Beer Production: ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿ ಮಾಡಬೇಕು ಅಂದುಕೊಂಡವರಿಗೆ ಬೇಸರದ ಸುದ್ದಿ, ರಾಜ್ಯ ಸರ್ಕಾರದ ನಿರ್ಧಾರ

ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿ ಮಾಡುವವರಿಗೆ ಬೇಸರದ ಸುದ್ದಿ ನೀಡಿದ ರಾಜ್ಯ ಸರ್ಕಾರ

Lequire Party New Year: ಇನ್ನು ಕೆಲವೇ ದಿನದಲ್ಲಿ ಹೊಸ ವರ್ಷ ಆರಂಭ ಆಗಲಿದ್ದು,ಕೆಲವರು ಹೊಸ ವರ್ಷದ ಆಚರಣೆ ಬಹಳ ಗ್ರಾಂಡ್ ಆಗೇ ಆಚರಿಸಬೇಕು ಎಂದು ಈಗಾಗಲೇ ಪ್ಲಾನ್ ಆರಂಭಿಸಿರುತ್ತಾರೆ. ನ್ಯೂ ಇಯರ್ ಅಂದ ಕೂಡಲೇ ಯುವಕರಲ್ಲಿ ಮೊದಲು ನೆನಪಾಗುವುದು ಎಣ್ಣೆ.

ಅದರಲ್ಲೂ ಎಣ್ಣೆಗಿಂತ ಹೆಚ್ಚಾಗಿ ಬಿಯರ್ ಪ್ರಿಯರ ಸಂಖ್ಯೆ ಹೆಚ್ಚಾಗಿದ್ದು ಅಂಥವರಿಗೆ ಇಲ್ಲಿದೆ ಬಿಗ್ ಸುದ್ದಿ. ಸರಕಾರ ಬಿಯರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಮೈಸೂರಿನ 4 ಉತ್ಪಾದನಾ ಕಂಪನಿಗಳಿಗೆ ಬಿಯರ್ ಉತ್ಪಾದನೆ ಸ್ಥಗಿತ ಮಾಡಲು ಸೂಚನೆ ಕೊಟ್ಟಿದೆ. ಅಂದ್ರೆ ಅಬಕಾರಿ ಇಲಾಖೆಯಿಂದ ಒಂದು ಪಾಳಿಯಲ್ಲಿ ಬಿಯರ್ ಉತ್ಪಾದನೆ ಸ್ಥಗಿತಕ್ಕೆ ನಾಲ್ಕು ಕಂಪನಿಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ.

Beer Production Stop
Image Credit: Bajadock

ಬಿಯರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಕಾರಣ

ಬಿಯರ್ ಡಿಮ್ಯಾಂಡ್ ಹೆಚ್ಚಾಗಿದ್ದು, ಇದು ಸರಕಾರದ ಆದಾಯಕ್ಕೆ ಪೆಟ್ಟು ನೀಡುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು ಸರ್ಕಾರದ ಬೊಕ್ಕಸ ತುಂಬಿ ಕೊಳ್ಳಲು ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ. ಬಿಯರ್ ಗೆ ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯದಿಂದಲೂ ಬೇಡಿಕೆ ಸಿಕ್ಕಾಪಟ್ಟೆ ಇದೆ. ಜೊತೆಗೆ ಹೊಸ ವರ್ಷ ಕೂಡ ಹತ್ತಿರದಲ್ಲಿ ಇರೋದ್ರಿಂದ ಬಿಯರ್ ಗೆ ಡಿಮ್ಯಾಂಡ್ ಕೂಡ ಒನ್ ಟು ಡಬಲ್ ಹೆಚ್ಚಾಗಿದೆ.

ಏಕಾಏಕಿ ಉತ್ಪಾದನೆ ಕಮ್ಮಿ ಆದರೆ ಕೊರತೆ ಆಗುತ್ತದೆ. ಜನ IML ಜಾಸ್ತಿ ಪರ್ಚೆಸ್ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರವಾಗಿದೆ. ಇನ್ನೂ ಉತ್ಪಾದನೆ ಕಡಿಮೆ ಮಾಡಲು ಕಂಪನಿಗೆ ಸೂಚನೆ ಕೊಟ್ಟಿರೋ ಬಗ್ಗೆ ಅಬಕಾರಿ ಇಲಾಖೆ ಕೊಡೋ ಸಮಜಾಯಿಷಿ ಬೇರೆ. ಮೈಸೂರು ಜಿಲ್ಲೆಯಲ್ಲಿ ಅಬಕಾರಿ ಸಿಬ್ಬಂದಿ ಕೊರತೆ ಇರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

Join Nadunudi News WhatsApp Group

Beer Production Stop Latest News
Image Credit: Expatica

ಬಿಯರ್ ಡಿಮ್ಯಾಂಡ್ ಹೆಚ್ಚಾದರೆ ಸರಕಾರಕ್ಕೆ ನಷ್ಟ

ಕಳೆದ ವರ್ಷಕ್ಕಿಂತ ಬಿಯರ್ ಮಾರಾಟದಲ್ಲಿ 15% ಹೆಚ್ಚಳ ಆಗಿದ್ದು, IML ಮಾರಾಟದಲ್ಲಿ ಕೇವಲ 2 ಪರ್ಸೆಂಟ್ ಹೆಚ್ಚಳ ಆಗಿದೆ. ಸರ್ಕಾರಕ್ಕೆ ಬಿಯರ್ ಮಾರಾಟದಿಂದ ಹೆಚ್ಚಿನ ಆದಾಯ ಬರುವುದಿಲ್ಲ, IML ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತದೆ, IML ಮಾರಾಟ ಹೆಚ್ಚಳ ಮಾಡಿ ಆದಾಯ ಹೆಚ್ಚಳ ಪ್ಲಾನ್ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿರುವುದಾಗಿದೆ.

ಆದ್ರೆ ಬೆಲೆ ಏರಿಕೆಯಿಂದಾಗಿ ₹2500 ಕೋಟಿ ಹೆಚ್ಚು ಆದಾಯ ಬಂದಿದೆ. IML ಮಾರಾಟವೇ ಹೆಚ್ಚಿದರೆ ಇನ್ನೂ ಹೆಚ್ಚಿನ ಆದಾಯ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ಬಹುತೇಕ ಯುವ ಜನತೆಯ ಫೇವರಿಟ್ ಬಿಯರ್ ಆಗಿದೆ. ಉತ್ಪಾದನೆ ಕಮ್ಮಿ ಮಾಡಿದರೆ ಬಿಯರ್ ಕೊರತೆ ಉಂಟಾಗುತ್ತೆ, ಹೀಗಾಗಿ ಅನಿವಾರ್ಯವಾಗಿ IML ಮಾರಾಟವೂ ಹೆಚ್ಚಾಗುತ್ತದೆ. ಸರ್ಕಾರದ ಈ ಪ್ಲಾನ್ ಗೆ ಬಿಯರ್ ಪ್ರಿಯರು ಕಷ್ಟ ಅನುಭವಿಸಬೇಕಾಗಿದೆ.

Join Nadunudi News WhatsApp Group