Dominar 400 ಬೈಕ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೈಕ್ ಅನ್ನು ಖರೀದಿಸುತ್ತಿದ್ದಾರೆ.

ಬಜಾಜ್ ಡೊಮಿನಾರ್ 400 ರ ಬೈಕ್ ನ ಆಕರ್ಷಕ ನೋಟವು ಗ್ರಾಹಕರನ್ನು ಆಕರ್ಷಿಸುತ್ತದೆ. ಇದರ ಸ್ಪೋರ್ಟಿ ಮತ್ತು ಅಗ್ರೆಸಿವ್ ಸ್ಟೈಲ್ ಯುವಜನತೆಗೆ ತುಂಬಾ ಇಷ್ಟವಾಗಿದೆ. ನಾವೀಗ ಈ ಲೇಖನದಲ್ಲಿ Bajaj Dominar 400 Bike ನ ವೈಶಿಷ್ಟ್ಯ, ಬೆಲೆ, ಮೈಲೇಜ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬಜಾಜ್ ಡೊಮಿನಾರ್ 400 ಇಂದಿನ ಸಮಯದಲ್ಲಿ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.

Bajaj Dominar 400 Bike
Image Credit: Zigwheels

ಶಕ್ತಿಶಾಲಿ ಎಂಜಿನ್, ಸುಂದರ ನೋಟ್ ಮತ್ತು ಕಡಿಮೆ ಬೆಲೆ
ಇದರಲ್ಲಿ ನೀವು ಡಿಜಿಟಲ್ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್, ಸ್ಪ್ಲಿಟ್ ಸೀಟ್, ಹೊಂದಾಣಿಕೆಯ ವಿಂಡ್‌ ಸ್ಕ್ರೀನ್, ಎಲ್ಇಡಿ ಹೆಡ್‌ ಲೈಟ್ ಮತ್ತು ಟೈಲ್‌ ಲೈಟ್, ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್, ಸ್ಮೋಕ್ಡ್ ವೈಸರ್, ಎಂಜಿನ್ ಬ್ಯಾಷ್ ಪ್ಲೇಟ್, ಪಿಲಿಯನ್ ಬ್ಯಾಕ್‌ ರೆಸ್ಟ್, ನ್ಯಾವಿಗೇಷನ್ ಮೌಂಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಬಜಾಜ್ ಡೊಮಿನಾರ್ 400 ನ ಶಕ್ತಿಶಾಲಿ 373.3 cc ಎಂಜಿನ್ 40 PS ಪವರ್ ಮತ್ತು 35 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Bajaj ಈ ಸ್ಪೋರ್ಟ್ಸ್ ಬೈಕಿಗೆ ಜನರು ಫಿದಾ
ಇನ್ನು ಬಜಾಜ್ ಡೊಮಿನಾರ್ 400 ಪ್ರತಿ ಲೀಟರ್‌ ಗೆ ಸುಮಾರು 27 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ನೀವು ಒಂದು ಲೀಟರ್ ಪೆಟ್ರೋಲ್ ಹಾಕಿಸಿಕೊಂಡರೆ ಯಾವುದೇ ತೊಂದರೆಯಿಲ್ಲದೆ 27 ಕಿಲೋಮೀಟರ್ ವರೆಗೆ ಓಡಿಸಬಹುದು. ಬಜಾಜ್ ಡೊಮಿನಾರ್ 400 ನ ಎಕ್ಸ್ ಶೋ ರೂಂ ಬೆಲೆ 2.31 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಆಯ್ದ ನಗರ ಮತ್ತು ರೂಪಾಂತರವನ್ನು ಅವಲಂಬಿಸಿ ಈ ಬೆಲೆ ಸ್ವಲ್ಪ ಬದಲಾಗಬಹುದು. ಬಜೆಟ್ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ಹಾಗೂ ಅತ್ಯಾಧುನಿಕ ಫೀಚರ್ ಇರುವ ಬೈಕ್ ಗಳನ್ನೂ ಹುಡುಕುತ್ತಿರುವವರಿಗೆ Bajaj Dominar 400 Bike ಬೆಸ್ಟ್ ಆಗಲಿದೆ.

Bajaj Dominar 400 Bike Price
Image Credit: Zigwheels

Join Nadunudi News WhatsApp Group

Join Nadunudi News WhatsApp Group