Beer Price: ಎಣ್ಣೆ ಪ್ರಿಯರಿಗೆ ತಿಂಗಳ ಮೊದಲ ದಿನವೇ ಬೇಸರದ ಸುದ್ದಿ, ಬಿಯರ್ ಬೆಲೆಯಲ್ಲಿ ಇಷ್ಟು ಹೆಚ್ಚಳ.

ತಿಂಗಳ ಮೊದಲ ದಿನವೇ ಬಿಯರ್ ಬೆಲೆಯಲ್ಲಿ ಇಷ್ಟು ಹೆಚ್ಚಳ

Beer Price Hike From February 1st: ದೇಶದೆಲ್ಲೆಡೆ ಈಗಾಗಲೇ ಜನರು ಹಣದುಬ್ಬರತೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಜನರು ಹೆಚ್ಚಿನ ಹಣವನ್ನು ನೀಡಿ ಎಲ್ಲ ಅಗತ್ಯ ವಸ್ತುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ರಾಜ್ಯದಲ್ಲಿ ಒಂದೆಡೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಚಿಂತನೆ ನಡೆಸುತ್ತಿದೆ.

ಈ ಮೂಲಕ ಮದ್ಯ ಪ್ರಿಯರಿಗೆ ಸರ್ಕಾರ ಸಾಕಷ್ಟು ಬಾರಿ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಕಳೆದ ತಿಂಗಳಿನಲ್ಲಿ ಅಬಕಾರಿ ಇಲಾಖೆ ಬಿಯರ್ ದರ ಹೆಚ್ಚಳದ ಬಗ್ಗೆ ಚರ್ಚಿಸಿದ್ದು, ಇದೀಗ ತಿಂಗಳ ಮೊದಲ ದಿನವೇ ಬಿಯರ್ ದರ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ಇಂದಿನಿಂದ ಬಿಯರ್ ದರದಲ್ಲಿ ಇಷ್ಟು ಹೆಚ್ಚಾಗಳಲಿದೆ.

Beer Price Hike From February 1st
Image Credit: Thehindubusinessline

ಎಣ್ಣೆ ಪ್ರಿಯರಿಗೆ ತಿಂಗಳ ಮೊದಲ ದಿನವೇ ಬೇಸರದ ಸುದ್ದಿ
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಳ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಅಬಕಾರಿ ತೆರಿಗೆಯನ್ನು ಶೇ. 10 ರಷ್ಟು ಹೆಚ್ಚಳ ಮಾಡಲು ಇಲಾಖೆ ನಿರ್ಧರಿಸಿದೆ. ಈ ಮೂಲಕ ಎಣ್ಣೆ ಪ್ರಿಯರಿಗೆ ತಿಂಗಳ ಮೊದಲ ದಿನವೇ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಅಬಕಾರಿ ಇಲಾಖೆ ಆರಂಭದಲ್ಲಿ ಸುಂಕ ಹೆಚ್ಚಳದ ಕರಡನ್ನು ಪ್ರಕಟಿಸಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಿ ಇದೀಗ ಸುಂಕ ಏರಿಕೆ ಕುರಿತು ಬುಧವಾರ ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಬಿಯರ್ ಬೆಲೆಯೂ ಹೆಚ್ಚಾಗಲಿದೆ.

Beer Price Hike
Image Credit: Livemint

ಬಿಯರ್ ಬೆಲೆಯಲ್ಲಿ ಇಷ್ಟು ಹೆಚ್ಚಳ
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇ. 185 ರಿಂದ 195 ಕ್ಕೆ ಏರಿಕೆ ಮಾಡಲು ಕರ್ನಾಟಕ ಅಬಕಾರಿ ನಿಯಮಗಳು ನಿರ್ಧರಿಸಿವೆ.  ಇದಕ್ಕಾಗಿ ಕರ್ನಾಟಕ ಅಬಕಾರಿ ನಿಯಮಗಳು 2024 ರ ಕರಡನ್ನು ಪ್ರಕಟಿಸಲಾಗಿದೆ. ಅಬಕಾರಿ ತೆರಿಗೆಯನ್ನು ಶೇ. 10 ರಷ್ಟು ಹೆಚ್ಚಳ ಮಾಡಲು ಇಲಾಖೆ ನಿರ್ಧರಿಸಿದ್ದು, 650 ಮೀ.ಲಿ ಅಳತೆಯ ಪ್ರತಿ ಬಾಟಲಿ ಬಿಯರ್ ನ ದರದಲ್ಲಿ ರೂ. 5 ರಿಂದ 12 ರೂ. ರವರೆಗೆ ಹೆಚ್ಚಳವಾಗಲಿದೆ. ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳ ಎಲ್ಲ ಬಿಯರ್ ದರ ಹೆಚ್ಚಳವಾಗಲಿದೆ.

Join Nadunudi News WhatsApp Group

Join Nadunudi News WhatsApp Group