Fixed Deposit: 10% ಸಮೀಪ ಬಡ್ಡಿ ಕೊಡುತ್ತಿದೆ ಈ 5 ಬ್ಯಾಂಕುಗಳು, ಸಾಲುಗಟ್ಟಿ ನಿಂತ ಜನ

ನೀವು ದುಡಿದ ಹಣವನ್ನು ಎಫ್ ಡಿ ಮಾಡಲು ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ನ ಬಗ್ಗೆ ತಿಳಿಯಿರಿ.

Fixed Deposit Interest Rate: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಳೆದ ಒಂದು ವರ್ಷದಲ್ಲಿ ರೆಪೋ ದರಗಳಲ್ಲಿ ಶೇಕಡಾ 2 .5 ರಷ್ಟು ಏರಿಕೆ ಮಾಡಿದೆ. ಇದರ ಪರಿಣಾಮ ಬಹುತೇಕ ಸರ್ಕಾರೀ ಬ್ಯಾಂಕ್ ಗಳು ಖಾಸಗಿ ಬ್ಯಾಂಕ್ ಗಳು ಹಾಗು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿವಿಧ ಸಾಲಗಳ ಬಡ್ಡಿ ದರವನ್ನು ಏರಿಕೆ ಮಾಡಿವೆ. ಇದರ ಜೊತೆಗೆ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರಗಳನ್ನು ಸಹ ಏರಿಕೆ ಮಾಡಿವೆ.

ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳ ವಿವರ
ನೀವು ದುಡಿದ ಹಣವನ್ನು ಎಫ್ ಡಿ ಮಾಡಬೇಕು ಅಂದುಕೊಂಡಿದ್ದರೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ನ ವಿವರವನ್ನು ತಿಳಿದುಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ವೇಗವಾಗಿ ಹೆಚ್ಚಿಸಿದೆ. ಬ್ಯಾಂಕ್ ಗ್ರಾಹಕರು ಉಳಿತಾಯ ಖಾತೆಯಿಂದ ಎಫ್ ಡಿ ಗೆ ಹೆಚ್ಚಿನ ಬಡ್ಡಿಯ ರೂಪದಲ್ಲಿ ಇದರ ಲಾಭವನ್ನು ಪಡೆಯುತ್ತಿದ್ದಾರೆ.

Details of banks that offer high interest
Image Credit: Justdial

ರೆಪೋ ದರದ ಏರಿಕೆಯಿಂದ ಜನರು ಒಂದು ಕಡೆ ನಷ್ಟ ಅನುಭವಿಸಿ ಮತ್ತೊಂದೆಡೆ ಲಾಭ ಪಡೆದಿದ್ದಾರೆ. ಇನ್ನು ಬ್ಯಾಂಕ್ ಗಳ ಉಳಿತಾಯ ಖಾತೆಯಿಂದ ಎಫ್ ಡಿ ಗಳ ಮೇಲಿನ ಬಡ್ಡಿ ಹೆಚ್ಚಾಯಿತು.

ರೆಪೋ ದರದಲ್ಲಿ ನಿರಂತರ ಹೆಚ್ಚಳದ ಪರಿಣಾಮವೇ ಮತ್ತೊಮ್ಮೆ ಬ್ಯಾಂಕ್ ಗಳು ಎಫ್ ಡಿ ಗಳ ಮೇಲೆ ಶೇಕಡಾ 9 ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡಲು ಪ್ರಾರಂಭಿಸಿದೆ. ಈ ಹೆಚ್ಚಿನ ಬಡ್ಡಿದರವು ಎಲ್ಲಾ ಗ್ರಾಹಕರಿಗೆ ಅನ್ವಯಿಸುವುದಿಲ್ಲ. 9 ಕ್ಕಿಂತ ಹೆಚ್ಚಿನ ಬಡ್ಡಿಯ ಲಾಭವು ಹಿರಿಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 181 ರಿಂದ 201 ದಿನಗಳ ಮೆಚ್ಯುರಿಟಿಯಲ್ಲಿ ಶೇಕಡಾ 9.25 ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ. ಇನ್ನು 1001 ದಿನಗಳ ಮುಕ್ತಾಯದಲ್ಲಿ ಎಫ್ ಡಿ ಮೇಲಿನ ಬಡ್ಡಿ ದರವು 9 .59 ಪ್ರತಿಶತದಷ್ಟಿರುತ್ತದೆ.

Join Nadunudi News WhatsApp Group

Details of banks that offer high interest
Image Credit: Justdial

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಹಿರಿಯ ನಾಗರಿಕ ಗ್ರಾಹಕರ 1000 ದಿನಗಳ ಅವಧಿಯ ಎಫ್ ಡಿ ಮೇಲೆ ಶೇಕಡಾ 9.11 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಹಿರಿಯ ನಾಗರಿಕರಿಗೆ ಶೇಕಡಾ 9 ಕಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ. ಈ ಬಡ್ಡಿ ದರವು 366 ರಿಂದ 499 ದಿನಗಳು, 501 ರಿಂದ 730 ದಿನಗಳು ಮತ್ತು 500 ದಿನಗಳ ಅವಧಿಯ ಎಫ್‌ಡಿ ಗಳಲ್ಲಿ ಲಭ್ಯವಿದೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸುಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 2 ವರ್ಷಗಳ ಮುಕ್ತಾಯದೊಂದಿಗೆ ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ 9.6 ಬಡ್ಡಿಯನ್ನು ನೀಡುತ್ತಿದೆ. 999 ದಿನಗಳ ಮೆಚ್ಯೂರಿಟಿಯಲ್ಲಿ 9 ಪ್ರತಿಶತ ಬಡ್ಡಿಯನ್ನು ಪಡೆಯಲಾಗುತ್ತಿದೆ.

Details of banks that offer high interest
Image Credit: Businesstoday

ಇ ಎಸ್ ಎ ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಇ ಎಸ್ ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ರಿಂದ 3 ವರ್ಷಗಳ ಅವಧಿಯ ಎಫ್ ಡಿ ಗಳಲ್ಲಿ ಹಿರಿಯ ನಾಗರಿಕರಿಗೆ 9% ಬಡ್ಡಿಯನ್ನು ನೀಡುತ್ತಿದೆ.

Join Nadunudi News WhatsApp Group