Saving Account: ಒಂದು ಬ್ಯಾಂಕಿನ ಉಳಿತಾಯ ಖಾತೆ ಮುಚ್ಚಲು ಎಷ್ಟು ಶುಲ್ಕ ಕಟ್ಟಬೇಕು…? ಹಲವು ಖಾತೆ ಇದ್ದವರ ಗಮನಕ್ಕೆ.
ಇದೀಗ ಬ್ಯಾಂಕ್ ಖಾತೆ ಮುಚ್ಚಲು ಯಾವ ಬ್ಯಾಂಕ್ ಗಳು ಎಷ್ಟು ಶುಲ್ಕ ವನ್ನು ವಿಧಿಸುತ್ತದೆ...?
Bank Account Close Fee: ಸಾಮಾನ್ಯವಾಗಿ ದೇಶದಲ್ಲಿ ಎಲ್ಲರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಕೆಲವರು ಬಹು ಬ್ಯಾಂಕ್ ಖಾತೆಯನ್ನು ತೆರೆದಿರುತ್ತಾರೆ. ಬ್ಯಾಂಕ್ ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳುದು ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ತೆರೆದಿರುವ ಖಾತೆಗಳು ಜನರಿಗೆ ಹೊರೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಮುಚ್ಚಬೇಕಾಗುತ್ತದೆ.
![HDFC Bank Account Close Fee](https://nadunudi.in/wp-content/uploads/2023/09/hdfc-bank-account.png)
ಬ್ಯಾಂಕ್ ಗಳು ಖಾತೆ ಮುಚ್ಚಲು ಶುಲ್ಕ ವಿಧಿಸುತ್ತವೆ
ಬಹು ಬ್ಯಾಂಕ್ ಖಾತೆಯನ್ನು ನಿರ್ವಹಿಸುದು ಕಷ್ಟವಾಗುತ್ತದೆ, ಸಾಕಷ್ಟು ಶುಲ್ಕ ಮತ್ತು ಕನಿಷ್ಠ ಮೊತ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ಗ್ರಾಹಕರು ಬ್ಯಾಂಕ್ ಖಾತೆಯನ್ನು ಮುಚ್ಚಲು ಆಯ್ಕೆ ಮಾಡುತ್ತಾರೆ. ಆದರೆ ಬ್ಯಾಂಕ್ ಖಾತೆ ಮುಹಳು ಕೂಡ ಶುಲ್ಕ ವಿಧಿಸಬೇಕಾಗುತ್ತದೆ. ಇದೀಗ ಬ್ಯಾಂಕ್ ಖಾತೆ ಮುಚ್ಚಲು ಯಾವ ಬ್ಯಾಂಕ್ ಗಳು ಎಷ್ಟು ಶುಲ್ಕ ವನ್ನು ವಿಧಿಸುತ್ತದೆ ಎಂದು ನಾವೀಗ ತಿಳಿಯೋಣ.
HDFC Bank Account
HDFC ಬ್ಯಾಂಕ್ ನಲ್ಲಿ ಖಾತೆ ತೆರೆದು 14 ದಿನದ ಒಳಗೆ ಮುಚ್ಚಲು ಬ್ಯಾಂಕ್ ಯಾವುದೇ ರೀತಿಯ ಶುಲ್ಕವನ್ನು ವಿಧಿಸುದಿಲ್ಲ. ಆದರೆ 15 ದಿನಗಳಿಂದ 12 ತಿಂಗಳಿನ ನಡುವೆ ಖಾತೆ ಮುಚ್ಚಲು ಬಯಸಿದರೆ 500 ರೂ. ಶುಲ್ಕವನ್ನು ವಿಧಿಸುತ್ತದೆ, (ಹಿರಿಯ ನಾಗರಿಕರಿಗೆ 300 ರೂ.). 12 ತಿಂಗಳ ನಂತರ ಮುಚ್ಚಿದರೆ ಯಾವುದೇ ಶುಲ್ಕವನ್ನು ವಿಧಿಸುವ ಅಗತ್ಯ ಇರುದಿಲ್ಲ.
![SBI bank account close fee](https://nadunudi.in/wp-content/uploads/2023/09/SBI-bank-account.png)
SBI Bank Account
SBI ಬ್ಯಾಂಕ್ ನಲ್ಲಿ ಖಾತೆ ತೆರೆದು 15 ದಿನಗಳಿಂದ 1 ವರ್ಷದೊಳಗೆ ಬ್ಯಾಂಕ್ ಖಾತೆ ಮುಚ್ಚಿದರೆ 500 ರೂ. ಶುಲ್ಕ ಹಾಗೆ GST ಪಾವತಿಸಬೇಕಾಗುತ್ತದೆ. 1 ವರ್ಷದ ನಂತರ ತಮ್ಮ ಖಾತೆ ಮುಚ್ಚಿದರೆ SBI ಯಾವುದೇ ರೀತಿಯ ಶುಲ್ಕ ವಿಧಿಸುದಿಲ್ಲ.
