Budget Bike: 2 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಸಿಗಲಿದೆ ಈ ಟಾಪ್ 3 ಬೈಕ್, ಇಲ್ಲಿದೆ ಡಿಟೈಲ್ಸ್.

2 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಸಿಗಲಿದೆ ಈ ಟಾಪ್ 3 ಬೈಕ್.

Best Bike Under 2 lakh: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Petrol ಬೆಲೆಯಂತೂ ಬಾರಿ ಹೆಚ್ಚುತ್ತಿದೆ. ಹೀಗಾಗಿ ಜನರು ಹೆಚ್ಚಿನ Mileage ನೀಡುವಂತಹ ಹಾಗೂ ಬಜೆಟ್ ಬೆಲೆಯಲ್ಲಿ ಸಿಗುವಂತಹ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ಇನ್ನು ಭಾರತೀಯ ಆಟೋ ವಲಯದ ಕಂಪನಿಗಳು ಹೆಚ್ಚಿನ Mileage ನೀಡುವ Bike ಗಳು ಕಡಿಮೆ ಬೆಲೆಯಲ್ಲಿ ಪರಿಚಯಿಸುತ್ತ ಇರುತ್ತದೆ.

ನೀವು ಮಾರುಕಟ್ಟೆಯಲ್ಲಿ ಕೇವಲ 2 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಬೈಕ್ ಗಳನ್ನೂ ಖರೀದಿಸಬಹುದಾಗಿದೆ. ಅಂತಹ ಅನೇಕ ಬೈಕ್ ಗಳು ಮರುಕಟ್ಟೆಯ್ಲಲಿ ಲಭ್ಯವಿದೆ. ನೀವು ಹೊಸ ಬೈಕ್ ಅನ್ನು ಖರೀದಿಸುವ ಬಗ್ಗೆ ಯೋಜನೆ ಹೂಡಿದ್ದರೆ ನಾವೀಗ 2 ಲಕ್ಷಕ್ಕೂ ಕಡಿಮೆ ಬೆಲೆಗೆ ಸಿಗುವ ಹೆಚ್ಚಿನ Mileage ನೀಡುವ ಬೈಕ್ ಗಳ ಬಗ್ಗೆ ಹೇಳಲಿದ್ದೇವೆ.

Hero Mavrick 440 Bike
Image Credit: Economic Times

2 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಸಿಗಲಿದೆ ಈ ಟಾಪ್ 3 ಬೈಕ್
•Hero Mavrick 440 Bike
2 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೈಕ್ ಗಳ ಪಟ್ಟಿಯಲ್ಲಿ ಹೀರೋ ಮಾವ್ರಿಕ್ 440 ಮೊದಲ ಸ್ಥಾನದಲ್ಲಿದೆ. ಈ ಬೈಕ್ 440 ಸಿಸಿ ಎಂಜಿನ್ ಹೊಂದಿದೆ. ಇದು ಗರಿಷ್ಠ 27bhp ಶಕ್ತಿಯನ್ನು ಮತ್ತು 36Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಉತ್ತಮ ಬ್ರೇಕಿಂಗ್‌ ಗಾಗಿ, ಇದು ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಈ ಬೈಕ್ ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಬರುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆಯನ್ನು 1.99 ಲಕ್ಷ ರೂ.ಗಳಲ್ಲಿ ಇರಿಸಲಾಗಿದೆ.

Bajaj Pulsar NS400Z Bike
Image Credit: Bike India

•Bajaj Pulsar NS400Z Bike
ನೀವು ಬಜಾಜ್ ಪಲ್ಸರ್ NS400Z ಬೈಕ್ ಅನ್ನು ಸಹ ಖರೀದಿಸಬಹುದು. ಇದನ್ನು ಸ್ವಲ್ಪ ಸಮಯದ ಹಿಂದೆ ಪರಿಚಯಿಸಲಾಗಿದೆ. ಈ ಬೈಕ್‌ ನಲ್ಲಿ ನೀವು ಸ್ಪೋರ್ಟಿ ವಿನ್ಯಾಸವನ್ನು ಪಡೆಯುತ್ತೀರಿ. Bajaj Pulsar NS400Z Bike 373.27 ಸಿಸಿ ಎಂಜಿನ್ ಹೊಂದಿದೆ. ಇದು 40Ps ಪವರ್ ಮತ್ತು 35Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಬಳಸಲಾಗಿದೆ. ಬ್ರೇಕಿಂಗ್‌ ಗಾಗಿ ನೀವು ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆಯುತ್ತೀರಿ. ಈ ಬೈಕ್ 1.85 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.

•TVS Ronin Bike
ಟಿವಿಎಸ್ ರೋನಿನ್ ಕಂಪನಿಯ ಜನಪ್ರಿಯ ಬೈಕ್ ಆಗಿದೆ. ಇದರಲ್ಲಿ 225.9ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಬೈಕ್‌ ನ ಎಂಜಿನ್ 20.40Ps ಪವರ್ ಮತ್ತು 19.93Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಗಂಟೆಗೆ 120 ಕಿಮೀ ವೇಗದಲ್ಲಿ ಓದುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ ಮಾರುಕಟ್ಟೆಯಲ್ಲಿ 1.49 ಲಕ್ಷದ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

TVS Ronin Bike
Image Credit: Bikedekho

Join Nadunudi News WhatsApp Group