Property Tax 2024: ಸ್ವಂತ ಆಸ್ತಿ ಇರುವವರಿಗೆ ಏಪ್ರಿಲ್ ನಿಂದ ಹೊಸ ರೂಲ್ಸ್, ಜಾರಿಗೆ ಬಂತು ಹೊಸ ತೆರಿಗೆ ನಿಯಮ

ಏಪ್ರಿಲ್ 1 2024 ರ ಹೊಸ ತೆರಿಗೆ ವ್ಯವಸ್ಥೆ ಹೆಚ್ಚಿನ ಹೊರೆ ನೀಡಲಿದೆ.

BBMP New Property Tax: ಸದ್ಯ ದೇಶದಲ್ಲಿ ಆದಾಯ ತೆರಿಗೆ ನಿಯಮಗಳು ದಿನಕ್ಕೊಂದು ಹೊಸ ಹೊಸ ರೀತಿಯಲ್ಲಿ ಪರಿಚಯವಾಗುತ್ತಿದೆ. ITR ಸಲ್ಲಿಕೆಗೆ ಇನ್ನೆನು ಕೆಲವೇ ತಿಂಗಳು ಬಾಕಿ ಇರುವ ಕಾರಣ ಆದಾಯ ಇಲಾಖೆಯು ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.

ಇನ್ನು ಎರಡು ತಿಂಗಳಿನಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಈ ಹೊಸ ಹಣಕಾಸು ವರ್ಷದಿಂದ ಹೊಸ ಹೊಸ ರೀತಿಯ ತೆರಿಗೆ ನಿಯಮಗಳು ಕೂಡ ಜಾರಿಯಾಗಲಿದೆ. ಸದ್ಯ BBMP ಹಣಕಾಸು ವರ್ಷ ಆರಂಭಕ್ಕೂ ಮುನ್ನವೇ ಹೊಸ ತೆರಿಗೆ ನಿಯಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಬಾಡಿಗೆದಾರರಿಗೆ ಈ ಹೊಸ ನಿಯಮ ಹೆಚ್ಚಿನ ಸಮಸ್ಯೆ ಸೃಷ್ಟಿಸಲಿದೆ ಎನ್ನಬಹುದು.

BBMP Implement New Property Tax System From April 1st
Image Credit: Housing

ಏಪ್ರಿಲ್ ನಿಂದ ಹೊಸ ಆಸ್ತಿ ತೆರಿಗೆ ವ್ಯವಸ್ಥೆ ಜಾರಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ವಸತಿ ಮತ್ತು ವಾಣಿಜ್ಯ ಬಾಡಿಗೆದಾರರಿಗೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು BBPM ಯೋಜನೆ ಹಾಕಿಕೊಂಡಿದೆ. ಹೌದು BBMP ಮುಂದಿನ ಹಣಕಾಸು ವರ್ಷದಿಂದ (ಏಪ್ರಿಲ್ 1 2024) ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯು ಈಗಾಗಲೇ ವಾರ್ಷಿಕವಾಗಿ ಅಧಿಕ ಬಾಡಿಗೆ ಪಾವತಿ ಮಾಡುತ್ತಿರುವವರಿಗೆ ಆರ್ಥಿಕ ಸಮಸ್ಯೆಯನ್ನು ಉಂಟುಮಾಡಿದೆ ಎನ್ನಬಹುದು.

BBMP New Property Tax
Image Credit: The hindu

ಹೊಸ ತೆರಿಗೆ ವ್ಯವಸ್ಥೆ ಹೆಚ್ಚಿನ ಹೊರೆ ನೀಡಲಿದೆ
ಆಧಿಕ ತೆರಿಗೆ ಪಾವತಿಯು, ಆಸ್ತಿ ತೆರಿಗೆ ಪದ್ದತಿಯಲ್ಲಿ ಬಾಡಿಗೆಗೆ ಪಡೆದ ಆಸ್ತಿಗಳು ಸ್ವಯಂ ಆಕ್ರಮಿತ ವಸತಿ ಆಸ್ತಿಗಳು ಹಾಲಿ ಪಾವತಿಸುವ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ನೀಡಬೇಕಾಗುತ್ತದೆ. ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯಡಿಯಲ್ಲಿ ಮನೆಯ ಮಾಲೀಕರು ಹೆಚ್ಚು ತೆರಿಗೆ ಪಾವತಿಸಿದರೆ, ಅದರ ಪರಿಣಾಮ ಬಾಡಿಗೆದಾರರ ಮೇಲು ಬೀಳುತ್ತದೆ. ಇನ್ನು ಏಪ್ರಿಲ್ 1 2024 ರಿಂದ ಈ ಹೊಸ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿ ಮಾಡುವುದಾಗಿ BBMP ಹೇಳಿದೆ. ಹೊಸ ಹಣಕಾಸು ವರ್ಷದಿಂದ ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಹೆಚ್ಚು ಹಣವನ್ನು ಪಾವತಿಸಬೇಕಾಗಬಹುದು.

Join Nadunudi News WhatsApp Group

Join Nadunudi News WhatsApp Group