Yashaswini Card Update: BPL ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಇನ್ನೊಂದು ಗುಡ್ ನ್ಯೂಸ್, ಸಿಗಲಿದೆ 5 ಲಕ್ಷ ರೂ. ಉಚಿತ.

ಈ ಯೋಜನೆಯ ಅಡಿಯಲ್ಲಿ BPL ಕಾರ್ಡ್ ಇದ್ದವರಿಗೆ ಸಿಗಲಿದೆ 5 ಲಕ್ಷ ರೂ ತನಕ ಉಚಿತ ಚಿಕಿತ್ಸೆ

Yashaswini Card Free Treatment Facility: ರಾಜ್ಯದಲ್ಲಿ ಅನೇಕ ಆರೋಗ್ಯ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಇನ್ನು ಕೇಂದ್ರ ಸರ್ಕಾರ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮನ್ ಭಾರತ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅನುಷ್ಠಾನದ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗಾಗಿ ಕರ್ನಾಟಕ ಸರ್ಕಾರ ವಿಶೇಷ ಆರೋಗ್ಯ ಯೋಜನೆಯನ್ನು ಪರಿಚಯಿಸಿದೆ.

ಹೊಸ ಆರೋಗ್ಯ ಯೋಜನೆಯು ದೇಶದ ಬಡ ಜನರಿಗೆ ನೆರವಾಗಲಿದೆ. ವಿಶೇಷವಾಗಿ ರೈತರಿಗಾಗಿ ಈ ಆರೋಗ್ಯ ವಿಮ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಡಿ ಅರ್ಹರು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

benefits of yashaswini health card
Image Credit: Original Source

BPL ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಇನ್ನೊಂದು ಗುಡ್ ನ್ಯೂಸ್
BPL ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಇನ್ನೊಂದು ಮಹತ್ವಾಕಾಂಶೆಯ ಯೋಜನೆಯನ್ನು ಪರಿಚಯಿಸಿದೆ. ರಾಜ್ಯದಲ್ಲಿ ನೂತನವಾಗಿ “ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು” ಜಾರಿಯಾಗಿದೆ. ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ್ ಅನ್ನು ಹೊಂದಬಹುದಾಗಿದೆ. ಈ ಕಾರ್ಡ್ ಮಾಡಿಸಿಕೊಂಡರೆ ನೀವು ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಸರ್ಕಾರ ಯಶಸ್ವಿನಿ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ.

ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ. ಉಚಿತ
ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿ ಸಹಕಾರಿ ಸಂಘಗಳ ಸದಸ್ಯತ್ವ ಪಡೆದುಕೊಂಡ ಕುಟುಂಬ 5 ಲಕ್ಷ ರೂಪಾಯಿ ವರೆಗೆ ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೃದಯ, ಕಣ್ಣು, ಕಿವಿ, ಮೂಗು, ಗಂಟಲ ಸೇರಿದಂತೆ ಇನ್ನಿತರ ಅನೇಕ ಸಾಮಾನ್ಯ ಕಾಯಿಲೆಗಳಿಗೆ ಈ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

yashasvini health card for BPL card holders
Image Credit: Original Source

ರಾಜ್ಯಾದ್ಯಂತ 1650 ನೋಂದಾಯಿತ ಆಸ್ಪತ್ರೆಗಳಲ್ಲಿ ಈ ಕಾರ್ಡ್ ನ ಪ್ರಯೋಜನವನ್ನು ಪಡೆದುಕೊಳ್ಳಲು ಸರ್ಕರ ಅವಕಾಶ ನೀಡಿದೆ. ವ್ಯಕ್ತಿ ಆಸ್ಪತ್ರೆಗೆ ದಾಖಲಾದ ನಂತರ ಔಷಧಿ ವೆಚ್ಚ, ಆಸ್ಪತ್ರೆಯ ಇತರೆ ವೆಚ್ಚ, ಆಪರೇಷನ್ ವೆಚ್ಚವನ್ನು ಈ ಕಾರ್ಡ್ ನ ಮೂಲಕ ಭರಿಸಬಹುದು. ಜನರಲ್ ವಾರ್ಡ್ ನಲ್ಲಿರುವ ವ್ಯಕ್ತಿಗೆ ಮಾತ್ರ ಇದು ಲಭ್ಯವಾಗುತ್ತದೆ.

Join Nadunudi News WhatsApp Group

ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ನಿಯಮಗಳೇನು..?
•ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ.

•ನಗರಗಳಲ್ಲಿ ವಾಸಿಸುವ ಮನೆಯ ಕುಟುಂಬದ 4 ಜನ ಸದಸ್ಯರಿಗೆ 1,000 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಪ್ರತಿ ಸದಸ್ಯರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಶುಲ್ಕ ಪಾವತಿಸಬೇಕು.

•ಗ್ರಾಮಗಳಲ್ಲಿ ವಾಸಿಸುವ ಮನೆಯ ಕುಟುಂಬದ 4 ಜನ ಸದಸ್ಯರಿಗೆ 5,00 ರೂಪಾಯಿ ಹಾಗೂ ಹೆಚ್ಚುವರಿ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.

•ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮನೆಯ ಪ್ರತಿಯೊಬ್ಬರ ಫೋಟೋ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರ ಜಾತಿ ಪ್ರಮಾಣ ಪತ್ರವನ್ನು ನೀಡಿದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತದೆ.

Join Nadunudi News WhatsApp Group