ಬೆಂಗಳೂರಿನಲ್ಲಿ ಭಿಕ್ಷುಕರ ಒಂದು ದಿನದ ಆದಾಯ ಎಷ್ಟು ಗೊತ್ತಾ, ಬೆಂಗಳೂರಿನ ಕರಾಳ ದಂಧೆ ನೋಡಿ.

ಹಣವನ್ನ ಸಂಪಾಧನೆ ಮಾಡಲು ಹಲವು ಮಾರ್ಗಗಳು ಇದೆ, ಆದರೆ ಕೆಲವು ಜನರು ಒಳ್ಳೆಯ ಮಾರ್ಗವನ್ನ ಹುಡುಕಿಕೊಂಡರೆ ಇನ್ನೂ ಕೆಲವರು ಕೆಟ್ಟ ಮಾರ್ಗವನ್ನ ಹುಡುಕಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಭಿಕ್ಷೆ ಬೇಡುವುವುದು ಕೂಡ ಹಣ ಸಂಪಾಧನೆ ಮಾಡುವ ಒಂದು ಮಾರ್ಗವಾಗಿದೆ. ಹೌದು ದೇಶದಲ್ಲಿ ಲಕ್ಷಾಂತರ ಜನರು ಭಿಕ್ಷುಕರು ಇದ್ದು ಕೆಲವು ಭಿಕ್ಷುಕರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದರೆ ಇನ್ನೂ ಕೆಲವರು ಜನರು ಇದನ್ನ ದಂಧೆಯಾಗಿ ಮಾಡಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ.

ಇನ್ನು ಬೆಂಗಳೂರಿನಲ್ಲಿ ಭಿಕ್ಷೆ ಬೇಡುವುದು ಒಂದು ರೀತಿಯ ದಂಧೆಯಾಗಿದ್ದು ಅದೆಷ್ಟೋ ಜನರು ರಸ್ತೆ ಬದಿಗಳಲ್ಲಿ ಮತ್ತು ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವ ದಂಧೆಯನ್ನ ಚೂರು ಮಾಡಿದ್ದಾರೆ. ಬಾಡಿಗೆ ಮಗುವನ್ನ ಕರೆದುಕೊಂಡು ಬಂದು ಸಿಗ್ನಲ್ ಮತ್ತು ರೋಡ್ ಪಕ್ಕದಲ್ಲಿ ಅದೆಷ್ಟೋ ಮಹಿಳೆಯರು ಭಿಕ್ಷೆಯನ್ನ ಬೇಡುತ್ತಿರುವುದು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ವರದಿಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಬ್ಬ ಭಿಕ್ಷುಕ ಅಥವಾ ಭಿಕ್ಷುಕಿಯ ಒಂದು ದಿನದ ಸಂಪಾಧನೆ ಎಷ್ಟು ಎಂದು ತಿಳಿದರೆ ನಿಮಗೆ ಶಾಕ್ ಆಗುತ್ತದೆ.

beggars salary in bangalore

ಹಾಗಾದರೆ ಬೆಂಗಳೂರಿನಲ್ಲಿ ಭಿಕ್ಷುಕರ ಒಂದು ದಿನದ ಸಂಪಾಧನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬೆಂಗಳೂರಿನಲ್ಲಿ ಭಿಕ್ಷೆ ಬೇಡುವುದು ಒಂದು ರೀತಿಯ ಬಿಸಿನೆಸ್ ಆಗಿದೆ. ಹೌದು ಕೆಲವು ಮಹಿಳೆಯರು ಬಾಡಿಗೆಗೆ ಮಗುವನ್ನ ಕರೆದುಕೊಂಡು ಬಂದು ಮಗುವಿಗೆ ಊಟಕ್ಕೆ ಆಹಾರವಿಲ್ಲ, ಹಾಲು ಕೊಡಿಸಲು ಹಣವಿಲ್ಲ, ಮಗುವಿನ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಸಿಗ್ನಲ್ ಮತ್ತು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ.

ಇನ್ನು ವರದಿಗಳನ್ನು ತಿಳಿದುಬಂದಿರುವ ಮಾಹಿತಿಯ ಪ್ರಾಕಾರ ಪ್ರಸ್ತುತ ಬೆಂಗಳೂರಿಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಭಿಕ್ಷುಕರು ಇದ್ದು ಒಬ್ಬ ಭಿಕ್ಷುಕನ ಒಂದು ದಿನದ ಆದಾಯ 2 ಸಾವಿರ ರೂಪಾಯಿಗೂ ಅಧಿಕ ಅನ್ನುವುದು ತಿಳಿದುಬಂದಿದೆ. ಭಿಕ್ಷೆ ಬೇಡುವುದನ್ನ ಜನರು ಹಣವನ್ನ ಸಂಪಾಧನೆ ಮಾಡುವ ಮಾರ್ಗವನ್ನಾಗಿ ಬದಲಾಯಿಸಿಕೊಂಡಿದ್ದಾರೆ ಎಂದು ವರದಿಗಳ ಅಂಕಿ ಅಂಶದಿಂದ ತಿಳಿಯಬಹುದಾಗಿದೆ. ಜನರು ಸರ್ಕಾರಕ್ಕೆ ಇದನ್ನ ತಡೆಗಟ್ಟುವಂತೆ ಎಷ್ಟೇ ಮನವಿಯನ್ನ ಮಾಡಿದರು ಸರ್ಕಾರ ಇದರ ಕುರಿತು ಕ್ರಮ ಕೈಗೊಳ್ಳದೇ ಇರುವುದು ಬಹಳ ಬೇಸರದ ಸಂಗತಿಯಾಗಿದೆ. ಸ್ನೇಹಿತರೆ ಸ್ನೇಹಿತರೆ ಮಗುವನ್ನ ಬಳಸಿಕೊಂಡು ಭಿಕ್ಷೆ ಬೇಡುವ ಈ ದಂಧೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

beggars salary in bangalore

Join Nadunudi News WhatsApp Group