Balika Samridhi Scheme: ಎಲ್ಲಾ ಹೆಣ್ಣು ಮಕ್ಕಳಿಗೆ ಹೊಸ ಯೋಜನೆ, ಕೇಂದ್ರದ ಯೋಜನೆ

ಕೇಂದ್ರ ಸರ್ಕಾರದಿಂದ ಹೊಸ ಹೊಸ ಯೋಜನೆಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲೂ ಹೆಣ್ಣು ಮಕ್ಕಳಿಗಾಗಿಯೇ ಉತ್ತಮ ಪ್ರಯೋಜನವಿರುವ ಯೋಜನೆಗಳು ಬಿಡುಗಡೆಯಾಗಿವೆ.

Balika Samridhi Scheme: ಕೇಂದ್ರ ಸರ್ಕಾರದಿಂದ ಹೊಸ ಹೊಸ ಯೋಜನೆಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲೂ ಹೆಣ್ಣು ಮಕ್ಕಳಿಗಾಗಿಯೇ ಉತ್ತಮ ಪ್ರಯೋಜನವಿರುವ ಯೋಜನೆಗಳು ಬಿಡುಗಡೆಯಾಗಿವೆ. ಇದರಲ್ಲಿ ಬಾಲಿಕಾ ಸಮೃದ್ಧಿ ಯೋಜನೆ ಸಹ ಒಂದು.

ಹಣ್ಣು ಮಗು ಜನಿಸಿದಾಗಿನಿಂದ ಅವರ ವಿದ್ಯಾಭಾಸದವರೆಗೆ ಆರ್ಥಿಕ ನೆರವು ನೀಡುವ ಯೋಜನೆ ಎಂದರೆ ಅದು ಬಾಲಿಕಾ ಸಮೃದ್ಧಿ ಯೋಜನೆ. ಈ ಯೋಜನೆಗೂ ಮೋದಿ ಸರ್ಕಾರವು ಬರುವುದಕ್ಕೂ ಮೊದಲೇ ಜಾರಿಯಲ್ಲಿದ್ದಿತ್ತಂತೆ. ಈ ಯೋಜನೆಯು ಹೆಣ್ಣುಮಕ್ಕಳಿಗೆ ಹುಟ್ಟಿನಿಂದ ಅವರ ಶಿಕ್ಷಣದವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.

Balika Samridhi Scheme
Image Source: Twitter

ಬಾಲಿಕಾ ಸಮೃದ್ಧಿ ಯೋಜನೆ
ಬಾಲಿಕಾ ಸಮೃದ್ಧಿ ಯೋಜನೆ ಅಡಿಯಲ್ಲಿ ಆರಂಭದಲ್ಲಿ, ಹೆಣ್ಣು ಮಗು ಜನಿಸಿದ ನಂತರ, ತಾಯಿಗೆ 500 ರೂಪಾಯಿ ಆರ್ಥಿಕ ನೆರವು ಸಿಗುತ್ತದೆ. ಅದಾದ ಬಳಿಕ 10 ನೇ ತರಗತಿವರೆಗೆ ಬಾಲಕಿಯ ಶಿಕ್ಷಣದ ಪ್ರತಿ ಹಂತದಲ್ಲೂ ಸರ್ಕಾರವು ಆರ್ಥಿಕ ನೆರವು ನೀಡುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಕ್ಕೆ ಇರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಆರಂಭ ಮಾಡಲಾಗಿದೆ.

ಬಾಲಿಕಾ ಸಮೃದ್ಧಿ ಯೋಜನೆಗೆ ಬೇಕಾಗುವ ದಾಖಲೆಗಳು
ಪ್ರತಿ ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಯನ್ನು ಪಡೆಯಬಹುದು. ಬಾಲಿಕಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳಲ್ಲಿ ಹೆಣ್ಣು ಮಗುವಿನ ಜನನ ಪ್ರಮಾಣಪತ್ರ, ಪೋಷಕರ ವಾಸಸ್ಥಳ ಮತ್ತು ಪೋಷಕರು ಅಥವಾ ಸಂಬಂಧಿಕರ ಗುರುತಿನ ಪುರಾವೆಗಳು ಸೇರಿವೆ. ಪಡಿತರ ಕಾರ್ಡ್, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ಪಾಸ್‌ ಬುಕ್ ಅನ್ನು ಗುರುತಿನ ಪುರಾವೆಗಳಾಗಿ ಪಡೆಯಲಾಗುತ್ತದೆ.

Balika Samridhi Scheme
Image Source: India Today

ಬಾಲಿಕಾ ಸಮೃದ್ಧಿ ಯೋಜನೆಯಲ್ಲಿ ಸ್ಕಾಲರ್ ಶಿಪ್ ಸಹ ಲಭ್ಯ
ಇನ್ನು ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಸ್ಕಾಲರ್‌ ಶಿಪ್ ಮೊತ್ತವು ತರಗತಿಗೆ ಅನುಗುಣವಾಗಿ ಬದಲಾಗುತ್ತದೆ. ಒಂದರಿಂದ ಮೂರನೇ ತರಗತಿಯವರೆಗೆ 300 ರೂಪಾಯಿವರೆಗೆ ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್‌ಶಿಪ್ ಅನ್ನು ನೀಡಲಾಗುತ್ತದೆ. ಆದರೆ ಅದಾದ ಬಳಿಕ ಕ್ರಮೇಣ ಏರಿಕೆಯಾಗುತ್ತದೆ. 9 ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ 1000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group