Bank Accounts: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ತೆರೆಯಬಹುದು, ಖಾತೆ ತೆರೆಯುವ ಮುನ್ನ ನಿಯಮ ತಿಳಿಯಿರಿ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಿರಬಹುದು ಮತ್ತು ಖಾತೆ ಬಗ್ಗೆ ಬ್ಯಾಂಕ್ ಹೇಳುವುದೇನು.
Bank Account Limit: ದೇಶದ ಪ್ರತಿಯೊಬ್ಬ ವ್ಯಕ್ತಿಯು ಕೂಡ ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುತ್ತಾರೆ. ದೇಶದಲ್ಲಿ 95% ಜನರು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ.
ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುದರಿಂದ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇನ್ನು ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎನ್ನುವ ಬಗ್ಗೆ ಸರ್ಕಾರ ನಿಯಮವನ್ನು ಹೊರಡಿಸಿದೆ. ಈ ಕುರಿತು ಒಂದಿಷ್ಟು ವಿವರವನ್ನು ತಿಳಿಯೋಣ.
ಯಾವ ಖಾತೆಯನ್ನು ಹೊಂದುವುದು ಉತ್ತಮ
ವಿವಿಧ ಬ್ಯಾಂಕ್ ಗಳು ಅನೇಕ ರೀತಿಯ ಬ್ಯಾಂಕ್ ಖಾತೆಗಳನ್ನು ಒದಗಿಸುತ್ತವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಸಂಬಳ ಖಾತೆ ಮತ್ತು ಜಂಟಿ ಖಾತೆ ಹೀಗೆ ಬ್ಯಾಂಕ್ ಗಳಲ್ಲಿ ಅನೇಕ ರೀತಿಯ ಖಾತೆಗಳಿವೆ.
![How many bank accounts can a person open?](https://nadunudi.in/wp-content/uploads/2023/06/bank-account.png)
ಇನ್ನು ಉಳಿತಾಯ ಖಾತೆಯನ್ನು ಹೆಚ್ಚಿನ ಜನರು ತೆರೆಯುತ್ತಾರೆ. ತಮ್ಮ ಹಣವನ್ನು ಉಳಿತಾಯ ಮಾಡಲು ಜನರು ಉಳಿತಾಯ ಖಾತೆಯನ್ನು ಆರಿಸುತ್ತಾರೆ. ಉಳಿತಾಯ ಖಾತೆಯು ಪ್ರಾಥಮಿಕ ಖಾತೆಯಾಗಿದೆ. ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ. ಇನ್ನು ವ್ಯಾಪಾರಸ್ಥರು ಚಾಲ್ತಿ ಖಾತೆಯನ್ನು ತೆರೆಯುತ್ತಾರೆ.
ವ್ಯಾಪಾರ ಮಾಡುವಾಗ ವಹಿವಾಟುಗಳು ಹೆಚ್ಚಿರುವ ಕಾರಣ ಚಾಲ್ತಿ ಖಾತೆಯನ್ನು ತೆರೆಯುತ್ತಾರೆ. ಚಾಲ್ತಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸುವ ಅಗತ್ಯ ಇರುವುದಿಲ್ಲ. ಇನ್ನು ದಂಪತಿಗಳು ಸೇರಿ ಜಂಟಿ ಖಾತೆಯನ್ನು ತೆರೆಯುತ್ತಾರೆ. ಇದರಿಂದ ಸಹ ಸಾಕಷ್ಟು ಅನುಕೂಲಗಳು ಸಿಗಲಿವೆ. ಇನ್ನು ಆರ್ ಬಿಐ ಒಬ್ಬ ವ್ಯಕ್ತಿ ಹೊಂದಬಹುದಾದ ಬ್ಯಾಂಕ್ ಖಾತೆಗೆ ಪ್ರತ್ಯೇಕ ನಿಯಮವನ್ನು ವಿಧಿಸಿದೆ.
![How many bank accounts can a person open?](https://nadunudi.in/wp-content/uploads/2023/06/bank-account-limits.png)
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ತೆರೆಯಬಹುದು
ಇನ್ನು ಒಬ್ಬ ವ್ಯಕ್ತಿಯು ಭಾರತದಲ್ಲಿ ಹೊಂದಬಹುದಾದ ಬ್ಯಾಂಕ್ ಖಾತೆಗಳಿಗೆ ಮಿತಿ ಇಲ್ಲ. ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಹೊಂದಬಹುದು. ಆದರೆ ಹಣಕಾಸು ತಜ್ಞರ ಪ್ರಕಾರ, ಮೂರಕ್ಕಿಂತ ಹೆಚ್ಚಿನ ಖಾತೆಯನ್ನು ತೆರೆಯುವುದರಿಂದ ಕೆಲವು ರೀತಿಯ ತೊಂದರೆ ಎದುರಾಗುತ್ತದೆ ಎನ್ನಲಾಗಿದೆ.
ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮಿತಿಯ ಬಗ್ಗೆ ಸರ್ಕಾರ ಯಾವುದೇ ರೀತಿಯ ನಿಯಮವನ್ನು ಜಾರಿಗೆ ತಂದಿಲ್ಲ. ಜನರು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು.