Bank Rules: ಬ್ಯಾಂಕ್ ಗ್ರಾಹಕರೇ ಎಚ್ಚರ, ಮೇ ತಿಂಗಳಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು

ಮೇ ತಿಂಗಳಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ಬ್ಯಾಂಕ್ ನಿಯಮಗಳು

Bank Rules Change From May 1st: ಇನ್ನು 2 ದಿನದಲ್ಲಿ ಏಪ್ರಿಲ್ ತಿಂಗಳು ಮುಗಿದು 2024 ರ ಮೇ ತಿಂಗಳು ಆರಂಭವಾಗಲಿದೆ. ಪ್ರತಿ ತಿಂಗಳ ಆರಂಭದಲ್ಲಿ ಬ್ಯಾಂಕ್ ಖಾತೆ ನಿಯಮಗಳು, ಕ್ರೆಡಿಟ್ ಕಾರ್ಡ್ ನಿಯಮಗಳು, LPG ಸಿಲಿಂಡರ್ ದರಗಳು ಬದಲಾವಣೆ ಆಗುದು ಸಹಜ.

ಅದೇ ರೀತಿ ಈ ಮೇ ತಿಂಗಳ ಆರಂಭದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ಹೊಸ ನಿಯಮಗಳು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ. ಇದೀಗ ನಾವು ಈ ಮೇ ತಿಂಗಳ ಆರಂಭದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಯಾವೆಲ್ಲ ಬದಲಾವಣೆಗಳು ಆಗಲಿದೆ ಎಂದು ನೋಡೋಣ.

ICICI Bank Service Charges
Image Credit: Pune News

ICICI ಸೇವಾ ಶುಲ್ಕ ಬದಲಾವಣೆ
ಖಾಸಗಿ ವಲಯದ ಬ್ಯಾಂಕ್ ಆಗಿರುವ ICICI ತನ್ನ ಉಳಿತಾಯ ಖಾತೆಯ ಸೇವಾ ಶುಲ್ಕದ ನಿಯಮವನ್ನು ಬದಲಾಯಿಸಿದೆ. ಗ್ರಾಮೀಣ ಪ್ರದೇಶದ ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕ 99 ರೂ. ಆಗಿದೆ, ಆದರೆ ನಗರ ಪ್ರದೇಶದಲ್ಲಿ 200 ರೂ ಪಾವತಿಸಬೇಕಾಗುತ್ತದೆ. ಇನ್ನು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಸಂದರ್ಭದಲ್ಲಿ 25 ಪುಟಗಳ ವರೆಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ, ಇದಾದ ನಂತರ ಪ್ರತಿ ಪುಟಕ್ಕೆ 4 ರೂ ಪಾವತಿಸಬೇಕು. ಹಾಗೆ IMPS ವಹಿವಾಟು ಶುಲ್ಕ 2.50 ರೂ. ನಿಂದ 15 ರೂ. ಎಂದು ನಿಗದಿಪಡಿಸಲಾಗಿದೆ.

HDFC Bank FD Scheme
ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಹಿರಿಯ ನಾಗರಿಕರಿಗಾಗಿ ತನ್ನ FD ಅವಧಿಯನ್ನ ಮೇ 10 ರವರೆಗೆ ವಿಸ್ತರಿಸಿದೆ. ಈ ನಿಶ್ಚಿತ ಠೇವಣಿ ಯೋಜನೆಯಡಿ ಬ್ಯಾಂಕ್ ಹಿರಿಯ ನಾಗರಿಕರಿಗೆ 0.75 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಹೂಡಿಕೆದಾರರು 5-10 ವರ್ಷಗಳ ಅವಧಿಯ FD ಮೇಲೆ 7.75 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಡಿ 5 ಕೋಟಿ ತನಕ ಠೇವಣಿ ಮಾಡಬಹುದಾಗಿದೆ.

HDFC Bank FD Scheme
Image Credit: ABP Live

Yes Bank ಉಳಿತಾಯ ಖಾತೆ ನಿಯಮ
ಮೇ 1 ರಿಂದ ವಿವಿಧ ರೀತಿಯ ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಬದಲಾಗಲಿದೆ. Yes Bank Pro max ಕನಿಷ್ಠ ಸರಾಸರಿ ಬ್ಯಾಲೆನ್ಸ್ 50 ಸಾವಿರ ರೂ. ಆಗಿರುತ್ತದೆ. ಇದರ ಮೇಲಿನ ಗರಿಷ್ಠ ಶುಲ್ಕ 1 ಸಾವಿರಕ್ಕೆ ನಿಗದಿಪಡಿಸಲಾಗಿದೆ.

Join Nadunudi News WhatsApp Group

Yes Bank Saving Account Rules
Image Credit: Businesstoday

Join Nadunudi News WhatsApp Group