Benling Scooter: ಓಲಾ ಬೈಕಿಗಿಂತ ಹೆಚ್ಚು ವೇಗ ಮತ್ತು ಹೆಚ್ಚು ಮೈಲೇಜ್, ಈ ಅಗ್ಗದ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಜನರ ಕ್ಯೂ.

ಸಿಂಗಲ್ ಚಾರ್ಜ್ ನಲ್ಲಿ 75 ಕಿಲೋಮೀಟರ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್, ಗೆ ಹೆಚ್ಚಾಗಿದೆ ಬೇಡಿಕೆ

Benling Falcon Electric Scooter: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಸ್ಟಾರ್ಟ್ ಅಪ್ ಕಂಪನಿಗಳು Electric Scooter ಗಳನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ Electric scooter ಗಳ ಬೇಡಿಕೆಗೆ ಕೊರತೆಯಿಲ್ಲ ಎನ್ನಬಹುದು. ವಿವಿಧ ಜನಪ್ರಿಯ ಕಂಪನಿಗಳಿಂದ ಹೊಡಿದು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ಮಾದರಿಯನ್ನೇ ಪರಿಚಯಿಸುತ್ತಿದೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪೆನಿಯಾದ Benling ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ.

Benling Falcon Electric Scooter Price In India
Image Credit: Original Source

Benling Falcon Electric Scooter 
ಇದೀಗ ಬೆನ್ಲಿಂಗ್ ಕಂಪನಿಯು ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿರುವ Benling Falcon Electric Scooter  ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿವಿಧ ರೀತಿಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಅಳವಡಿಸಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ. ಈ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಮೋಟಾರ್ ಅನ್ನು ಕಂಪನಿಯು BLDC ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ.

ಓಲಾ ಬೈಕಿಗಿಂತ ಹೆಚ್ಚು ವೇಗ ಮತ್ತು ಹೆಚ್ಚು ಮೈಲೇಜ್
ಈ ಸ್ಕೂಟರ್ ನ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಲಾಗಿದೆ. ಕಾಂಬಿ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 69,540 ರೂ. ಆಗಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 25 ಕಿಲೋ ಮೀಟರ್ ಗರಿಷ್ಠ ವ್ಯಾಪ್ತಿಯನ್ನು ಹೊಂದಿರುವ ಕಾರಣ ಈ ಸ್ಕೂಟರ್ ಓಡಿಸಲು ಯಾವುದೇ ಲೈಸೆನ್ಸ್ ಅಗತ್ಯ ಇರುವುದಿಲ್ಲ.

Benling Falcon Electric Scooter
Image Credit: Indiamart

ಸಿಂಗಲ್ ಚಾರ್ಜ್ ನಲ್ಲಿ 75 ಕಿಲೋಮೀಟರ್ ಮೈಲೇಜ್ ನೀಡುವ ಸ್ಕೂಟರ್
ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 60V, 30Ah ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು 250W ಶಕ್ತಿಯೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ನಲ್ಲಿ ಸಾಮಾನ್ಯ ಚಾರ್ಜರ್ ನ ಮೂಲಕ ಕೇವಲ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. ಈ ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 70 ರಿಂದ 75 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Feature Of Benling Falcon Electric Scooter
Digital Trip Meter
Remote start
Digital instrument console
Digital Speedometer
USB charging port
Anti Theft Alarm
LED lights
Smart breakdown management status
Smart Control
Pass switch
Multi riding mode

Join Nadunudi News WhatsApp Group