Locker Safety: ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡುವವರಿಗೆ ಕೇಂದ್ರದಿಂದ ಹೊಸ ರೂಲ್ಸ್, ನಿಯಮ ಬದಲಾವಣೆ.

ಬ್ಯಾಂಕ್ ಲಾಕರ್ ನಲ್ಲಿ ವಸ್ತುಗಳನ್ನು ಇಡುವ ಮುನ್ನ ಈ 5 ವಿಚಾರಗಳ ಬಗ್ಗೆ ನಿಮಗೆ ಅರಿವಿರಲಿ

Bank Locker Safety Rule: ಸಾಮಾನ್ಯವಾಗಿ ಮನೆಯಲ್ಲಿ ಜನರು ತಮ್ಮ ಬೆಲೆ ಬಾಳುವ ವಸ್ತುಗಳನ್ನು, ಚಿನ್ನವನ್ನು, ಆಸ್ತಿ ದಾಖಲೆಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಇಷ್ಟೊಂದು ಅಮೂಲ್ಯವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಅಷ್ಟು ಸೂಕ್ತವಲ್ಲ. ಏಕೆಂದರೆ ಕೆಲವೊಂದು ಸಮಯದಲ್ಲಿ ಅನಿರೀಕ್ಷಿತವಾಗಿ ಕಳ್ಳರ ಹಾವಳಿಯಿಂದಾಗಿ ಎಲ್ಲವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಇಂತಹ ಸಂದರ್ಭದಲ್ಲಿ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳವು ನೀವು Bank Loacker ಅನ್ನು ಬಳಸಿಕೊಳ್ಳಬಹದು.

ಬ್ಯಾಂಕ್ ಲಾಕರ್ ನಲ್ಲಿ ನಿಮ್ಮ ಅಮೂಲ್ಯ ವಸ್ತುಗಳನ್ನು ಇಡುವುದರಿಂದ ಹೆಚ್ಚಿನ ಸುರಕ್ಷತೆ ಸಿಗುತ್ತದೆ. ಬ್ಯಾಂಕ್ ನಿಮಗೆ ಲಾಕರ್ ಸೌಲಭ್ಯವನ್ನು ನೀಡುತ್ತದೆ. ಇದರಿಂದ ನೀವು ನಿಮ್ಮ ಅಮೂಲ್ಯ ವಸ್ತುಗಳನ್ನು ಬಹಳ ಜಾಗರಿಕತೆಯಿಂದ ಇಟ್ಟುಕೊಳ್ಳಬಹುದಾಗಿದೆ. ಆದರೆ ನೀವು ಬ್ಯಾಂಕ್ ಲಾಕರ್ ನಲ್ಲಿ ನಿಮ್ಮ ವಸ್ತುಗಳನ್ನು ಇಡುವ ಮೊದಲು ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

Bank Locker Safety Rule
Image Credit: Businessleague

ಬ್ಯಾಂಕ್ ಲಾಕರ್ ನಲ್ಲಿ ವಸ್ತುಗಳನ್ನು ಇಡುವ ಮುನ್ನ ಈ 5 ವಿಚಾರಗಳ ಬಗ್ಗೆ ನಿಮಗೆ ಅರಿವಿರಲಿ
*ನೀವು Bank Locker ಅನ್ನು ಹೊಂದಲು ಆ ಬ್ಯಾಂಕ್ ನಲ್ಲಿ ನಿಮ್ಮದೇ ಆದ ಖಾತೆ ಇರಬೇಕು ಎನ್ನುವ ನಿಯಮವಿಲ್ಲ. ನೀವು ಬೇರೆ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ನೀವು ಲಾಕರ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.

*ಇನ್ನು ಕೆಲ ಬ್ಯಾಂಕ್ ಗಳು ತಮ್ಮ ಬಳಿ Bank Locker ಸೌಲಭ್ಯ ಇಲ್ಲ ಎಂದಿರುವುದು RBI ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ 2021 ರಲ್ಲಿ RBI ಹೊಸ ನಿಯಮ ರೂಪಿಸಿದ್ದು, Bank Locker ವಿಚಾರದಲ್ಲಿ ಗ್ರಾಹಕರ ಜೊತೆ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು RBI ಸೂಚಿಸಿದೆ.

*Bank Locker ಅನ್ನು ಆರಂಭಿಸಿದ ವ್ಯಕ್ತಿಗೆ FD ಹೂಡಿಕೆ ಮಾಡಲು ಸೂಚಿಸಲಾಗುತ್ತದೆ. ಕಾರಣ ಗ್ರಾಹಕರು ತಮ್ಮ ಲಾಕರ್ ಸೇವೆಗೆ ಸರಿಯಾಗಿ ಸ್ಪಂದಿಸದಿದ್ದರೆ FD ಖಾತೆಯಲ್ಲಿನ ಹಣವನ್ನು ಬ್ಯಾಂಕ್ ತನ್ನದಾಗಿಸಿಕೊಳ್ಳುತ್ತದೆ.

Join Nadunudi News WhatsApp Group

Bank Locker Rules Update
Image Credit: Reuters

*ಬ್ಯಾಂಕ್ ನಲ್ಲಿ ಲಾಕರ್ ತೆಗೆದುಕೊಡವರು ನಾಮಿನಿಯನ್ನು ನೇಮಿಸಬೇಕಾಗುತ್ತದೆ. ಲಾಕರ್ ಹೊಂದಿರುವವರು ಮರಣ ಹೊಂದಿದರೆ, ನಾಮಿನಿಯು ಲಾಕರ್ ಅಧಿಕಾರವನ್ನು ಪಡೆಯಲು ಅರ್ಹನಾಗುತ್ತಾನೆ.

*ಇನ್ನು ಬ್ಯಾಂಕ್ ಲಾಕರ್ ಗೆ 100 % ಗ್ಯಾರಂಟಿ ಇರುವುದಿಲ್ಲ. ಬ್ಯಾಂಕ್ ದಿವಾಳಿಯಾದ ಸಮಯದಲ್ಲಿ ಅಥವಾ ಬ್ಯಾಂಕ್ ಮುಚ್ಚಿಹೋದ ಸಮಯದಲ್ಲಿ ಲಾಕರ್ ಗೆ ಯಾವುದೇ ರೀತಿಯ Insurance ಇರುವುದಿಲ್ಲ. ಈ ಕಾರಣಕ್ಕೆ ಲಾಕರ್ ಮಾಡಿಸುವ ಸಮಯದಲ್ಲಿ ಇನ್ಶೂರೆನ್ಸ್ ಮಾಡಿಸುವುದು ಅತಿ ಮುಖ್ಯ. ಇನ್ನು Bank Locker ನಲ್ಲಿ ನಿಮ್ಮ ವಸ್ತುವನ್ನು ಇಡಬೇಕಾದರೆ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group