Banana Problem: ಇಂತಹ ಸಮಸ್ಯೆ ಇರುವವರು ಬಾಳೆ ಹಣ್ಣು ತಿಂದರೆ ತುಂಬಾ ಅಪಾಯಕಾರಿ, ಆರೋಗ್ಯ ಮಾಹಿತಿ.

ಬಾಳೆ ಮಾನವನ ದೇಹಕ್ಕೆ ಎಷ್ಟು ಪೌಷ್ಟಿಕಾಂಶವನ್ನ ಕೊಡುತ್ತದೆಯೋ ಅದೇ ರೀತಿಯಲ್ಲಿ ಈ ಕೆಲವು ಖಾಯಿಲೆ ಇದ್ದವರು ಬಾಳೆ ಹಣ್ಣು ತಿಂದರೆ ಆರೋಗ್ಯ ಹದಗೆಡುತ್ತದೆ.

Banana Health Tip:  ಸಾಮಾನ್ಯವಾಗಿ ಎಲ್ಲರು ತಮ್ಮ ಆರೋಗ್ಯದ (Health) ಮೇಲೆ ಬಹಳ ಕಾಳಜಿಯನ್ನು ವಹಿಸುತ್ತಾರೆ. ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳು ಪೌಷ್ಠಿಕಾಂಶಗಳಿಂದ ಕೂಡಿದ್ದರೆ, ಆರೋಗ್ಯವು ಉತ್ತಮವಾಗಿರುತ್ತದೆ.

ಅದರಲ್ಲೂ ಬಾಳೆ ಹಣ್ಣು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇನ್ನು ನಿಮ್ಮಲ್ಲಿ ಈ ರೀತಿಯ ಸಮಸ್ಯೆ ಇದ್ದರೆ ಬಾಳೆಹಣ್ಣು ತಿನ್ನುವುದು ತುಂಬಾ ಅಪಾಯಕಾರಿಯಾಗಿದೆ. ಹಾಗಾದರೆ ಯಾವ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು ಅನ್ನುವುದರ ಬಗ್ಗೆ ತಿಳಿಯೋಣ.

banana health tips
Image Credit: eatthis

ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ
ಬಾಳೆಹಣ್ಣನ್ನು ತಿನ್ನುವುದರಿಂದ ಮನುಷ್ಯನು ಆರೋಗ್ಯ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಬಾಳೆಹಣ್ಣನ್ನು ಎಲ್ಲರು ಇಷ್ಟಪಡುತ್ತಾರೆ. ಊಟದ ನಂತರ ಬಾಳೆಹಣ್ಣನ್ನು ತಿನ್ನಲು ಹೆಚ್ಚಿನ ಜನರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದೀಗ ನಿಮಗೆ ತಿಳಿಯದೆ ಇರುವ ಬಾಳೆಹಣ್ಣಿನ ಬಗೆಗಿನ ಕೆಲವು ಕುತೂಹಲಕಾರಿ ವಿಷಯವನ್ನು ತಿಳಿಯೋಣ.

ಈ ಕಾಯಿಲೆ ಇರುವವರು ಬಾಳೆಹಣ್ಣನ್ನು ಸೇವಿಸಬಾರದು
ಮಾನವನ ದೇಹದಲ್ಲಿ ಮೂತ್ರಪಿಂಡವು ಪ್ರಮುಖ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತವೆ. ಬೆನ್ನು ನೋವು, ಹೊಟ್ಟೆ ನೋವು, ಪಕ್ಕೆಲುಬುಗಳ ನೋವು, ಒಣ ಚರ್ಮ, ಚರ್ಮದ ತುರಿಕೆ ಕಂಡುಬಂದಲ್ಲಿ ವ್ಯಕ್ತಿಯು ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದರ್ಥ.

A person suffering from kidney failure should not consume banana for any reason. Eating banana fruit is very harmful for people suffering from this disease.
Image Credit: minnetonkaorchards

ಮೂತ್ರಪಿಂಡ ವೈಫಲ್ಯದ ಸಮಸ್ಯೆ ಇರುವ ವ್ಯಕ್ತಿ ಯಾವುದೇ ಕಾರಣಕ್ಕೂ ಬಾಳೆಹಣ್ಣನ್ನು ಸೇವಿಸಬಾರದು. ಬಾಳೆ ಹಣ್ಣು ಸೇವೆನೆ ಈ ಕಾಯಿಲೆ ಇರುವವರಿಗೆ ಬಹಳ ಹಾನಿಕಾರಕವಾಗಿದೆ. ಇನ್ನು ಅತಿಯಾಗಿ ಬಾಳೆಹಣ್ಣು ತಿನ್ನುವುದರಿಂದ ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಹೆಚ್ಚಿನ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಬಾಳೆ ಹಣ್ಣು ಪೊಟ್ಯಾಶಿಯಂ ನಿಂದ ಕೂಡಿದ್ದು ಮಾನವನ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ.

Join Nadunudi News WhatsApp Group

Join Nadunudi News WhatsApp Group