Bal Jeevan Bima: ಪೋಸ್ಟ್ ಆಫೀಸ್ ನಲ್ಲಿ 6 ರೂ ಹೂಡಿಕೆ ಮಾಡಿದರೆ ನಿಮಗೆ ಸಿಗಲಿದೆ 1 ಲಕ್ಷ ರೂ, ಇಂದೇ ಯೋಜನೆಗೆ ಸೇರಿ

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ನೀವು 6 ರೂಪಾಯಿ ಹೂಡಿಕೆ ಮಾಡಿದರೆ 1 ಲಕ್ಷ ರೂಪಾಯಿ ಲಾಭ ಗಳಿಸಬಹುದಾಗಿದೆ

Bal Jeevan Bima Scheme For Children’s:  ಸದ್ಯ ಪೋಸ್ಟ್ ಆಫೀಸ್ ಮಕ್ಕಳಿಗಾಗಿ Bal Jeevan Bhima ಜೀವ ವಿಮಾ ಯೋಜನೆಯನ್ನು ಪರಿಚಯಿಸಿದೆ. ಅಂಚೆ ಇಲಾಖೆಯು ಈ ಯೋಜನೆಯನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಿದೆ. ಈ ಯೋಜನೆಯು ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ನಡೆಸಲ್ಪಡುತ್ತದೆ.

ಈ ಯೋಜನೆಯ ಅಡಿಯಲ್ಲಿ, ಮೆಚ್ಯೂರಿಟಿಯಲ್ಲಿ ಲಕ್ಷದ ವರೆಗಿನ ಮೊತ್ತದ ವಿಮಾ ಮೊತ್ತವನ್ನು ಪಡೆಯುವ ಅವಕಾಶವಿದೆ. ಇದೀಗ ನಾವು Bal Jeevan Bhima ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ಎಷ್ಟು ಹಣವನ್ನು ಗಳಿಸಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Bal Jeevan Bima Scheme For Children's
Image Credit: Online38media

ಪೋಸ್ಟ್ ಆಫೀಸ್ ನಲ್ಲಿ 6 ರೂ ಹೂಡಿಕೆ ಮಾಡಿದರೆ ನಿಮಗೆ ಸಿಗಲಿದೆ 1 ಲಕ್ಷ ರೂ.
ಪೋಸ್ಟ್ ಆಫೀಸ್ ಮಕ್ಕಳ ಜೀವ ವಿಮೆಯನ್ನು ಮಕ್ಕಳ ಪೋಷಕರು ಖರೀದಿಸಬಹುದು. Bal Jeevan Bhima ಯೋಜನೆಯನ್ನು 5 ವರ್ಷದಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ಖರೀದಿಸಬಹುದು. ತಮ್ಮ ಮಕ್ಕಳಿಗೆ ಈ ವಿಮಾ ಯೋಜನೆಯನ್ನು ಖರೀದಿಸಲು ಬಯಸುವ ಪೋಷಕರು, ಅವರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯ ಲಾಭವನ್ನು ಗರಿಷ್ಠ ಎರಡು ಮಕ್ಕಳಿಗೆ ನೀಡಬಹುದು.

ಮಕ್ಕಳ ಜೀವ ವಿಮಾ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ನೀವು ರೂ, 6 ರಿಂದ ರೂ. 18 ರವರೆಗಿನ ದೈನಂದಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಜನರು ಮಾಸಿಕ, ಮೂರು ತಿಂಗಳು, ಆರು ತಿಂಗಳು ಮತ್ತು ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು. ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ, ಮೆಚ್ಯೂರಿಟಿಯಲ್ಲಿ ರೂ. 1 ಲಕ್ಷದ ಮೊತ್ತದ ವಿಮಾ ಪ್ರಯೋಜನವು ಲಭ್ಯವಿದೆ.

Bal Jeevan Bima Scheme Latest Update
Image Credit: v6velugu

ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅಗತ್ಯ
ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ನೀವು ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್‌ ಪೋರ್ಟ್ ಗಾತ್ರದ ಫೋಟೋ ಮುಂತಾದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಮ್ಮ ಹತ್ತಿರದ ಅಂಚೆ ಕಛೇರಿಗೆ ಹೋಗಿ ಸ್ಕೀಮ್ ಫಾರ್ಮ್ ಪಡೆಯುವ ಮೂಲಕ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ನಿಮ್ಮ ಆಯ್ಕೆಯ ಪ್ರಕಾರ ಹೂಡಿಕೆಯ ಮೊತ್ತವನ್ನು ನೀವು ನಿರ್ಧರಿಸಬಹುದು. ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group