FD Interest 2024: ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳ ಹೆಸರು ಹೇಳಿದ RBI, FD ಇಡಲು ಈ ಬ್ಯಾಂಕುಗಳು ಬೆಸ್ಟ್.

RBI ಪ್ರಕಾರ ಈ ಬ್ಯಾಂಕುಗಳಲ್ಲಿ FD ಹಣ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ

FD Interest Rate Information: ಜನಸಾಮಾನ್ಯರ ಹಣದ ಉಳಿತಾಯದ ಆಯ್ಕೆಗೆ ಬ್ಯಾಂಕ್ ನೀಡುವ FD ಆಯ್ಕೆ ಉತ್ತಮ ಎನ್ನಬಹುದು. ಈ ಸ್ಥಿರ ಠೇವಣಿಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿರುತ್ತದೆ. ಬ್ಯಾಂಕ್ ನ FD ಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.

ಈ ಹೂಡಿಕೆಯಲ್ಲಿ ನೀವು ನಷ್ಟದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ನೀವು ಹಣದ ಉಳಿತಾಯ ಮಾಡಲು ಬಯಸಿದರೆ ಬ್ಯಾಂಕುಗಳಲ್ಲಿ FD ಇಡುವುದು ಉತ್ತಮ. ದೇಶದ ಈ ಎರಡು ಜನಪ್ರಿಯ ಬ್ಯಾಂಕ್ ಗಳು ಗ್ರಾಹಕರಿಗೆ FD ಮೇಲೆ ವಿಶೇಷ ಬಡ್ಡಿದರವನ್ನು ನೀಡುತ್ತಿದೆ. ನೀವು FD ಇಡುವ ಯೋಜನೆಯಲ್ಲಿದ್ದರೆ ಈ ಲೇಖನವನ್ನು ಓದುವ ಮೂಲಕ ಯಾವ ಬ್ಯಾಂಕ್ FD ಇಡಲು ಸೂಕ್ತ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ICICI Bank FD Rate
Image Credit: Moneycontrol

FD ಇಡಲು ಈ ಬ್ಯಾಂಕುಗಳು ಬೆಸ್ಟ್
ICICI Bank FD Rate
ICICI ಬ್ಯಾಂಕ್ ಈಗ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ 7 ದಿನಗಳಿಂದ 14 ದಿನಗಳು ಮತ್ತು 15 ರಿಂದ 29 ದಿನಗಳ FD ಗಳ ಮೇಲೆ ಶೇಕಡಾ 4.75 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದು 30 ದಿನಗಳಿಂದ 45 ದಿನಗಳ FD ಮೇಲೆ 5.50 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ಗ್ರಾಹಕರು 46 ದಿನಗಳಿಂದ 60 ದಿನಗಳ FD ಮೇಲೆ 5.75 ಪ್ರತಿಶತ ಬಡ್ಡಿಯನ್ನು ಪಡೆಯುತ್ತಿದ್ದಾರೆ. 61 ದಿನಗಳಿಂದ 90 ದಿನಗಳ FD ಮೇಲೆ 6 ಪ್ರತಿಶತ ಬಡ್ಡಿಯನ್ನು ನೀಡುತ್ತದೆ.

ಇನ್ನು 91 ದಿನಗಳಿಂದ 120 ದಿನಗಳವರೆಗೆ FD ಮೇಲೆ 6.50 ಪ್ರತಿಶತ, 1185 ದಿನಗಳಿಂದ 210 ದಿನಗಳವರೆಗೆ ಮತ್ತು 211 ದಿನಗಳಿಂದ 270 ದಿನಗಳವರೆಗೆ 6.75ರಷ್ಟು ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ. ಬ್ಯಾಂಕ್ 271 ದಿನಗಳಿಂದ 289 ದಿನಗಳ ಎಫ್‌ಡಿಗೆ ಶೇಕಡಾ 6.85 ಬಡ್ಡಿಯನ್ನು ನೀಡುತ್ತಿದೆ. ICICI ಬ್ಯಾಂಕ್ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ 1 ವರ್ಷದಿಂದ 389 ದಿನಗಳ FD ಮೇಲೆ 7.40 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.

Federal Bank FD Rate
Image Credit: Equitypandit

Federal Bank FD Rate
ನೀವು ಫೆಡರಲ್ ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ FD ಪಡೆಯಬಹುದು. ಬ್ಯಾಂಕ್ 500 ದಿನಗಳ ಬಡ್ಡಿ ದರವನ್ನು ಸಾಮಾನ್ಯ ಜನರಿಗೆ ಶೇಕಡಾ 7.50 ಕ್ಕೆ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 8 ಕ್ಕೆ ಹೆಚ್ಚಿಸಿದೆ. ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ. 0.50 ಹೆಚ್ಚುವರಿ ಬಡ್ಡಿ ನೀಡುತ್ತಿದೆ.

Join Nadunudi News WhatsApp Group

ಫೆಡರಲ್ ಬ್ಯಾಂಕ್ 7 ರಿಂದ 29 ದಿನಗಳಲ್ಲಿ ಪಕ್ವವಾಗುವ FD ಗಳ ಮೇಲೆ ಗ್ರಾಹಕರಿಗೆ 3 ಪ್ರತಿಶತ ಬಡ್ಡಿಯನ್ನು ಮತ್ತು 30 ರಿಂದ 45 ದಿನಗಳಲ್ಲಿ ಪಕ್ವವಾಗುವ FD ಗಳಿಗೆ 3.25 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಗ್ರಾಹಕರು 46 ದಿನಗಳಿಂದ 60 ದಿನಗಳವರೆಗೆ ಪಕ್ವವಾಗುವ FD ಗಳ ಮೇಲೆ 4.00 ಪ್ರತಿಶತ ವಾರ್ಷಿಕ ಬಡ್ಡಿಯನ್ನು ಮತ್ತು 61 ದಿನಗಳಿಂದ 119 ದಿನಗಳಲ್ಲಿ ಪಕ್ವವಾಗುವ FD ಗಳ ಮೇಲೆ 4.75 ಪ್ರತಿಶತ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ.

Join Nadunudi News WhatsApp Group