FD Investment: FD ಯಲ್ಲಿ ಹೂಡಿಕೆ ಮಾಡುವ ಚಿಂತನೆ ಇದೆಯಾ…? ಹಾಗಾದರೆ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ನೋಡಿ

FD ಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಹಣವನ್ನು ಗಳಿಸಬಹುದು ಎನ್ನುವ ಬಗ್ಗೆ ಸಂಪೂರ್ಣ ವಿವರ

Bank FD Investment Profit: ಜನರು ತಮ್ಮ ಹಣದ ಉಳಿತಾಯಕ್ಕೆ ಬ್ಯಾಂಕ್ ನಲ್ಲಿ FD ಇಡಲು ಮುಂದಾಗುತ್ತಾರೆ. ಬ್ಯಾಂಕ್ ಗಳು ಹಗೂ ಪೋಸ್ಟ್ ಆಫೀಸ್ ಜನರಿಗೆ FD Investment ಆಯ್ಕೆಯನ್ನು ನೀಡುತ್ತದೆ. ಬ್ಯಾಂಕುಗಳು ಗ್ರಾಹಕರು ಇದೀವ FD ಗೆ ಇಂತಿಷ್ಟು ಬಡ್ಡಿದರವನ್ನು ನಿಗದಿಪಡಿಸಿರುತ್ತದೆ.

ಬ್ಯಾಂಕ್ ನೀಡುವ ಬಡ್ಡಿದರದಿಂದಾಗಿ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಇನ್ನು ನೀವು FD ಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ. FD ಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಹಣವನ್ನು ಗಳಿಸಬಹುದು ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Bank FD Investment Interest Rate
Image Credit: Businessleague

FD ಯಲ್ಲಿ ಹೂಡಿಕೆ ಮಾಡುವ ಚಿಂತನೆ ಇದೆಯಾ…?
ಸದ್ಯ ದೇಶದಲ್ಲಿ State Bank of India, Bank of Baroda and Kotak Mahindra Bank ಸೇರಿದಂತೆ ವಿವಾದ ಬ್ಯಾಂಕ್ ಗಳು ತನ್ನ FD ಬಡ್ಡಿದರವನ್ನು ಹೆಚ್ಛ್ಸಿದೆ. ಈ ಮೂಲಕ FD ಹೂಡಿಕೆದಾರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಬ್ಯಾಂಕ್ ಗಳು ಮುಂದಾಗಿದೆ. ತಾಜಾ ಠೇವಣಿಗಳನ್ನು ಆಕರ್ಷಿಸಲು ಮತ್ತು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ನಿರ್ವಹಿಸಲು ಬ್ಯಾಂಕುಗಳು ತಮ್ಮ ಅಲ್ಪಾವಧಿಯ FD ಗಳ ಮೇಲಿನ ದರಗಳನ್ನು ಹೆಚ್ಚಿಸಿವೆ.

ಕೆಲವು ಬ್ಯಾಂಕುಗಳು ಒಂದು ನಿರ್ದಿಷ್ಟ ಅವಧಿಗೆ ಸಣ್ಣ ಏರಿಕೆಗಳನ್ನು ಕೈಗೊಳ್ಳಬಹುದು. ಒಮ್ಮೆ ರೆಪೋ ದರ ಕಡಿಮೆಯಾಗಲು ಪ್ರಾರಂಭಿಸಿದ ನಂತರ, ಎಫ್‌ ಡಿ ದರಗಳು ಸಹ ಕ್ರಮೇಣ ಕಡಿಮೆಯಾಗುತ್ತವೆ. ಹೆಚ್ಚಿನ ಬ್ಯಾಂಕುಗಳು ಒಂದರಿಂದ ಎರಡು ವರ್ಷಗಳ ಅವಧಿಗೆ ಮತ್ತು ಕೆಲವು ಬ್ಯಾಂಕುಗಳು ಎರಡರಿಂದ ಮೂರು ವರ್ಷಗಳ ಅವಧಿಗೆ ತಮ್ಮ ಉತ್ತಮ ದರಗಳನ್ನು ನೀಡುತ್ತವೆ.

Bank FD Investment Profit
Image Credit: Informal News

ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ
ಅನೇಕ SFB ಗಳು 8 ಶೇಕಡಾ ಮತ್ತು ಅದಕ್ಕಿಂತ ಹೆಚ್ಚಿನ FD ದರಗಳನ್ನು ನೀಡುತ್ತಿವೆ. SFB ಗಳನ್ನು RBI ಶೆಡ್ಯೂಲ್ಡ್ ಬ್ಯಾಂಕ್‌ ಗಳು ಎಂದು ವರ್ಗೀಕರಿಸಿರುವುದರಿಂದ ಪ್ರತಿ ಠೇವಣಿದಾರರು ರೂ. 5 ಲಕ್ಷದ ವರೆಗಿನ ಸಂಚಿತ ಠೇವಣಿಗಳಿಗೆ (ಸ್ಥಿರ ಮತ್ತು ಮರುಕಳಿಸುವ ಠೇವಣಿಗಳು ಮತ್ತು ಚಾಲ್ತಿ ಮತ್ತು ಉಳಿತಾಯ ಖಾತೆ ಸೇರಿದಂತೆ) ಠೇವಣಿ ವಿಮಾ ಯೋಜನೆಯಡಿ ಒಳಗೊಳ್ಳುತ್ತಾರೆ.

Join Nadunudi News WhatsApp Group

ನೀವು ಹೂಡಿಕೆ ಮಾಡಲು ಯೋಜಿಸಿರುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯ (NBFC) ದೀರ್ಘಾವಧಿಯ ಕ್ರೆಡಿಟ್ ರೇಟಿಂಗ್ ಅನ್ನು ಪರಿಶೀಲಿಸಿ. AA ಮತ್ತು ಅದಕ್ಕಿಂತ ಹೆಚ್ಚಿನ ದೀರ್ಘಾವಧಿಯ ಕ್ರೆಡಿಟ್ ರೇಟಿಂಗ್ ಬಲವಾದ ಮಟ್ಟದ ಸುರಕ್ಷತೆಯನ್ನು ಸೂಚಿಸುತ್ತದೆ. FD ಯಲ್ಲಿನ ಹೂಡಿಕೆಯು ಮಾರುಕಟ್ಟೆ ಅಪಾಯಗಳಿಂದ ಮುಕ್ತವಾಗಿದ್ದು, ನಿಮಗೆ ಹೆಚ್ಚಿನ ಲಾಭವನ್ನು ನೀಡಲಿದೆ.

Join Nadunudi News WhatsApp Group