DA And Earning: ಈ ಸರ್ಕಾರೀ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ದೊಡ್ಡ ಮಟ್ಟದ ಏರಿಕೆ, ಕೇಂದ್ರದ ಭರವಸೆ.

ಸರ್ಕಾರೀ ನೌಕರರ ವೇತನ ಮತ್ತು ಪಿಂಚಣಿ ಹೆಚ್ಚಳದ ಬಗ್ಗೆ ಸರ್ಕಾರದ ನಿರ್ಧಾರ

Bank Employees Salary And DA Hike: ದೇಶದಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಳದ ಬಗ್ಗೆ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿದೆ. ಈಗಾಗಲೇ ಅಕ್ಟೋಬರ್ ನಲ್ಲಿ ಕೇಂದ್ರದಿಂದ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಆಗಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಇದೀಗ ಕೇಂದ್ರ ಈ ಸರ್ಕಾರೀ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ದೊಡ್ಡ ಮಟ್ಟದ ಏರಿಕೆ ತರಲು ಮುಂದಾಗಿದೆ.

Bank Employees Salary Hike
Image Credit: Informal News

ಈ ಸರ್ಕಾರೀ ನೌಕರ ಸಂಬಳ ಮತ್ತು ಪಿಂಚಣಿಯಲ್ಲಿ ದೊಡ್ಡ ಮಟ್ಟದ ಏರಿಕೆ
ಸದ್ಯ ಬ್ಯಾಂಕ್ ನೌಕರರಿಗೆ ಹೊಸ ವರ್ಷದ ಉಡುಗೆರೆಯಾಗಿ ಕೇಂದ್ರದಿಂದ ಘೋಷಣೆ ಹೊರಬಿದ್ದಿದೆ. ಬ್ಯಾಂಕ್ ನೌಕರರ ಮತ್ತು ಪಿಂಚಣಿದಾರರ ವೇತನ ಹೆಚ್ಚಳದ ಸುದ್ದಿ ಹರಿದಾಡುತ್ತಿದೆ. Indian Banks Association ​​(IBA) ಮತ್ತು ಇತರ ಬ್ಯಾಂಕ್ ಒಕ್ಕೂಟಗಳ ನಡುವೆ ವೇತನ ಪರಿಷ್ಕರಣೆ ಕುರಿತು ಒಮ್ಮತವನ್ನು ತಲುಪಲಾಗಿದೆ. 2021-22 ರ ಹಣಕಾಸು ವರ್ಷದಿಂದ ಐದು ವರ್ಷಗಳವರೆಗೆ ವೇತನದಲ್ಲಿ 17% ವಾರ್ಷಿಕ ಹೆಚ್ಚಳವನ್ನು ಒಪ್ಪಿಕೊಳ್ಳಲಾಗಿದೆ. ಇದು ನವೆಂಬರ್ 1, 2022 ರಿಂದ ಜಾರಿಗೆ ಬಂದಿದೆ.

ಸರ್ಕಾರೀ ನೌಕರರ ವೇತನ ಮತ್ತು ಪಿಂಚಣಿ ಹೆಚ್ಚಳ
ಸರ್ಕಾರೀ ಬ್ಯಾಂಕ್ ನೌಕರರು ವಾರದಲ್ಲಿ 5 ದಿನಗಳ ಕೆಲಸವನ್ನು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರವೂ ರಜೆ ಬೇಕೆನ್ನುವುದು ಸರ್ಕಾರೀ ಉದ್ಯೋಗಿಗಳ ಬೇಡಿಕೆಯಾಗಿದೆ. ಸದ್ಯ ವೇತನ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ತಿಂಗಳ ಪ್ರತಿ ಶನಿವಾರವೂ ರಜೆ ಎಂದು ಘೋಷಣೆ ಮಾಡಬೇಕು ಎಂದು ಸಂಘಗಳು ಒತ್ತಾಯಿಸುತ್ತಿದೆ. ಈ ಒಪ್ಪಂದದ ಅಡಿಯಲ್ಲಿ, ಪಿಂಚಣಿ ತಿದ್ದುಪಡಿಯನ್ನು ಸಹ ಅನುಮೋದಿಸಲಾಗಿದೆ. ಬ್ಯಾಂಕ್‌ ಗಳಲ್ಲಿ 5 ದಿನ ಕೆಲಸ ಮಾಡುವ ಬಗ್ಗೆ ಅಂತಿಮ ನಿರ್ಧಾರವನ್ನು ಹಣಕಾಸು ಸಚಿವಾಲಯ ತಗೆದುಕೊಳ್ಳಬೇಕಿದೆ.

Pension Hike Update
Image Credit: Discountwalas

ವೇತನ ಮತ್ತು ಭತ್ಯೆಗಳಲ್ಲಿನ ವಾರ್ಷಿಕ ಹೆಚ್ಚಳವು Financial Year 2022 ಗಾಗಿ ವಾರ್ಷಿಕ ಸಂಬಳದ ಸ್ಲಿಪ್ ವೆಚ್ಚದ 17% ಆಗಿರುತ್ತದೆ. ಇದು SBI ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ ಗಳಿಗೆ ಸುಮಾರು 12,449 ಕೋಟಿ ರೂ. ಎಂಒಯು ಪ್ರಕಾರ, ಮೂಲ ವೇತನದ 8,088 ಪಾಯಿಂಟ್‌ ಗಳಿಗೆ ಅನುಗುಣವಾದ DA ಯನ್ನು ವಿಲೀನಗೊಳಿಸಿ ಮತ್ತು ಅದನ್ನು 3% ಲೋಡ್‌ ನಲ್ಲಿ ಸೇರಿಸಿದ ನಂತರ ಹೊಸ ಸಂಬಳ ರಚನೆಯನ್ನು ಅಕ್ಟೋಬರ್ 21, 2021 ರಂದು ಮಾಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group