Bajaj Bikes: ಇನ್ಮುಂದೆ ನಡೆಯಲ್ಲ ಹಿಮಾಲಯನ್ ಹವಾ, ಅಗ್ಗದ ಬೆಲೆಗೆ 400 CC ಬೈಕ್ ಲಾಂಚ್ ಮಾಡಿದ ಬಜಾಜ್

ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಬಜಾಜ್‌ NS 400

Bajaj Pulsar NS 400 Bike: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ ಬಜಾಜ್ (Bajaj) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಅಭಿಮಾನಿ ಗ್ರಾಹಕರನ್ನು ಹೊಂದಿರುವ ಬಜಾಜ್‌, ಹಲವರ ನೆಚ್ಚಿನ ಬೈಕ್ ಬ್ರ್ಯಾಂಡ್‌ ಆಗಿದೆ.

ಇದೀಗ ಬಜಾಜ್ ಕಂಪನಿ ಕೆಲವೇ ತಿಂಗಳು ಗಳಲ್ಲಿ ಹಲವಾರು ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅದರಲ್ಲಿ ಬಜಾಜ್ NS 400, ಚೇತಕ್ ನ ಎಲೆಕ್ಟ್ರಿಕ್ ವೆರಿಯಂಟ್ ಹಾಗೂ CNG ಚಾಲಿತ ಇನ್ನೊಂದು ಬೈಕ್ ಅನ್ನು ಹೊರತರಲಿದೆ ಎಂದು ಮಾಹಿತಿ ಹೊರಬಿದ್ದಿದೆ.

Bajaj Pulsar NS 400 Bike
Image Credit: shifting-gears

ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಬಜಾಜ್‌ NS 400
ಬಜಾಜ್ ಕಂಪನಿಯ ಪ್ರಸಿದ್ಧ ಲೈನ್ಅಪ್ ಮಾಡೆಲ್ ಆದ NS ಗ್ರಾಹಕರಿಗೆ ಹೆಚ್ಚು ಇಷ್ಟವಾಗುವ ಬೈಕ್ ಆಗಿದೆ. NS200 ಬೈಕ್‌ ಮಾದರಿಯು ಈಗಾಗಲೇ ಯುವಕ ನೆಚ್ಚಿನ ಬೈಕ್ ಆಗಿದ್ದು, ಇದರ 400 ಸಿಸಿ ಆವೃತ್ತಿ ಬರುತ್ತದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಹೌದು ಇದೀಗ ಸದ್ಯದಲ್ಲೇ ಬಜಾಜ್‌ NS 400 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ.

ಇನ್ನು ಮಾಹಿತಿಗಳ ಪ್ರಕಾರ ಬಜಾಜ್‌ NS 400 ಮಾತ್ರವಲ್ಲದೇ ಚೇತಕ್ ನ ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಗೆ ತರಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಈ ಮೂಲಕ ಎಲೆಕ್ಟ್ರಿಕ್‌ ಕ್ಷೇತ್ರದಲ್ಲೂ ತನ್ನ ಸ್ಥಾನವನ್ನು ವಿಸ್ತರಿಸಿಕೊಳ್ಳಲಿದೆ. ಇಷ್ಟು ಮಾತ್ರವಲ್ಲದೇ ಬಜಾಜ್‌ CNG ಮೂಲಕ ಚಲಿಸುವ ಬೈಕ್‌ ಒಂದನ್ನು ಸಹ ನಿರ್ಮಿಸುತ್ತಿರುದು ತಿಳಿದುಬಂದಿದೆ. ಇದನ್ನು ಈ ಬಾರಿಯ ಆರ್ಥಿಕ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

Bajaj Pulsar NS160 And NS200
Image Credit: Times Of India

Bajaj Pulsar NS160 And NS200
ಇನ್ನು ಈಗಿರುವ ಬಜಾಜ್‌ NS160 And NS200 ಬೈಕ್ ಗಳ ಬಗ್ಗೆ ಮಾತಾಡುದಾದರೆ, ಈ ಬೈಕ್‌ಗಳು ನವೀಕರಣ ಪಡೆದುಕೊಂಡ ಬಳಿಕ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ, ಈ ಬೈಕ್‌ಗಳು ಹೊಸ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡಿದೆ.

Join Nadunudi News WhatsApp Group

2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ.

Join Nadunudi News WhatsApp Group