Business Plan: ಮನೆಯಲ್ಲಿ ಆರಂಭಿಸಿ ಚಿಪ್ಸ್ ಫ್ಯಾಕ್ಟರಿ, ಕಡಿಮೆ ಖರ್ಚಿನಲ್ಲಿ ಪ್ರತಿನಿತ್ಯ 4000 ರೂಪಾಯಿ ಆದಾಯ

ಚಿಕ್ಕದಾಗಲಿ ಸ್ವಂತ ಚಿಪ್ಸ್ ಫ್ಯಾಕ್ಟರಿ ಆರಂಭ ಮಾಡಿದರೆ ಪ್ರತಿನಿತ್ಯ 4000 ರೂ ತನಕ ಲಾಭ ಗಾಳಿಸಬಹುದು

Banana Chips Business Plan: ಪ್ರತಿಯೊಬ್ಬರಿಗೂ ತನ್ನದೇ ಆದ ವ್ಯವಹಾರ ಮಾಡಬೇಕು, ನಾವು ಕೂಡ ಆರ್ಥಿಕವಾಗಿ ಪ್ರಬಲರಾಗಿ ಸಾಧನೆ ಮಾಡಬೇಕು ಎಂಥೆಲ್ಲಾ ಕನಸಿರುತ್ತದೆ. ಎಲ್ಲಾ ವ್ಯವಹಾರಗಳಿಗೂ ಹೂಡಿಕೆ ಅಗತ್ಯ ಆಗಿದ್ದು, ಹೂಡಿಕೆ ಮಾಡಿದ ಮೇಲೆ ಲಾಭ ಕಾಣಲೇಬೇಕು, ಇಲ್ಲ ಅಂತಾದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ.

ಹೆಚ್ಚು ಲಾಭದಲ್ಲಿ ವ್ಯಾಪಾರ ಮಾಡುವುದು ಅನಿವಾರ್ಯವಾಗಿದೆ. ಅಂತಹ ವ್ಯವಹಾರಗಳಲ್ಲಿ ಬಾಳೆಕಾಯಿ ಚಿಪ್ಸ್​ ಬ್ಯುಸಿನೆಸ್ ಕೂಡ ಒಂದಾಗಿದೆ ​.ಈ ಬಾಳೆಕಾಯಿ ಚಿಪ್ಸ್ ವ್ಯವಹಕಾರಕ್ಕೆ ಹೆಚ್ಚಿನ ಹೂಡಿಕೆ ಅವಶ್ಯ ಇರುವುದಿಲ್ಲ ಆದರೆ ಉತ್ತಮ ಲಾಭ ಗಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು.

Banana Chips Business Plan
Image Credit: Niceorg

ಬಾಳೆಕಾಯಿ ಚಿಪ್ಸ್ ಬ್ಯುಸಿನೆಸ್ ನಿಂದ ಅಧಿಕ ಲಾಭ ಗಳಿಸಬಹುದಾಗಿದೆ

ಕುರುಕಲು ತಿಂಡಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಈ ಚಿಪ್ಸ್ ಗಳಂತಹ ತಿಂಡಿಗಳೆಂದರೆ ಬಹಳ ಇಷ್ಟ ಆಗಿರುತ್ತದೆ. ಹಾಗೆಯೆ ಆಲೂಗಡ್ಡೆ ಚಿಪ್ಸ್ ಮೊದಲೆಲ್ಲ ತುಂಬ ಫೇಮಸ್ ಆಗಿತ್ತು, ಆದರೆ ಈಗ ಹಾಗಿಲ್ಲ ಆಲೂಗಡ್ಡೆ ಚಿಪ್ಸ್ ಅನ್ನು ಹೆಚ್ಚಿನವರು ತಿನ್ನಲು ಇಷ್ಟ ಪಡುವುದಿಲ್ಲ.ಆದರೆ ಬಾಳೆಕಾಯಿ ಚಿಪ್ಸ್ ಹೆಚ್ಚಿನ ಬೇಡಿಕೆಯನ್ನು ಪಡೆದಿದ್ದು, ಜನರು ಕೂಡ ಬಹಳ ಇಷ್ಟ ಪಡುವ ತಿಂಡಿ ಇದಾಗಿದೆ ಹಾಗಾಗಿ ಈ ಬಾಳೆಕಾಯಿ ಚಿಪ್ಸ್ ವ್ಯವಹಾರ ಮಾಡುವುದರಿಂದ ಲಾಭ ಗಳಿಸಬಹುದಾಗಿದೆ.

