Bank Single Deposit Limit: ಇನ್ಮುಂದೆ ಬ್ಯಾಂಕ್ ಖಾತೆಗೆ ಇಷ್ಟು ಹಣ ಮಾತ್ರ ಡೆಪಾಸಿಟ್ ಮಾಡಬಹುದು, RBI ನಿಂದ ನಿಯಮ ಜಾರಿ.
ಇನ್ಮುಂದೆ ಬ್ಯಾಂಕ್ ಖಾತೆಗೆ ಇಷ್ಟು ಹಣ ಮಾತ್ರ ಡೆಪಾಸಿಟ್ ಮಾಡಬಹುದು
Bank Single Deposit Limit Increased: ಸಾಮಾನ್ಯವಾಗಿ ಎಲ್ಲರು ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಬ್ಯಾಂಕ್ ನಲ್ಲಿ ಹಣಕಾಸಿನ ವಹಿವಾಟುಗಳು ನಡೆಯುತ್ತಲೇ ಇರುತ್ತದೆ. ಇನ್ನು RBI ಬ್ಯಾಂಕ್ ಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತದೆ. ಬ್ಯಾಂಕ್ ನ ಎಲ್ಲಾ ಹಕಾಸಿನ ವಹಿವಾಟುಗಳು ಕೂಡ RBI ನಿಯಮಾನುಸಾರ ನಡೆಯುವುದು ಅಗತ್ಯವಾಗಿದೆ.
ಸದ್ಯ RBI ಒಂದು ಬ್ಯಾಂಕ್ ಖಾತೆಗೆ ಒಮ್ಮೆಗೆ ಕಳುಹಿಸಬಹುದಾದ ಹಣದ ಮೊತ್ತದ ಮಿತಿಯ ನಿಯಮದಲ್ಲಿ ಬದಲಾವಣೆಯನ್ನು ತಂದಿದೆ. ಹೌದು, ಹಣ ಪಾವತಿಸುವ ಮೊತ್ತದ ಮಿತಿಯನ್ನು RBI ಹೆಚ್ಚಿಸಿದೆ. RBI ಬ್ಯಾಂಕ್ ನಲ್ಲಿ ಒಮ್ಮೆಲೇ ಇರಿಸಬಹುದಾದ ಹಣದ ಮೊತ್ತವನ್ನು ಎಷ್ಟು ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
![Bank Single Deposit Limit Increased](https://nadunudi.in/wp-content/uploads/2024/06/Bank-Single-Deposit-Limit-Increased.png)
ಇನ್ಮುಂದೆ ಬ್ಯಾಂಕ್ ಖಾತೆಗೆ ಇಷ್ಟು ಹಣ ಮಾತ್ರ ಡೆಪಾಸಿಟ್ ಮಾಡಬಹುದು
ನೀವು ಒಂದು ಬಾರಿಗೆ ಒಂದು ಬ್ಯಾಂಕ್ ಖಾತೆಗೆ ಕಳುಹಿಸಬಹುದಾದ ಹಣದ ಮಿತಿಯನ್ನು RBI ಹೆಚ್ಚಿಸಿದೆ. ಈಗ ಒಂದೇ ಠೇವಣಿಯಲ್ಲಿ 3 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಇಡಬಹುದಾಗಿದೆ. ಎಂಪಿಸಿ ಸಭೆಯ ನಂತರ RBK ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯವನ್ನು ಪ್ರಕಟಿಸಿದರು. ಇಲ್ಲಿಯವರೆಗೆ ನೀವು ಬ್ಯಾಂಕ್ ಗಳಲ್ಲಿ ಒಂದೇ ಠೇವಣಿಯಲ್ಲಿ 2 ಕೋಟಿ ರೂ. ಹಣವನ್ನು ಮಾತ್ರ ಠೇವಣಿ ಮಾಡಲು ಅವಕಾಶವಿತ್ತು. ಇನ್ನು 2 ಕೋಟಿ ಹಣದ ಹೊರತಾಗಿ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಅದನ್ನು Bulk FD ಎಂದು ಪರಿಗಣಿಸಲಾಗುತ್ತಿತ್ತು. ಇದೀಗ RBI ಬಲ್ಕ್ ಡೆಪಾಸಿಟ್ ಮಿತಿಯನ್ನು 3 ಕೋಟಿ ರೂ.ಗೆ ಹೆಚ್ಚಿಸಿದೆ. ಅಂದರೆ, 3 ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಏಕ ಠೇವಣಿಗಳನ್ನು Bulk Deposit ಎಂದು ಪರಿಗಣಿಸಲಾಗುವುದಿಲ್ಲ.
ಬಲ್ಕ್ ಡೆಪಾಸಿಟ್ ಎಂದರೇನು….?
ಈ ಹಿಂದೆ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಎರಡು ಕೋಟಿ ರೂಪಾಯಿಗಿಂತ ಹೆಚ್ಚಿನ ಒಂದೇ ಠೇವಣಿಯನ್ನು Bulk Deposit ಎಂದು ಪರಿಗಣಿಸಲಾಗಿತ್ತು. ಈಗ ಅದರ ವ್ಯಾಖ್ಯಾನ ಬದಲಾಗಿದೆ. “ಎಸ್ಸಿಬಿ ಮತ್ತು ಎಸ್ಎಫ್ಬಿಗಳಲ್ಲಿ 3 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿಗಳನ್ನು Single Rupee Term Deposit ಎಂದು ಪರಿಗಣಿಸಲಾಗುವುದು” ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್ ಗಳ ಠೇವಣಿಗಳಿಗೆ 3 ಲಕ್ಷ ರೂ. ಗಿಂತ ಕಡಿಮೆ ಮೊತ್ತದ ಹಣವನ್ನು ಸಿಂಗಲ್ ಡೆಪಾಸಿಟ್ ನಲ್ಲಿ ಜಮಾ ಮಾಡಬಹುದು.
![Bank Single Deposit Limit](https://nadunudi.in/wp-content/uploads/2024/06/Bank-Single-Deposit-Limit.png)