BBMP Recruitment: ಕನ್ನಡ ಮಾತನಾಡಲು ಬರುವವರಿಗೆ BBMP ಯಲ್ಲಿ ಭರ್ಜರಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ.

ನಿರುದ್ಯೋಗಿಗಳಿಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಭರ್ಜರಿ ಉದ್ಯೋಗಾವಕಾಶ

BBMP Recruitment 2024: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿದ್ದರೂ ಕೂಡ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದ ಕಾರಣ ಅದೆಷ್ಟು ಜನ ವಿದ್ಯಾವಂತರು ಕೂಡ ಉದ್ಯೋಗವಿಲ್ಲದೆ ಖಾಲಿ ಕುಳಿತುಕೊಂಡಿದ್ದಾರೆ.

ಇನ್ನು ಆಗಾಗ ವಿವಿಧ ಸಂಸ್ಥೆಗಳು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ನೀಡಲು ಕೆಲ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ನಿರುದ್ಯೋಗಿಗಳಿಗೆ ಭರ್ಜರಿ ಉದ್ಯೋಗಾವಕಾಶವನ್ನು ಘೋಷಿಸಿದೆ. ಈ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BBMP Recruitment 2024
Image Credit: Worldkannada

ಕನ್ನಡ ಮಾತನಾಡಲು ಬರುವವರಿಗೆ BBMP ಯಲ್ಲಿ ಭರ್ಜರಿ ನೇಮಕಾತಿ
ಬೃಹತ್ ಬೆಂಗಳೂರು ಮಹಾನಗರ ನಿಗಮವು ಗ್ರೂಪ್ ಡಿ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 11,307 ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಒಟ್ಟು 11,307 ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಸ್ಥಳೀಯ ಕೇಡರ್-ಪೋಸ್ಟ್‌ ಗಳು, ಕಲ್ಯಾಣ ಕರ್ನಾಟಕ (ಕೆಕೆ)-905 ಮತ್ತು ಶೇಷ-ಆಧಾರಿತ ಕೇಡರ್ (ಆರ್‌ಪಿಸಿ)-10,402 ಹುದ್ದೆಗಳಿವೆ. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ಅರ್ಹತೆಯ ಅಗತ್ಯವಿಲ್ಲ. ಕನ್ನಡ ಮಾತನಾಡಬಲ್ಲವರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷಗಳು. ಅಭ್ಯರ್ಥಿಗಳು ಭಾರತೀಯ ಪ್ರಜೆಗಳಾಗಿರಬೇಕು. ಬಿಬಿಎಂಪಿಯಲ್ಲಿ ನೇರ ಪಾವತಿ/ಕಲ್ಯಾಣ/ದಿನಗೂಲಿ ಆಧಾರದ ಮೇಲೆ ಎರಡು ವರ್ಷಕ್ಕೆ ಕಡಿಮೆಯಿಲ್ಲದಂತೆ ನಿರಂತರವಾಗಿ ಕೆಲಸ ಮಾಡಿದ ಮತ್ತು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಪಾಲಿಕೆಯಿಂದ ವೇತನ ಪಡೆಯುತ್ತಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ 17,000 ರೂ. ರಿಂದ 28,950 ರೂ. ಮಾಸಿಕ ವೇತನ ದೊರೆಯಲಿದೆ.

BBMP Recruitment 2024 Apply
Image Credit: Zeenews

ಈ ರೀತಿಯಾಗಿ ಹುದ್ದೆಗೆ ಅರ್ಜಿ ಸಲ್ಲಿಸಿ
bbmp.gov.in ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ.

Join Nadunudi News WhatsApp Group

•ಈಗ ತೆರೆಯುವ ಮುಖಪುಟದಲ್ಲಿ ಕಂಡುಬರುವ ನಾಗರಿಕ ಸೇವಕರ ಅರ್ಜಿ ನಮೂನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

•ಈಗ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ ಲೋಡ್ ಮಾಡಿ.

•ಪ್ರಿಂಟೌಟ್ ತೆಗೆದುಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅದರಲ್ಲಿ ಕೇಳಲಾದ ದಾಖಲೆಗಳನ್ನು ಲಗತ್ತಿಸಿ.

•ಭರ್ತಿ ಮಾಡಿದ ಅರ್ಜಿ ನಮೂನೆ ಎನ್.ಆರ್. ಸ್ಕ್ವೇರ್, ಬೆಂಗಳೂರು -560002, ಕರ್ನಾಟಕ ಇಲ್ಲಿ ಸಲ್ಲಿಸಿ.

BBMP Job Application
Image Credit: Thesoftcopy

Join Nadunudi News WhatsApp Group