ಬಾಳೆಕಾಯಿ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು

Join Nadunudi News WhatsApp Group

ಉತ್ತಮ ಬಾಳೆಕಾಯಿಗಳು, ಎಣ್ಣೆ, ಉಪ್ಪು, ಮಸಾಲೆಗಳು. ಇವುಗಳ ಜೊತೆಗೆ ವಿಶೇಷ ಯಂತ್ರಗಳು ಬೇಕಾಗುತ್ತವೆ. ಬಾಳೆಕಾಯಿ ಸಿಪ್ಪೆ ಸುಲಿಯುವ ಯಂತ್ರ, ಬಾಳೆಕಾಯಿ ತೆಳ್ಳಗೆ ಕತ್ತರಿಸುವ ಯಂತ್ರ, ಬಾಳೆಕಾಯಿ ಚೂರುಗಳನ್ನು ಹುರಿಯಲು ಯಂತ್ರ, ತಯಾರಾದ ಚಿಪ್ಸ್ ಗೆ ಮಸಾಲೆ ಸೇರಿಸಿ ಪ್ಯಾಕಿಂಗ್ ಮಾಡುವ ಯಂತ್ರ ಬೇಕು.ಈ ಯಂತ್ರಗಳ ಬೆಲೆ 28,000 ರೂ.ನಿಂದ 50,000 ರೂ. ಅವುಗಳನ್ನು ಸಂಗ್ರಹಿಸಲು 5000 ಚದರ ಅಡಿ ಜಾಗದ ಅಗತ್ಯವಿದೆ. ಈ ಯಂತ್ರಗಳನ್ನು india.alibaba.com/index.html ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. Amazon ನಲ್ಲಿಯೂ ಲಭ್ಯವಿದೆ .

Banana Chips Business Profit
Image Credit: Pinterest

ಬಾಳೆಕಾಯಿ ಚಿಪ್ಸ್ ವ್ಯವಹಾರದಿಂದ ಗಳಿಸಬಹುದಾದ ಲಾಭ

ಒಂದು ಕೆಜಿ ಬಾಳೆಕಾಯಿಯ ಚಿಪ್ಸ್ ತಯಾರಿಕೆಗೆ 70 ರೂಪಾಯಿ ಖರ್ಚು. ಇವುಗಳನ್ನು ಮಾರುಕಟ್ಟೆಯಲ್ಲಿ ರೂ.90 ರಿಂದ ರೂ.100ಕ್ಕೆ ಮಾರಾಟ ಮಾಡಬಹುದು. ವಾಸ್ತವವಾಗಿ, ಈ ಚಿಪ್ಸ್​ಗಳ ಮಾರುಕಟ್ಟೆ ಬೆಲೆ 250 ಗ್ರಾಂಗೆ 100 ರೂ. ಆದ್ದರಿಂದ ನೀವು ಇನ್ನೂ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಹುದು. ಕೆಜಿ ಚಿಪ್ಸ್ ಮಾರಾಟ ಮಾಡುವ ಮೂಲಕ 10 ರೂ.ಗಳ ಲಾಭ ಗಳಿಸಿದರೆ. ಒಂದು ದಿನದಲ್ಲಿ 4,000 ರೂ.ಗಳ ಲಾಭ ಗಳಿಸಬಹುದು. ತಿಂಗಳಿಗೆ 25 ದಿನ ವ್ಯಾಪಾರ ಮಾಡಿದರೆ ತಿಂಗಳಿಗೆ 1 ಲಕ್ಷ ರೂಪಾಯಿ ಲಾಭ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

Join Nadunudi News WhatsApp Group