ICICI Bank Account
ICICI ಬ್ಯಾಂಕ್ ನಲ್ಲಿ 31 ದಿನದಿಂದ 1 ವರ್ಷದೊಳಗೆ ಖಾತೆ ಮುಚ್ಚಲು ಬಯಸಿದರೆ 500 ರೂ. ಶುಲ್ಕವನ್ನು ವಿಧಿಸುತ್ತವೆ. 1 ವರ್ಷದ ನಂತರ ಬ್ಯಾಂಕ್ ಯಾವುದೇ ರೀತಿಯ ಶುಲ್ಕವನ್ನು ವಿಧಿಸುದಿಲ್ಲ.
![bank account close fee](https://nadunudi.in/wp-content/uploads/2023/09/account-close.png)
Canara Bank Account
ಕೆನರಾ ಬ್ಯಾಂಕ್ ನಲ್ಲಿ ಖಾತೆ ತೆರೆದು 14 ದಿನದ ಒಳಗೆ ಮುಚ್ಚಲು ಬ್ಯಾಂಕ್ ಯಾವುದೇ ರೀತಿಯ ಶುಲ್ಕವನ್ನು ವಿಧಿಸುದಿಲ್ಲ. ಮತ್ತು 14 ದಿನದಿಂದ 1 ವರ್ಷದೊಳಗೆ ಖಾತೆ ಮುಚ್ಚಲು 200 ರೂ. ಶುಕ ಹಾಗೆ GST ಪಾವತಿಸಬೇಕಾಗುತ್ತದೆ. 1 ವರ್ಷದ ನಂತರ ಖಾತೆ ಮುಚ್ಚಿದರೆ 100 ರೂ. ಹಾಗೆ GST ಕಟ್ಟಬೇಕಾಗುತ್ತದೆ.
Yes Bank Account
Yes Bank Account ನಲ್ಲಿ 1 ವರ್ಷದ ನಂತರ ಖಾತೆ ಮುಚ್ಚಿದರೆ ಯಾವುದೇ ಶುಲ್ಕ ವಿಧಿಸುದಿಲ್ಲ. ಇದಲ್ಲದೆ ಖಾತೆ ಮುಚ್ಚಿದರೆ 500 ರೂ. ಶುಲ್ಕ ವಿಧಿಸುತ್ತದೆ.
Punjab And Sind Bank
ಈ ಬ್ಯಾಂಕ್ ನಲ್ಲಿ ಖಾತೆ ತೆರೆದ 14 ದಿನದಿಂದ 12 ತಿಂಗಳೊಳಗೆ ಖಾತೆ ಮುಚ್ಚಿದರೆ 300 ರಿಂದ 500 ರೂ. ಶುಲ್ಕವನ್ನು ವಿಧಿಸುತ್ತದೆ. ಖಾತೆದಾರರ ಮರಣದಿಂದ ಖಾತೆ ಮುಚ್ಚಿದರೆ ಯಾವುದೇ ಶುಲ್ಕ ವಿಧಿಸುದಿಲ್ಲ.
![Yes Bank Account close fee](https://nadunudi.in/wp-content/uploads/2023/09/Yes-Bank.png)
ಬ್ಯಾಂಕ್ ಖಾತೆ ಮುಚ್ಚುವ ವಿಧಾನ
ಬ್ಯಾಂಕ್ ಖಾತೆಯನ್ನು ಮುಚ್ಚಲು ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ಪತ್ರ ಬರೆಯಬೇಕಾಗುತ್ತದೆ. ಅದರಲ್ಲಿ ಮುಚ್ಚಲು ಕಾರಣ, ಪಾಸ್ ಬುಕ್, ಚೆಕ್ ಮತ್ತು ಡೆಬಿಟ್ ಕಾರ್ಡ್ ಅನ್ನು ಹಿಂದಿರುಗಿಸಬೇಕು. ಶಾಖೆಯ ಮುಚ್ಚುವಿಕೆಯ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ಖಾತೆದಾರರು ಹೆಚ್ಚಿನ ಬ್ಯಾಂಕ್ ಗಳಿಗೆ ಭೇಟಿ ನೀಡಬೇಕಾಗುತ್ತದೆ. ಖಾತೆಯು ಯಾವುದೇ ಸಾಲದ ಖಾತೆಗೆ ಅಥವಾ ಬಿಲ್ ಪಾವತಿಗೆ ಲಿಂಕ್ ಆಗಿದ್ದರೆ ಅದನ್ನು ಡಿ-ಲಿಂಕ್ ಮಾಡುದು ಅಗತ್ಯವಾಗಿರುತ್ತದೆ.