Farmers Compensation: ರಾಜ್ಯದ ರೈತರಿಗೆ ಇನ್ನೊಂದು ಗುಡ್ ನ್ಯೂಸ್, ಈ ರೈತರ ಖಾತೆಗೆ ಸಂಪೂರ್ಣ ಪರಿಹಾರ ಹಣ ಜಮಾ.

ಈ ರೈತರ ಖಾತೆಗೆ ಸಂಪೂರ್ಣ ಬೆಳೆ ಪರಿಹಾರ ಹಣ ಜಮಾ

Bele Parihara Karnataka 2024: ಸದ್ಯ ರಾಜ್ಯದಲ್ಲಿ ರೈತರ ಬೆಳೆ ಪರಿಹಾರ ಮೊತ್ತದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. 2023 ರಲ್ಲಿ ಬೆಳೆ ಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ರೈತರು ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.

ಮೊದಲ ಕಂತಿನಲ್ಲಿ ರೈತರು ತಮ್ಮ ಖಾತೆಗೆ 2,000 ರೂ. ಹಣವನ್ನು ಪಡೆದಿದ್ದರೆ. ಸದ್ಯ ರೈತರ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ರೈತರ ಇದೀಗ ಶೀಘ್ರದಲ್ಲೇ ಮುಂದಿನ ಕಂತಿನ ಬೆಳೆ ಪರಿಹಾರ ಮೊತ್ತ ಬಿಡುಗಡೆಯಾಗುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಸಚಿವರಾದ ಕೃಷ್ಣಾ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

Farmers Crop Compensation
Image Credit: Deccanherald

ರಾಜ್ಯದ ರೈತರಿಗೆ ಇನ್ನೊಂದು ಗುಡ್ ನ್ಯೂಸ್
ಇನ್ನು NDRF ಹಣ ಬಿಡುಗಡೆಯಾದ ತಕ್ಷಣ ರೈತರಿಗೆ ಅವರ ಅರ್ಹತೆಗೆ ಅನುಗುಣವಾಗಿ ಪರಿಹಾರವನ್ನು ನೀಡಲಾಗುತ್ತದೆ. ಇದುವರೆಗೆ ಮೊದಲ ಹಂತದಲ್ಲಿ 2,000 ರೂ. ಮತ್ತು ಇದುವರೆಗೆ ಎರಡನೇ ಕಂತಿನ ಪರಿಹಾರ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗಳಿಗೆ ಬೆಳೆ ಪರಿಹಾರವನ್ನು ಜಮಾ ಮಾಡಲಾಗಿದೆ. ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆಯಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ಈ ಮೂಲಕ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

Farmers Crop Compensation Latest Update
Image Credit: Devdiscourse

ಈ ರೈತರ ಖಾತೆಗೆ ಸಂಪೂರ್ಣ ಪರಿಹಾರ ಹಣ ಜಮಾ
ಸುಮಾರು ತಾಲೂಕುಗಳಲ್ಲಿ ಬರಪರಿಹಾರ ಪಟ್ಟಿಗೆ ಸೇರ್ಪಡೆಯಾಗದ ಮಳೆಯಾಶ್ರಿತ ಬೆಳೆಗಳಿಗೆ ಪರಿಹಾರ ವಿತರಿಸಲು ಹಾಗೂ 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಸುಮಾರು 1.63 ಲಕ್ಷ ಅರ್ಹ ರೈತರಿಗೆ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯದಲ್ಲಿ ತೊಡಗಿರುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಜೀವನಾಧಾರ ಕಳೆದುಕೊಂಡವರಿಗೆ ತಲಾ 3,000 ರೂ. ಪರಿಹಾರ ನೀಡಲು ಕೂಡ ನಿರ್ಧರಿಸಲಾಗಿದೆ ಎಂದು ಸಚಿವರಾದ ಕೃಷ್ಣಾ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

ನೀರು ಮತ್ತು ಮೇವು ನಿರ್ವಹಣೆಗಾಗಿ ಇದುವರೆಗೆ 202 ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳು ಮತ್ತು 462 ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 594 ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Join Nadunudi News WhatsApp Group

Farmers Crop Compensation Money
Image Credit: Karnatakatimes

Join Nadunudi News WhatsApp Group