Basavaraj Bommai: ಬಹಿರಂಗವಾಯಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಒಟ್ಟು ಆಸ್ತಿ.

ಬಸವರಾಜ್ ಬೊಮ್ಮಾಯಿ ಅವರ ಬಳಿ ಒಟ್ಟು ಎಷ್ಟು ಆಸ್ತಿ ಇದೆ ಮತ್ತು ದೇಶದ ಶ್ರೀಮಂತ ಮುಖ್ಯ ಮಂತ್ರಿಗಳಲ್ಲಿ ಅವರಿಗೆ ಎಷ್ಟನೇ ಸ್ಥಾನ.

Basavaraj Bommai Total Net Worth: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆಯೇ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಒತ್ತು ಆಸ್ತಿ ಎಷ್ಟಿದೆ ಎಂಬುವುದು ಬಹಿರಂಗವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಇದೆ ವೇಳೆ ಅವರು ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ. ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

Basavaraj Bommai Total Net Worth
Image Source: Hindusthan Times

ತಮ್ಮಲ್ಲಿರುವ ಆಸ್ತಿ ಬಗ್ಗೆ ಬಹಿರಂಗಪಡಿಸಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಆ ಅವರ ಕುಟುಂಬದರವರ ಹೆಸರಿನಲ್ಲಿ 5.98 ಕೋಟಿ ರೂಪಾಯಿ ಚರಾಸ್ತಿ ಸೇರಿದಂತೆ 22.95 ಕೋಟಿ ಸ್ಥಿರಾಸ್ತಿ ಇದೆಯಂತೆ. ಇದೆ ವೇಳೆ ಸಿಎಂ ಬೊಮ್ಮಾಯಿ ತಮ್ಮ ಬಳಿ ಸ್ವಂತ ವಾಹನ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಒಟ್ಟು 5.79 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ. ತಮ್ಮ ಹಿಂದೂ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂಪಾಯಿ ಚರಾಸ್ತಿ,19.20 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ. ಪುತ್ರಿ ಹೆಸರಲ್ಲಿ 1.28 ಕೋಟಿ ರೂಪಾಯಿ ಚರಾಸ್ತಿ, ಸಿಎಂ ಅವರ ಕೈಯಲ್ಲಿ 3 ಲಕ್ಷ ರೂಪಾಯಿ ನಗದು, ಪತ್ನಿ ಕೈಯಲ್ಲಿ 50,000 ರೂಪಾಯಿ ನಗದು, ಪುತ್ರಿ ಅದಿತಿ ಬೊಮ್ಮಾಯಿ ಕೈಯಲ್ಲಿ 25,000 ರೂ ನಗದು ಇರುವುದಾಗಿ ಮಾಹಿತಿ ನೀಡಿದ್ದಾರೆ.

Basavaraj Bommai Total Net Worth
Image Source: Times Of India

ಬಸವರಾಜ ಬೊಮ್ಮಾಯಿ ಅವರ ಹೂಡಿಕೆಗಳು
ಇನ್ನು ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ ಇರುವ ಸಾಲದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಬೊಮ್ಮಾಯಿ ಅವರ ಬಳಿ ಬ್ಯಾಂಕುಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಠೇವಣಿ ಇದೆಯಂತೆ. ಅವರು ಪತ್ನಿ ಬಳಿ 27.6 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರಂತೆ. ವಿವಿಧ ಕಂಪನಿಗಳಲ್ಲಿ ಅವರು ಸುಮಾರು 7 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

Join Nadunudi News WhatsApp Group

ಪತ್ನಿ ಚನ್ನಮ್ಮಾ ಅವರು ಸುಮಾರು 7 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಪುತ್ರಿ ಹೆಸರಲ್ಲೂ 23 ಲಕ್ಷ ರೂಪಾಯಿ ಹೂಡಿಕೆ ಮಾಡಲಾಗಿದೆ. ಅವಿಭಕ್ತ ಕುಟುಂಬದಿಂದ ಬಸವರಾಜ ಬೊಮ್ಮಾಯಿ 1.42 ಕೋಟಿ ರೂಪಾಯಿ ಸಾಲವಿದೆ ಎಂದು ವರದಿಯಾಗಿದೆ.

Basavaraj Bommai Total Net Worth
Image Source: Times Of India

ಬಸವರಾಜ್ ಬೊಮ್ಮಾಯಿ ಅವರ ಬಳಿ ಸುಮಾರು 8 ಕೋಟಿ ರೂಪಾಯಿ ಆಸ್ತಿ ಎಂದು ಲೆಕ್ಕಾಚಾರ ಮಾಡಲಾಗಿದೆ. ದೇಶದ ಶ್ರೀಮಂತ ಮುಖ್ಯ ಮಂತ್ರಿಗಳ ಪಟ್ಟಿ ಬಿಡುಗಡೆ ಆಗಿದ್ದು ಅದರಲ್ಲಿ ಬಸವರಾಜ್ ಬೊಮ್ಮಾಯಿ ಅವರು ಕೊನೆಯಲ್ಲಿ ಇದ್ದಾರೆ. ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಸವರಾಜ್ ಬೊಮ್ಮಾಯಿ ಅವರು ಹೆಚ್ಚಿನ ಆಸ್ತಿಯನ್ನ ಮಾಡಿಕೊಂಡಿಲ್ಲ ಅನ್ನುವುದು ಬಹಳ ಹೆಮ್ಮೆಯ ವಿಷಯ ಆಗಿದೆ.

Join Nadunudi News WhatsApp Group