Interest Rate: ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತೊಮ್ಮೆ ಗುಡ್ ನ್ಯೂಸ್, ಬಡ್ಡಿದರ ಮತ್ತೆ ಇಳಿಕೆ

ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದವರಿಗೆ ಗುಡ್ ನ್ಯೂಸ್, ಬಡ್ಡಿದರ ಇಳಿಕೆ

Bank Loan Interest Rate Down: ಫೆಬ್ರವರಿ 9 ರಂದು RBI ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ರೆಪೋ ದರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬ್ಯಾಂಕ್ ನಲ್ಲಿ ಸಾಲ ಪಡೆದವರು Repo ದರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರು. ಈ ಬಾರಿ ರೆಪೋ ದರ ಹೆಚ್ಚಾದರೆ ಇನ್ನಷ್ಟು ಹೆಚ್ಚಿನ EMI ಕಟ್ಟಬೇಕಾದ ಪರಿಸ್ಥಿತಿ ಎದುರಗಲಿದೆ ಎನ್ನುವ ಚಿಂತೆ ಸಾಲಗಾರರಲ್ಲಿ ಮೂಡಿತ್ತು. ಸದ್ಯ ಬ್ಯಾಂಕ್ ಲೋನ್ ಮಾಡಿದವರಿಗೆ RBI ಸಿಹಿ ಸುದ್ದಿ ನೀಡಿದೆ.

Bank Loan Interest Rate Down
Image Credit: Original Source

ಬ್ಯಾಂಕ್ ಸಾಲ ಮಾಡಿದವರಿಗೆ ಮತ್ತೊಮ್ಮೆ RBI ನಿಂದ ಗುಡ್ ನ್ಯೂಸ್
Reserve Bank Of India ಮತ್ತೊಮ್ಮೆ ರೆಪೋ ದರವನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ಫೆಬ್ರವರಿ 8 ರಂದು RBI ಗವರ್ನರ್ ಶಕ್ತಿಕಾಂತ ದಾಸ್ ಅವರು ವಿತ್ತೀಯ ಪರಿಶೀಲನಾ ಸಭೆಯ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಸತತ ಆರನೇ ಬಾರಿಗೆ ರೆಪೊ ದರವನ್ನು ಶೇ.6.5 ಲ್ಲೇ ಉಳಿಸಿಕೊಳ್ಳಲು RBI ನಿರ್ಧರಿಸಿದೆ.

Interest Rate Down
Image Credit: Americandeposits

RBI ನಿರ್ಧಾರದ ನಂತರ ಮತ್ತೊಮ್ಮೆ ಬಡ್ಡಿ ದರ ಶೇ.6.5 ರಲ್ಲೇ ಉಳಿದಿದೆ. ಇದರಿಂದ ಈ ವರ್ಷದ ದ್ವಿತೀಯಾರ್ಧದಲ್ಲಿ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವುದರೊಂದಿಗೆ ಸಾಲಗಾರರಿಗೆ ಸ್ವಲ್ಪ ನಿರಾಳತೆ ಸಿಗುವ ಸಾಧ್ಯತೆ ಇದೆ. 2024ರ ಏಪ್ರಿಲ್ 1 ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಬಡ್ಡಿದರ ಇಳಿಕೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ. ಇದರಿಂದ ಗೃಹ ಸಾಲ, ವಾಹನ ಸಾಲ ಸೇರಿ ವಿವಿಧ ಸಾಲಗಳ ಮೇಲಿನ ಬಡ್ಡಿದರ ಕೊಂಚ ಇಳಿಕೆಯಾಗಿ ಸಾಲ ಪಡೆದುಕೊಂಡವರಿಗೆ ಸ್ವಲ್ಪ ನಿರಾಳವಾಗುವ ಸಂಭವ ಇದೆ.

Join Nadunudi News WhatsApp Group

Join Nadunudi News WhatsApp Group