Bajaj Pulsar: ಕಾಲೇಜು ಯೂಕರಿಗಾಗಿ ಬಂತು ಇನ್ನೊಂದು ಪಲ್ಸರ್ ಬೈಕ್, ಬೆಲೆ ಕಡಿಮೆ ಮತ್ತು ಆಕರ್ಷಕ ಫೀಚರ್

ನವೀಕರಿಸಿದ ಪಲ್ಸರ್ NS160 ಹಾಗೂ NS200 ಬಿಡುಗಡೆ ಮಾಡಿದ ಬಜಾಜ್

Bajaj Pulsar NS160 And NS200 Bike: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ Bajaj ಕಂಪನಿಯ ಸಾಕಷ್ಟು ಮಾದರಿಯ Bike ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹೊಸ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಬಜಾಜ್ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.

ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಅಭಿಮಾನಿ ಗ್ರಾಹಕರನ್ನು ಹೊಂದಿರುವ ಬಜಾಜ್‌, ಹಲವರ ನೆಚ್ಚಿನ ಬೈಕ್ ಬ್ರ್ಯಾಂಡ್‌ ಆಗಿದೆ. ಬಜಾಜ್ ನ NS ಶ್ರೇಣಿಯು ಭಾರತದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡಿದೆ. ಇದೀಗ ನಾವು ಹೊಸ ಅಪ್ಡೇಟ್ ಗಳೊಂದಿಗೆ ಬಿಡುಗಡೆಯಾದ ಬಜಾಜ್ ಪಲ್ಸರ್ NS160 ಹಾಗೂ NS200 ಬೈಕ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Bajaj Pulsar NS160 And NS200 Bike
Image Credit: Motorbeam

ನವೀಕರಿಸಿದ ಪಲ್ಸರ್ NS160 ಹಾಗೂ NS200 ಬಿಡುಗಡೆ ಮಾಡಿದ ಬಜಾಜ್
ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Bajaj ನವೀಕರಿಸಿದ ಪಲ್ಸರ್ NS160 ಮತ್ತು NS200 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಬೈಕ್ ಗಳು ತಮ್ಮ ಹಳೆಯ ಮಾದರಿಗಳಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಯನ್ನು ಪಡೆದುಕೊಂಡಿದೆ. ಆದರೆ ಈ ಬದಲಾವಣೆಯ ಜೊತೆ ಕೊಂಚ ಬೆಲೆಯೇರಿಕೆಯನ್ನು ಸಹ ಕಂಡಿದೆ. ಪಲ್ಸರ್ NS160 ಮತ್ತು NS200 ನಲ್ಲಿನ ಅತ್ಯಂತ ಗಮನಾರ್ಹವಾದ ನವೀಕರಣವೆಂದರೆ, ಹೊಸ LCD ಕ್ಲಷ್ಟರ್ ಆಗಿದೆ, ಇದು ಇತ್ತೀಚೆಗೆ ನವೀಕರಿಸಿದ ಪಲ್ಸರ್ N150 ಮತ್ತು N160 ಮಾದರಿಗಳಲ್ಲೂ ಕೂಡ ಕಂಡುಬರುತ್ತದೆ.

ಸ್ಮಾರ್ಟ್ ಫೋನ್ ಜೋಡಣೆಗಾಗಿ ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿದ್ದು ಈ ವೈಶಿಷ್ಟ್ಯ ಬೈಕ್ ಸವಾರರು ತಮ್ಮ Bike Display ನಲ್ಲಿ ನೇರವಾಗಿ Notification Alert ಸ್ವೀಕರಿಸಲು ಸಾಧ್ಯವಾಗುತ್ತದೆ. ಮತ್ತೊಂದು ಗಮನಾರ್ಹವಾದ ಅಪ್ ಗ್ರೇಡ್ ಅಂದರೆ ಹೊಸ LED Headlight. ಮಿಂಚಿನ ಆಕಾರದ ವಿಶಿಷ್ಟ DRL ಗಳೊಂದಿಗೆ Stylish ಆಗಿ ಕಾಣುತ್ತದೆ. NS200 ತನ್ನ ಆಕರ್ಷಣೆಯನ್ನು LED Indicator ನೊಂದಿಗೆ ಮತ್ತಷ್ಟು ಹೆಚ್ಚಿಸುತ್ತದೆ. ಈ ನವೀಕರಣಗಳ ಹೊರತಾಗಿ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳಾಗಿಲ್ಲ.

Bajaj Pulsar NS160 And NS200 Price
Image Credit: Motorbeam

Bajaj Pulsar NS160 And NS200 Price
2024ರ ಹೊಸ Bajaj Pulsar NS200 Bike 8 ಸಾವಿರ ಬೆಲೆ ಏರಿಕೆಯೊಂದಿಗೆ 1.55 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದರ ಜೊತೆಗೆ ಹೊಸ 2024ರ ಬಜಾಜ್ ಪಲ್ಸರ್ 9 ಸಾವಿರ ಬೆಲೆ ಏರಿಕೆಯೊಂದಿಗೆ 1.46 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಬಿಡುಗಡೆಯಾಗಿದೆ. ಹೊಸ ಬೆಲೆಯೊಂದಿಗೆ Bajaj Pulsar NS160, TVS Apache RTR 160 4V ಮತ್ತು Hero Xtreme 160R 4V ನೊಂದಿದೆ ಕಠಿಣ ಪೈಪೋಟಿ ನೀಡಲಿದೆ. ಹಾಗೆ Bajaj Pulsar NS200, TVS Apache RTR 200 H200 4V ಮತ್ತು H2 ನೊಂದಿದೆ ಕಠಿಣ ಪೈಪೋಟಿ ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group