Bescom Rules: ಇಂತಹವರಿಗೆ ನೋಟಿಸ್ ಕಳುಹಿಸಲು ಮುಂದಾದ ಬೆಸ್ಕಾಂ

ಬೆಸ್ಕಾಂ (Bescom) ನಿಂದ ಈಗ ಈ ಸಂಬಂಧಿತ ಬಹುಮುಖ್ಯ ಮಾಹಿತಿ ತಿಳಿದು ಬಂದಿದೆ.

Bescom New Rules: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ ಪಂಚ ಗ್ಯಾರಟಿಗಳು ಒಂದೊಂದಾಗಿ ಮಾನ್ಯತೆ ಪಡೆಯುತ್ತಿದ್ದಂತೆ ಸರಕಾರದ ವರ್ಚಸ್ಸು ಒಮ್ಮಿಂದೊಮ್ಮೆಲೆ ಏರಿಕೆಯಾಗುತ್ತಾ ಇದೆ. ಆಡಳಿತಕ್ಕೆ ಬರುವ ಪೂರ್ವದಲ್ಲಿ ಒಂದೊಂದೆ ಯೋಜನೆ ಬಗ್ಗೆ ತಿಳಿಸಿದ್ದ ಸರಕಾರ ನುಡಿದಂತೆ ನಡೆಯುವ ಸರ್ವ ಕಾರ್ಯ ಕೂಡ ಮಾಡುತ್ತಿದೆ. ಹೀಗಾಗಿ ಒಂದು ವಿಧದಲ್ಲಿ ಸರಕಾರದ ಮೇಲೆ ಜನರಿಗೆ ಉತ್ತಮ ನಂಬಿಕೆ ಬಂದಿದೆ ಎಂದು ಹೇಳಬಹುದು.

ಸರಕಾರದ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ , ಶಕ್ತಿ ಯೋಜನೆಗಳು ಈಗ ಜನರಿಗೆ ಉಪಯುಕ್ತಕರವಾಗಿ ಕೆಲಸ ಮಾಡುತ್ತಿದ್ದರು ಈ ಎಲ್ಲ ಯೋಜನೆಗೆಳಿಗೆ ಲಭ್ಯವಾಗಬೇಕಾದ ಅನುದಾನ ಸೂಕ್ತ ಕಾಲಕ್ಕೆ ಲಭ್ಯವಾಗುತ್ತಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ‌. ಗೃಹಜ್ಯೋತಿ ವಿದ್ಯುತ್ ಬಿಲ್ ಅನೇಕ ಕಡೆ ಬಾಕಿಇದೆ. ಬೆಸ್ಕಾಂ (Bescom) ನಿಂದ ಈಗ ಈ ಸಂಬಂಧಿತ ಬಹುಮುಖ್ಯ ಮಾಹಿತಿ ತಿಳಿದು ಬಂದಿದೆ.

Bescom Rules
Image Source: TV9 Kannada

ಎಲ್ಲಿ ಈ ಚರ್ಚೆ
ಈ ಒಂದು ವಿಚಾರ ಈಗ ಮುಖ್ಯ ಚರ್ಚೆಗೆ ಕಾರಣವಾಗಿದ್ದು ತುಮಕೂರು ಜಿಲ್ಲೆಯಲ್ಲಿ ಎನ್ನಬಹುದು. ಸರಕಾರದ ನಾನಾ ಇಲಾಖೆಯಿಂದ ನಾನಾಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭಾಕಿ ಮೊತ್ತ ಬರಬೇಕಿದ್ದು 760ಕೋಟಿ ರೂ. ವಿದ್ಯುತ್ ಬಿಲ್ (curent bill) ಬಾಕಿ ಉಳಿದಿದೆ ಎಂದು ಹೇಳಬಹುದು. ಇದುವರೆಗೆ ಸರಕಾರಿ ಬಿಲ್ ಬಾಕಿ ಇದ್ದ ಅದಷ್ಟು ಲೆಕ್ಕಾಚಾರ ಇದೀಗ ಒಂದೊಂದಾಗೆ ಹೊರಬರುತ್ತಿದೆ. ಈ ಮೂಲಕ 15ರಿಂದ 20 ವರ್ಷಗಳ ವರೆಗೂ ಕೂಡ ಇದೇ ಬಾಕಿ ಮೊತ್ತ ಇಂದಿಗೂ ಪಾವತಿ ಆಗಿಲ್ಲ ಎಂಬುದು ತಿಳಿದುಬಂದಿದೆ.

ಸರಕಾರಿ ಇಲಾಖೆಗೆ ನೋಟಿಸ್
ವಿದ್ಯುತ್ ಬಿಲ್ ಎಲ್ಲರೂ ಪಾವತಿ ಮಾಡಲೇ ಬೇಕು ಸರಕಾರಿ ಇಲಖೆ ಎಂದು ಬಾಕಿ ಮೊತ್ತ ಬಿಡುವ ಸಂಪ್ರದಾಯ ಎಲ್ಲಿಯೂ ಇಲ್ಲ ಎನ್ನಬಹುದು. 20ವರ್ಷದಷ್ಟು ವಿದ್ಯುತ್ ಮೊತ್ತ ಬಾಕಿ ಇರಿಸಿದ್ದ ತುಮಕೂರು ಭಾಗದದಲ್ಲಿ ಇದೀಗ ಸರಕಾರಿ ಕಚೇರಿಗಳಿಗೆ ಹಳೆ ಮೊತ್ತ ಕಟ್ಟಲು ನೋಟಿಸ್ ಕೂಡ ಬಂದಿದೆ. 760ಕೋಟಿ ಬಾಕಿ ಇದ್ದು ಕೂಡಲೇ ಬಾಕಿ ಮೊತ್ತ ಕಟ್ಟುವಂತೆ ತಿಳಿಸಲಾಗಿದೆ.

Bescom Rules
Image Source: India Today

ಸಂಪರ್ಕ ಕಡಿತ
ಈ ಒಂದು ಬಾಕಿ ಮೊತ್ತದ ಪಾವತಿಗೂ ನಿಗಧಿತ ಗಡುವು ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ , ಪಂಚಾಯತ್ ರಾಜ್, ಶಿಕ್ಷಣ, ಕಂದಾಯ, ವಾಣಿಜ್ಯ, ಸಣ್ಣ ನೀರಾವರಿ, ನಗರಾಭಿವೃದ್ಧಿ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇತ್ಯಾದಿ ಸರಕಾರಿ ಕಚೇರಿಗಳು ಇನ್ನು 15 ದಿನಗಳ ಒಳಗೆ ಬಾಕಿ ಮೊತ್ತ ಪಾವತಿ ಮಾಡದ ಸರಕಾರಿ ಸ್ವಾಮ್ಯ ಕಚೇರಿಗಳ ವಿರುದ್ಧ ವಿದ್ಯುತ್ ಕಡಿತ ನೀತಿ ಅನುಸರಿಸಲಾಗುತ್ತದೆ

Join Nadunudi News WhatsApp Group

Join Nadunudi News WhatsApp Group