Bajaj EV: ಒಮ್ಮೆ ಚಾರ್ಜ್ ಮಾಡಿದರೆ 150 KM ರೇಂಜ್, ಯುವಕರಿಗಾಗಿ ಬಂದಿದೆ ಹೊಸ ಬಜಾಜ್ EV.

ಫಾಸ್ಟ್ ಚಾರ್ಜಿಂಗ್ ಜೊತೆ 150 ಕಿಲೋಮೀಟರ್ ಮೈಲೇಜ್ ನೀಡುವ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್.

Bajaj Electric Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಬಜಾಜ್ (Bajaj) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಇದೀಗ ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ.ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. ಈ ಬೈಕ್ ನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

150 KM range on a single charge, the new Bajaj EV is for the youth.
Image Credit: Carblogindia

ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್
ಬಜಾಜ್ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಹೊಂದಿದೆ. ಓಡೋಮೀಟರ್, ಸ್ಪೀಡೋಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್, ಬ್ಯಾಟರಿ ಇಂಡಿಕೇಟರ್, ರಿಯಲ್ ಟೈಮ್ ರೇಂಜ್, ಲೋ ಪವರ್ ಅಲರ್ಟ್ ಮುಂತಾದ ಹಲವು ಸ್ಮಾರ್ಟ್ ಫೀಚರ್‌ ಗಳನ್ನು ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ.

ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯ
ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಒದಗಿಸುತ್ತದೆ. ಇದು IP 67 ರೇಟಿಂಗ್‌ನೊಂದಿಗೆ ಬರುವ 4 kWh ಬ್ಯಾಟರಿ ಪ್ಯಾಕ್‌ನಿಂದ ಚಲಿತವಾಗಿದ್ದು, 5 ವರ್ಷಗಳ ವರೆಗೆ ವಾರಂಟಿಯನ್ನು ಪಡೆಯಿದೆ.

150 KM range on a single charge, the new Bajaj EV is for the youth.
Image Credit: Gaadiwaadi

ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 7 ಗಂಟೆ ಸಮಯ ಬೇಕಾಗುತ್ತದೆ. ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ವೇಗದ ಚಾರ್ಜಿಂಗ್ ಜೊತೆ 150 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group