Bank Strike: ಬ್ಯಾಂಕ್ ನೌಕರರ ಬಹುದೊಡ್ಡ ಮುಷ್ಕರ, ಬರೋಬ್ಬರಿ 13 ದಿನಗಳು ಬ್ಯಾಂಕ್ ಬಂದ್.

ಇದೀಗ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

Bank Workers Strike: ಇತ್ತೀಚಿಗೆ ಬ್ಯಾಂಕ್ ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ. ಕೆಲಸ ಹೆಚ್ಚಿದ್ದರೂ ಸಹ ನೇಮಕಾತಿ ನೆಡೆಯುತ್ತಿಲ್ಲ ಎಂದು ಬ್ಯಾಂಕ್ ನೌಕರರ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ.

ಹೀಗಾಗಿ ಬ್ಯಾಂಕಿಂಗ್ ವಲಯದ ಉದ್ಯೋಗಿಗಳ ಅತಿದೊಡ್ಡ ಸಂಘವಾದ All India Bank Employees Association ಮುಷ್ಕರಕ್ಕೆ ಕರೆ ನೀಡಿದೆ. ಇದೀಗ ನೌಕರರು ಯಾವ ಕಾರಣಕ್ಕೆ ಮತ್ತು ಯಾವಾಗ ಮುಷ್ಕರ ನೆಡೆಸಲಿದ್ದಾರೆ ಎಂದು ನಾವೀಗ ತಿಳಿಯೋಣ.

Bank Workers Strike
Image Credit: Livemint

ಕಾರ್ಮಿಕರನ್ನು ಹೆಚ್ಚಿಸಬೇಕೆಂಬ ಬೇಡಿಕೆ
ಈ ಮುಷ್ಕರಗಳ ಮೂಲಕ ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಯಸುತ್ತಾರೆ. ಮುಷ್ಕರದ ಮೊದಲ ದಿನದ ಬೇಡಿಕೆ ನೌಕರರ ನೇಮಕಾತಿಯನ್ನು ಹೆಚ್ಚಿಸುವುದಾಗಿದೆ. ಗುಮಾಸ್ತರು ಮತ್ತು ಅಧೀನ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಮೇಲ್ವಿಚಾರಣ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮತ್ತು ಬ್ಯಾಂಕ್‌ಗಳ ಪ್ರಯತ್ನವಾಗಿದೆ. ಇದು ಕೈಗಾರಿಕಾ ವಿವಾದ ಕಾಯಿದೆಯ ಅಡಿಯಲ್ಲಿ ಉದ್ಯೋಗಿಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ತೋರುತ್ತದೆ ಎಂದು AIBEA ನ ಪ್ರಧಾನ ಕಾರ್ಯದರ್ಶಿಯಾದ C .H ವೆಂಕಟಾಚಲಂ ಮಾತನಾಡಿದ್ದಾರೆ.

ಖಾಯಂ ನೌಕರರ ನೇಮಕ
ಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹೊರಗುತ್ತಿಗೆ ನಿಯಮಿತ ಮತ್ತು ಖಾಯಂ ನೌಕರರನ್ನು ಕಡಿಮೆ ಮಾಡಿ ಗುತ್ತಿಗೆದಾರರಿಗೆ ತರಲು ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದಕ್ಕಾಗಿಯೇ ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳಲ್ಲಿ ಕ್ಲೆರಿಕಲ್ ಸಿಬ್ಬಂದಿಗಳ ನೇಮಕಾತಿಯಲ್ಲಿ ಗಮನಾರ್ಹ ಕುಸಿತವಾಗಿದೆ ಹಾಗೆ ಅಧೀನ ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದರ ಮೇಲೆ ವಾಸ್ತವಿಕ ನಿಷೇಧವಿದೆ ಇದರಿಂದಾಗಿ ಅನೇಕ ವ್ಯಕ್ತಿಗಳು ತಾತ್ಕಾಲಿಕ ಮತ್ತು ಕ್ಯಾಶುಯಲ್ ಆಗಿ ಕೆಲಸ ಮಾಡಬೇಕಾಗಿದೆ.

Bank employees to strike work for 13 days from December to January
Image Credit: Trak

ಈ ದಿನದಂದು ದೇಶದ ಎಲ್ಲಾ ಬ್ಯಾಂಕುಗಳು ಬಂದ್
ಬ್ಯಾಂಕಿಂಗ್ ವಲಯದ ಉದ್ಯೋಗಿಗಳ ಅತಿದೊಡ್ಡ ಸಂಘವಾದ All India Bank Employees Association ಡಿಸೇಂಬರ್ 4 , ರಿಂದ ಜನವರಿ 20 , 2024 ವರೆಗೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದೆ. ವಿವಿಧ ರಾಜ್ಯಗಳ ಬ್ಯಾಂಕ್ ಉದ್ಯೋಗಿಗಳು ಜನವರಿ 2 ರಿಂದ 6 ರವರೆಗೆ ಮುಷ್ಕರದಲ್ಲಿ ಭಾಗವಹಿಸುತ್ತಾರೆ. ಇದು 19 ರಿಂದ 20 ಜನವರಿ 2024 ರ ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರದ ನಂತರ ಮುಕ್ತಾಯಗೊಳ್ಳುತ್ತದೆ. ಈ ಮುಷ್ಕರವನ್ನು ನಿರಂತವಾಗಿ ನೆಡೆಸದೆ ವಿವಿಧ ದಿನಗಳಲ್ಲಿ ನೆಡೆಸುತ್ತಾರೆ.

Join Nadunudi News WhatsApp Group

Join Nadunudi News WhatsApp Group